ಪ್ರತಿಷ್ಠಿತ ಶಾಲೆಯೊಂದರ ವಾಹನದಿಂದ ಕುಮದ್ವತಿ‌ ನದಿಗೆ ಕಸದ ರಾಶಿ…!

ಶಿಕಾರಿಪುರ ಪಟ್ಟಣದ ಜೀವನದಿ ಕುಮದ್ವತಿ ನದಿಗೆ ಅನೇಕರು ಕಸವನ್ನು ಎಸೆಯುತ್ತಿರುವ ಘಟನೆ ನಡೆಯುತ್ತಿದೆ ಆದರೆ ಜನರಿಗೆ ಜಾಗೃತಿ ಮೂಡಿಸುವ ಶಿಕ್ಷಣ ಸಂಸ್ಥೆಯೊಂದರಿಂದಲೇ ಕಸವನ್ನು ನದಿಗೆ ಹಾಕು ಘಟನೆ ನಡೆದಿರುವುದು ಖಂಡನೀಯವಾಗಿದೆ. ಶಿಕಾರಿಪುರ ಪಟ್ಟಣದ ಹೊರವಲಯದಲ್ಲಿ ಇರುವ ಕುಮದ್ವತಿ ಸೇತುವೆ ಬಳಿ ಶ್ರೀ ಕೊಟ್ಟರೇಶ್ವರ ವಿದ್ಯಾಸಂಸ್ಥೆಯ ವಾಹನದಿಂದ ಬಂದು ಸಿಬ್ಬಂದಿಗಳು ಚೀಲಗಟ್ಟಲೇ ಕಸವನ್ನು ನದಿಗೆ ಎಸೆಯುತ್ತಿರುವ ದೃಶ್ಯ ಕಂಡುಬಂದಿದೆ‌. ನದಿಗಳ ಬಗ್ಗೆ ಕಸದ ವಿಲೇವಾರಿ ಬಗ್ಗೆ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ವಿದ್ಯಾಸಂಸ್ಥೆಯಿಂದ ಈ‌ ರೀತಿಯ ಘಟನೆ ನಡೆಯುತ್ತಿರುವುದು […]

ಜ.19 ರಂದು ಲೋಕಸೇವಾ ಆಯೋಗದಿಂದ ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಬಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ

ದಾವಣಗೆರೆ,ಜನವರಿ.16 (ಕರ್ನಾಟಕ ವಾರ್ತೆ): ರಾಜ್ಯ ಲೋಕಸೇವಾ ಆಯೋಗದಿಂದ ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಬಿ ಹುದ್ದೆಗಳ ಆಯ್ಕೆಗೆ ಸ್ಪರ್ಧಾತ್ಮಕ ಪರೀಕ್ಷೆಯು ಜನವರಿ 19 ಮತ್ತು 25 ರಂದು ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದರು.ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರೀಕ್ಷಾ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನವರಿ 19 ರಂದು ಬೆಳಗ್ಗೆ 10 ರಿಂದ 11.30 ರವರೆಗೆ ಸಾಮಾನ್ಯ ಪತ್ರಿಕೆ 1 ರ ಪರೀಕ್ಷೆ ನಡೆಯಲಿದ್ದು ದಾವಣಗೆರೆ ನಗರದ 6 ಕೇಂದ್ರಗಳಲ್ಲಿ 3422 […]

ಕುವೆಂಪು ವಿಶ್ವವಿದ್ಯಾಲಯದ 34ನೇ ವಾರ್ಷಿಕ ಘಟಿಕೋತ್ಸವ

ಶಿವಮೊಗ್ಗ, ಜ.17 ( ಕರ್ನಾಟಕ ವಾರ್ತೆ): ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಜ.22 ರ ಬೆಳಿಗ್ಗೆ 10.30 ಕ್ಕೆ ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್‌ನ ಬಸವಸಭಾ ಭವನದಲ್ಲಿ ಕುವೆಂಪು ವಿಶ್ವವಿದ್ಯಾಲಯದ 34 ನೇ ವಾರ್ಷಿಕ ಘಟಿಕೋತ್ಸವ ಏರ್ಪಡಿಸಲಾಗಿದೆ.ರಾಜ್ಯಪಾಲರು, ಕರ್ನಾಟಕ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್‌ಚಂದ್ ಗೆಹ್ಲೋಟ್ ಅಗ್ರಾಸನ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್‌ರವರ ಉಪಸ್ಥಿತಿಯಿದ್ದು, ಮುಖ್ಯ ಅತಿಥಿಗಳಾಗಿ ಹೈದರಾಬಾದ್ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ರಾಮ್ ರಾಮಸ್ವಾಮಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ […]

ಯುವನಿಧಿ ನೋಂದಣಿ ಅಭಿಯಾನ

ಶಿಕಾರಿಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವನಿಧಿ ವಿಶೇಷ ನೋಂದಣಿ ಅಭಿಯಾನ ಕೈಗೊಂಡಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಜ.20ವರೆಗೆ ಕಾಲೇಜಿನಲ್ಲಿ ಸಹಾಯಕೇಂದ್ರ ಸ್ಥಾಪಿಸಲಾಗಿದೆ.  ಯುವನಿಧಿ ಅರ್ಜಿ ಸಲ್ಲಿಸುವ ಯುವಕ/ಯುವತಿಯರು 2022, 2023 ಹಾಗೂ 2024ರಲ್ಲಿ ಪದವಿ/ ಸ್ನಾತಕೋತ್ತರ ಪದವಿ/ ಡಿ‍ಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು. ಕನಿಷ್ಟ 6 ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿರಬಾರದು. ಉನ್ನತ ವಿದ್ಯಾಭ್ಯಾಸ ಮುಂದುವರಿಸಿರಬಾರದು ಎಂಬ ನಿಬಂಧನೆಗಳಿವೆ. ಅರ್ಹ ಯುವಕ/ಯುವತಿಯರು ಕಾಲೇಜಿನ ಪ್ಲೇಸ್‌ಮೆಂಟ್ ಅಧಿಕಾರಿ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಸ್ಥಳೀಯ ಸೈಬರ್ ಕೇಂದ್ರಗಳು, ಸೇವಾಸಿಂಧು ಪೋರ್ಟಲ್ […]