ಶಿರಾಳಕೊಪ್ಪದಲ್ಲಿ ಪೋಲಿಸರ ದಾಳಿ ಗೋ ಮಾಂಸ ವಶ: ಕರ್ತವ್ಯಕ್ಕೆ ಅಡ್ಡಿ..!

ಶಿರಾಳಕೊಪ್ಪದಲ್ಲಿ ಪೋಲಿಸರ ದಾಳಿ ಗೋ ಮಾಂಸ ವಶ: ಕರ್ತವ್ಯಕ್ಕೆ ಅಡ್ಡಿ..!
Facebook
Twitter
LinkedIn
WhatsApp

ಶಿರಾಳಕೊಪ್ಪ:‌ ಪಟ್ಟಣದಲ್ಲಿ ಪೋಲಿಸರ ದಾಳಿ ನಡೆಸಿದ್ದು ಇಬ್ಬರು ಆರೋಪಿಗಳು ಮತ್ತು ಗೋವಿನ ಮಾಂಸ ಪತ್ತೆಯಾಗಿದೆ.

ಪಿಎಸ್ಐ ಪ್ರಶಾಂತ್ ನೇತೃತ್ವದಲ್ಲಿ ದಾಳಿ ನಡೆದಿದೆ ಈ ಘಟನೆಗೆ ಸಂಬಂಧಿಸಿದಾಗ ಮೂವರು ಪೊಲೀಸ್ ಮತ್ತು ಆರೋಪಿತರ ಕಡೆಯಿಂದ ಒಬ್ಬರು ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.

ದಾಳಿಯಲ್ಲಿ ಮೊದಲಿಗೆ ಆರೋಪಿತರೊಬ್ಬರು ಪೊಲೀಸರ ತಡೆಯಲು ಯತ್ನಿಸಿದ್ದಾರೆ. ಮನೆಯ ಮೇಲೆ ದಾಳಿ ಮಾಡಲು ಹೋದ ಪೊಲೀಸರನ್ನ ಮನೆಯವರು ಗೇಟ್ ಬಳಿಯೇ ತಡೆದು ನಿಮಗೆ ದಾಳಿ ಮಾಡಲು ಏನು ಅಧಿಕಾರವಿದೆ ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಎನ್ನಲಾಗಿದೆ. ಗೋಮಾಂಸದ ಬಗ್ಗೆ ಮಾಹಿತಿ ಬಂದಿದೆ. ತಪಾಸಣೆ ನಡೆಸಬೇಕಿದೆ ಎಂದಿದ್ದಾರೆ. ಎದುರಾಳಿಗಳು ಪೊಲೀಸರನ್ನ ತಡೆಯಲು ಯತ್ನಿಸಿದಾಗ ಆತನನ್ನ ಬದಿಗೆ ಸರಿಸಿ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಗೋಮಾಂಸ ಪತ್ತೆಯಾಗಿದೆ.

ಈ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಾಗಿದೆ. ಶಿರಾಳಕೊಪ್ಪದಲ್ಲಿ ಗೋಮಾಂಸ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಘಟನೆಯ ವೇಳೆ ಮೂವರು ಪೊಲೀಸರಿಗೆ ಗಾಯಗಳಾಗಿದ್ದು ಮೂವರನ್ನ ಶಿರಾಳಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಆರೋಪಿತರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಕ್ಬುಲ್ ಸಾಬ್ ಅವರ ಮನೆಯ ನೇಲೆ ದಾಳಿ ನಡೆದು ಗೋಮಾಂಸ ಪತ್ತೆಯಾಗಿದೆ.

ಈ ಸಂಬಂಧ ಎಸ್ಪಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದು ಘಟನೆಯ ಸಂಬಂಧ ಸುಳ್ಳು ವದಂತಿಗಳು ಹರಡುತ್ತಿದೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದಿದ್ದಾರೆ.