ಶಿಕಾರಿಪುರ ಪಟ್ಟಣದ ಜೀವನದಿ ಕುಮದ್ವತಿ ನದಿಗೆ ಅನೇಕರು ಕಸವನ್ನು ಎಸೆಯುತ್ತಿರುವ ಘಟನೆ ನಡೆಯುತ್ತಿದೆ ಆದರೆ ಜನರಿಗೆ ಜಾಗೃತಿ ಮೂಡಿಸುವ ಶಿಕ್ಷಣ ಸಂಸ್ಥೆಯೊಂದರಿಂದಲೇ ಕಸವನ್ನು ನದಿಗೆ ಹಾಕು ಘಟನೆ ನಡೆದಿರುವುದು ಖಂಡನೀಯವಾಗಿದೆ.
![](https://shikarinews.com/wp-content/uploads/2025/01/IMG_20250123_121643-1024x558.jpg)
ಶಿಕಾರಿಪುರ ಪಟ್ಟಣದ ಹೊರವಲಯದಲ್ಲಿ ಇರುವ ಕುಮದ್ವತಿ ಸೇತುವೆ ಬಳಿ ಶ್ರೀ ಕೊಟ್ಟರೇಶ್ವರ ವಿದ್ಯಾಸಂಸ್ಥೆಯ ವಾಹನದಿಂದ ಬಂದು ಸಿಬ್ಬಂದಿಗಳು ಚೀಲಗಟ್ಟಲೇ ಕಸವನ್ನು ನದಿಗೆ ಎಸೆಯುತ್ತಿರುವ ದೃಶ್ಯ ಕಂಡುಬಂದಿದೆ.
ನದಿಗಳ ಬಗ್ಗೆ ಕಸದ ವಿಲೇವಾರಿ ಬಗ್ಗೆ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ವಿದ್ಯಾಸಂಸ್ಥೆಯಿಂದ ಈ ರೀತಿಯ ಘಟನೆ ನಡೆಯುತ್ತಿರುವುದು ಸಾರ್ವಜನಿಕರು ಆಕ್ರೋಷಕ್ಕೆ ಕಾರಣವಾಗಿದೆ.
ಈ ಕುರಿತು ಪುರಸಭೆ ಅಧಿಕಾರಿಗಳು ಸಂಸ್ಥೆಯ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದ್ದಾರೆ ಕಾದುಕೊಡಬೇಕಾಗಿದೆ.