11 ವರ್ಷಗಳಲ್ಲಿ ಮೋದಿ ಸರ್ಕಾರ ಜನ ಸಾಮಾನ್ಯರ ಅಭಿವೃದ್ಧಿಗೆ ಶ್ರಮಿಸಿದೆ: ಸಂಸದ‌ ಬಿವೈ ರಾಘವೇಂದ್ರ

ಶಿಕಾರಿಪುರ: ಶಿಕಾರಿಪುರದ ಕಪ್ಪನಹಳ್ಳಿ ಮತ್ತು ಹೊಸೂರು ಮಹಾಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ಬಿವೈ ರಾಘವೇಂದ್ರ ಉದ್ಘಾಟಿಸಿ ಮಾತಮಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಆಡಳಿತದ ಚುಕ್ಕಾಣಿ ಹಿಡಿದು 11ನೇ ವಸಂತಕ್ಕೆ ದಾಪುಗಾಲು ಇಟ್ಟಿರುವ ಈ ಐತಿಹಾಸಿಕ ಕ್ಷಣವನ್ನು ಮತದಾರರ ನಡುವೆ ಇನ್ನಷ್ಟು ಸಾಕ್ಷಿಕರಿಸಲು ಭಾರತೀಯ ಜನತಾ ಪಕ್ಷ ದೇಶದಾದ್ಯಂತ ಹಮ್ಮಿಕೊಂಡಿರುವ ಅನೇಕ ಅಭಿಯಾನಗಳಲ್ಲಿ ಒಂದಾಗಿರುವ “ವಿಕಸಿತ ಭಾರತ” ಅಭಿಯಾನದ ಭಾಗವಾಗಿ ಇಂದು ತಾಲ್ಲೂಕು ಬಿಜೆಪಿ ಘಟಕ ವಿವಿಧ ಕಾರ್ಯಕ್ರಮವನ್ನು ರೂಪಿಸಿದೆ ಎಂದರು. […]

ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧಯುವ ಕಾಂಗ್ರೆಸ್ ಪ್ರತಿಭಟನೆ..!

ಶಿಕಾರಿಪುರ: ಪಟ್ಟಣದ ತಾಲೂಕು ಕಚೇರಿಯರು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಎನ್ ಡಿಎ ಸರ್ಕಾರದ ವಿರುದ್ಧ ಯುವ ಕಾಂಗ್ರಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸಿಲ್ದಾರ್ ಮನವಿ ಸಲ್ಲಿಸಲಾಗಿದೆ. ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಮಾತನಾಡಿ ರೈತರ ಬೆಳೆಗಳಿಗೆ ವಿತರಿಸುವ ರಾಸಾಯನಿಕ ರಸಗೊಬ್ಬರಗಳ ಬೆಲೆಯನ್ನು ಕೇಂದ್ರ‌ ಸರ್ಕಾರ ಹೆಚ್ಚಳ ಮಾಡಿದ್ದು ಯುವ ಕಾಂಗ್ರೆಸ್ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು. ಕೇಂದ್ರ ಸರ್ಕಾರ ಅಚ್ಚದಿನ್ ಆಯೇಗಾ ಎಂದು ಹೇಳಿಕೊಂಡು ರೈತರಿಗೆ ಮೋಸ ಮಾಡುತ್ತಿದೆ ಕಳೆದ […]

ಬಿಜೆಪಿ ಕಾರ್ಯಕರ್ತರಿಂದ ಸಚಿವ ಮಧು ಬಂಗಾರಪ್ಪರಿಗೆ ಮುತ್ತಿಗೆ ಹಾಕಲಾಗುವುದು :ಹುಲ್ಮಾರ್ ಮಹೇಶ್

ಶಿಕಾರಿಪುರ: ಜಿಲ್ಲಾ‌ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ‌ನವರ ಬಿವೈ ರಾಘವೇಂದ್ರ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದಾರೆ. ಇದೆ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಸಚಿವ ಮಧು ಬಂಗಾರಪ್ಪ‌ ಅವರಿಗೆ ಬಿಜೆಪಿ ಕಾರ್ಯಕರ್ತರಿಂದ ಘೇರವ್ ಹಾಕಲಾಗುವುದು ಎಂದು ಬಿಜೆಪಿ ಮುಖಂಡ ಮಹೇಶ್ ಹುಲ್ಮಾರ್ ತಿಳಿಸಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆಗಳು ನಷ್ಟವಾಗಿದೆ ರೈತರ ಸಮಸ್ಯೆಗಳ ಬಗ್ಗೆ‌ ಮಾತನಾಡಿ ಅಭಿವೃದ್ಧಿ ಕಡೆಗೆ ಗಮನ‌ ನೀಡಿ ಸಂಸದರು ಸಹಕಾರ ನೀಡುತ್ತಾರೆ ಎಂದರು‌.ಶಿವಮೊಗ್ಗದಲ್ಲಿ ಸಚಿವರ […]

ಶಿಕಾರಿಪುರ ಗಾಂಜಾ ಮಾರಟ ಆರೋಪಿಗಳಿಗೆ ಕಠಿಣ ಕಾರಗೃಹ ಶಿಕ್ಷೆ..!

ಶಿಕಾರಿಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರ ಗುಂಡಿ ಏರಿಯಾದಲ್ಲಿ,ದಿನಾಂಕಃ 05-12-2021 ರಂದು ಮಾದಕ ದ್ರವ್ಯ ಗಾಂಜಾ ಮಾರಾಟ ಮಾಡುತ್ತಿದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಪಿಐ ಗುರುರಾಜ್ ಮತ್ತು ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಆರೋಪಿತರಾದ ಯಾಸಿರ್ ಪಾಷಾ ಹಾಗೂ ಶಹಜಾನ್ @ ಸಾನಿಯಾ ಬೇಗಂ* ರವರುಗಳ ವಿರುದ್ಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0113/2021 ಕಲಂ 8(c), 20 (b) (II)(B), NDPS Act ರೀತ್ಯಾ ಪ್ರಕರಣ […]

ಶಿಕಾರಿಪುರ: ತೋಟಗಾರಿಕೆ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ

ಶಿವಮೊಗ್ಗ: ಶಿಕಾರಿಪುರ ತೋಟಗಾರಿಕೆ ಇಲಾಖೆಯು 2025-26ನೇ ಸಾಲಿನಲ್ಲಿ ವಿವಿಧ ಯೋಜನೆಯಡಿ ಸಹಾಯಧನ ಪಡೆದುಕೊಳ್ಳಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದ್ದು, ರೈತರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಂಗಾಂಶ ಬಾಳೆ, ತರಕಾರಿ, ಹೂ ಬೆಳೆ, ಕಾಳುಮೆಣಸು ಪ್ರದೇಶ ವಿಸ್ತರಣೆ, ಕೃಷಿಹೊಂಡ, ಕಳೆ ಚಾಪೆ (Weed Mat) ಟ್ರ‍್ಯಾಕ್ಟರ್ (20 ಪಿಟಿಓ), ಕೃಷಿಹೊಂಡ, ಸಮಗ್ರ ಪೀಡೆ ನಿರ್ವಹಣೆ ಮತ್ತು ರಾಜ್ಯದೊಳಗೆ ಹಮ್ಮಿಕೊಳ್ಳುವ ತರಬೇತಿ ಕಾರ್ಯಕ್ರಮಗಳಿಗೆ […]

ಪೌರ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ ..!

ಶಿಕಾರಿಪುರ: ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಪೌರ ನೌಕರ ಸಂಘದಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ನಡೆಸಿದ್ದಾರೆ. ಈ ವೇಳೆ ತಾಲೂಕ್ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರಸಾದ್ ಮಾತನಾಡಿ ಪೌರ ಕಾರ್ಮಿಕರು ಹಾಗೂ ಪೌರ ನೌಕರರು ಪುರಸಭೆ ಮುಂಭಾಗದ ಹೊರ ಗುತ್ತಿಗೆ ಪದ್ಧತಿ ಸ್ಥಗಿತಗೊಳಿಸಿ, ಪೌರ ಕಾರ್ಮಿಕರನ್ನು, ನೌಕರರನ್ನು ಕಾಯಂಗೊಳಿಸಬೇಕು. ಜೀವನ ಭದ್ರತೆ ಇಲ್ಲದೆ, ಅನೇಕ ವರ್ಷಗಳಿಂದಲೂ ಪೌರ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲರನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಇಲ್ಲದಿದ್ದರೆ, ಮುಷ್ಕರ […]

ಉಪನೋಂದಣಿ ಕಚೇರಿ 2ನೇ ಮತ್ತು 4ನೇ ಶನಿವಾರ ಮತ್ತು ಭಾನುವಾರದಂದು ಕಾರ್ಯನಿರ್ವಹಣೆ..!

ಶಿವಮೊಗ್ಗ: ಜೂನ್ ಮಾಹೆಯಲ್ಲಿ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ ಶಿವಮೊಗ್ಗ ಉಪನೋಂದಣಿ ಕಚೇರಿ ಜೂ. 01, ತೀರ್ಥಹಳ್ಳಿ ಉಪನೋಂದಣಿ ಕಚೇರಿ ಜೂ.08, ಶಿಕಾರಿಪುರ ಉಪನೋಂದಣಿ ಕಚೇರಿ ಜೂ.14, ಸೊರಬ ಉಪನೋಂದಣಿ ಕಚೇರಿ ಜೂ.15, ಸಾಗರ ಉಪನೋಂದಣಿ ಕಚೇರಿ ಜೂ.22, ಭದ್ರಾವತಿ ಉಪನೋಂದಣಿ ಕಚೇರಿ ಜೂ.28 ಹಾಗೂ ಹೊಸನಗರ ಉಪನೋಂದಣಿ ಕಚೇರಿ ಜೂ.29 ರಂದು ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಶಿಕಾರಿಪುರ ತಾಲೂಕಿ‌‌ನ ಎರಡು ಗ್ರಾಮ ಪಂಚಾಯತ್ ಉಪ ಚುನಾವಣೆ ಫಲಿತಾಂಶ ಪ್ರಕಟ..!

ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಮತ್ತು ಬಳ್ಳಿಗಾವಿ ಗ್ರಾಮ ಪಂಚಾಯತಿ ತಲಾ‌ 1 ಕ್ಷೇತ್ರಕ್ಕೆ ಮೆ.25 ರಂದು ಉಪ ಚುನಾವಣೆ ನಡೆದಿದ್ದು ಅದರ ಫಲಿತಾಂಶ ಇಂದು ಪ್ರಕಟವಾಗಿದೆ‌. ಅಂಬಾರಗೊಪ್ಪ ಗ್ರಾಮ ಪಂಚಾಯತಿ ಒಂದು ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ 4 ಜನ ಅಭ್ಯರ್ಥಿಗಳು ಸ್ಪರ್ಧೆ ನಡೆಸಿದ್ದು ಕಾಂಗ್ರೆಸ್ ಬೆಂಬಲಿತ ಮಂಜುನಾಯ್ಕ್ ಅವರು 216 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದಾರೆ. ಸುರೇಶ್ ನಾಯ್ಕ್ 77 ಮತ್ತು ಹಾಗೂ ರಘುನಾಯ್ಕ್ 74 ದಯಾನಂದನಾಯ್ಕ್ 23 ಮತಗಳನ್ನು ಪಡೆದುಕೊಂಡಿದ್ದಾರೆ. ಬಳ್ಳಿಗಾವಿ ಗ್ರಾಮ ಪಂಚಾಯತಿ ಮಳ್ಳೂರು […]

ಸರ್ಕಾರದ ಎರಡು ವರ್ಷದಲ್ಲಿ ಅತ್ಯುತ್ತಮ ಕಾರ್ಯ: ಸಚಿವ ಮಧು ಬಂಗಾರಪ್ಪ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ: ದರ್ಶನ್ ಉಳ್ಳಿ

ಶಿಕಾರಿಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರ ಪರ ಜನಸಾಮಾನ್ಯರ ಪರವಾದ‌ ಆಡಳಿತ ನೀಡಿದೆ‌ ಜೊತೆ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಅವರು ಎರಡು ವರ್ಷದಲ್ಲಿ ಶಿಕ್ಷಣ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಇತಿಹಾಸದಲ್ಲಿ 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಮೂಲಕ ಇದುವರೆಗೂ ಯಾವ ಸಚಿವರು ಮಾಡದೇ ಇರುವ ಕೆಲಸವನ್ನು ಮಾಡಿದ್ದಾರೆ‌. 13 ಸಾವಿರ ಕಾಯಂ ಶಿಕ್ಷಕರ ನೇಮಕಾತಿ,ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಶಿಕ್ಷಕರ ನೇಮಕ ಮುಂದಿನ ದಿನಗಳಲ್ಲಿ 71 ಸಾವಿರ ಶಿಕ್ಷಕರ […]

ಶಿಕಾರಿಪುರ: ಎಸ್ಎಸ್ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಉಚಿತ ಕಾರ್ಯಾಗಾರ..!

ಶಿಕಾರಿಪುರ: ಭಾರತೀಯ ವಿದ್ಯಾರ್ಥಿ ಸಂಘ ಶಿಕಾರಿಪುರ ಶಾಖೆ ಹಾಗೂ ಶ್ರೀ ಶಿವಶರಣರ ಮಾದರ ಚನ್ನಯ್ಯ ಜನ್ಮಸ್ಥಳ ಅಭಿವೃದ್ಧಿ ಸಮಿತಿ ಬಳ್ಳಿಗಾವಿ ವತಿಯಿಂದ ಎಸ್ಎಸ್ಎಲ್‌ಸಿ ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ದಿನಗ ಕಾರ್ಯಾಗಾರವನ್ನು ದಿ:30 ರಂದು ಪಟ್ಟಣದ ಗುರು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಮುಖೇಶ್ ಮತ್ತಿಕೊಟ್ಟೆ ತಿಳಿಸಿದ್ದಾರೆ. ಪಟ್ಟಣದ ಪತ್ರಿಕಾ‌ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್ ಎಸ್ ಎಲ್ ಸಿ ಪಿಯುಸಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು ಶಿಕ್ಷಣ ತಜ್ಞ […]