ಸಾವು ಗೆದ್ದ ಸಂಸಾರ: ಕಾರಿನ ಮೇಲೆ ಉರುಳಿದ ಕಟ್ಟಿಗೆ ಲಾರಿ ನಜ್ಜುಗುಜ್ಜಾದ ಕಾರು: ದಂಪತಿ, ಮಗು ಪವಾಡಸದೃಶ ಪಾರು!

​ಚಿಕ್ಕಮಗಳೂರು: ಅದೃಷ್ಟವೋ ಅಥವಾ ಪವಾಡವೋ ಎಂಬಂತೆ, ಸಾಕ್ಷಾತ್ ಮೃತ್ಯುವೇ ಎದುರು ಬಂದರೂ ಚಿಕ್ಕಮಗಳೂರಿನ ದಂಪತಿ ಮತ್ತು ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮೇಲೆ ಭಾರೀ ಪ್ರಮಾಣದ ಕಟ್ಟಿಗೆ ತುಂಬಿದ್ದ ಲಾರಿಯೊಂದು ಉರುಳಿ ಬಿದ್ದರೂ, ಅದೃಷ್ಟವಶಾತ್ ಒಳಗಿದ್ದ ಮೂವರೂ ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದಾರೆ. ​ಘಟನೆಯ ವಿವರ:​ಚಿಕ್ಕಮಗಳೂರು ತಾಲೂಕಿನ ನಗರದ ಹೊರವಲಯದ ಲಕ್ಯಾ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಸಂಚರಿಸುತ್ತಿದ್ದ ಕಾರಿನ ಪಕ್ಕದಲ್ಲೇ ಬರುತ್ತಿದ್ದ ಕಟ್ಟಿಗೆ ಲೋಡ್ ತುಂಬಿದ ಲಾರಿಯೊಂದು ಅಚಾನಕ್ ಆಗಿ ನಿಯಂತ್ರಣ […]

ಚಿಕ್ಕಮಗಳೂರಿನಲ್ಲಿ ಕಾಡಾನೆ ಅಟ್ಟಹಾಸ: ವಾರದಲ್ಲಿ ಎರಡನೇ ಬಲಿ, ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ

​ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡಾನೆಗಳ ಸರಣಿ ದಾಳಿ ಮುಂದುವರಿದಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳಾ ಕಾರ್ಮಿಕರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ​ಘಟನೆಯ ಹಿನ್ನೆಲೆ:​ಮೃತರನ್ನು ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಬೋರಮ್ಮ (33) ಎಂದು ಗುರುತಿಸಲಾಗಿದೆ. ಕಳೆದ ಸೋಮವಾರವಷ್ಟೇ ಇದೇ ಪ್ರದೇಶದಲ್ಲಿ ಆನೆಯೊಂದು ಕಾರ್ಮಿಕನನ್ನು ಬಲಿ ಪಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಇಂದು ಅದೇ ಜಾಗದಲ್ಲಿ ಬೋರಮ್ಮ ಅವರ ಮೇಲೆ ಆನೆ ದಾಳಿ ನಡೆಸಿದೆ. […]

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಹಾವೇರಿ ಮೂಲದ ಕಾರ್ಮಿಕ ಬಲಿ

​ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ತೋಟದ ಹಾದಿಯಲ್ಲಿ ನಡೆದು ಹೋಗುತ್ತಿದ್ದ ಕೂಲಿ ಕಾರ್ಮಿಕರೊಬ್ಬರು ಆನೆ ದಾಳಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಸಂಭವಿಸಿದೆ. ​ಘಟನೆಯ ವಿವರ:ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿರುವಳ್ಳಿ ಮೂಲದ ಯಲ್ಲಪ್ಪ (45) ಮೃತಪಟ್ಟ ದುರ್ದೈವಿ. ಇವರು ಕಳೆದ ಕೆಲವು ಕಾಲದಿಂದ ಚಿಕ್ಕಮಗಳೂರು ಭಾಗದಲ್ಲಿ ಕೂಲಿ ಹಾಗೂ ಗಾರೆ ಕೆಲಸ ಮಾಡಿಕೊಂಡಿದ್ದರು. ​ಸೋಮವಾರ ಸಂಜೆ ಕೆಲಸ ಮುಗಿಸಿ ನಾಗೇಶ್ ಗೌಡ ಎಂಬುವರ ತೋಟದ ಹಾದಿಯ […]

ಅಮ್ಮ ಬೈದಿದ್ದಕ್ಕೆ ಮನನೊಂದು 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

​ಚಿಕ್ಕಮಗಳೂರು: ಕಾಫಿನಾಡಿನಲ್ಲಿ ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಬಾಲಕಿಯೊಬ್ಬಳು ನೇಣಿಗೆ ಶರಣಾಗಿರುವ ದಾರುಣ ಘಟನೆ ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ ನಡೆದಿದೆ. ​ಘಟನೆಯ ವಿವರ:ಮೃತ ಬಾಲಕಿಯನ್ನು ಜಯಪುರ ಗ್ರಾಮದ ಸುಪ್ರೀತಾ (13) ಎಂದು ಗುರುತಿಸಲಾಗಿದೆ. ಈಕೆ ಸ್ಥಳೀಯ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ​ಆತ್ಮಹತ್ಯೆಗೆ ಕಾರಣ:ವರದಿಗಳ ಪ್ರಕಾರ, ಬಾಲಕಿ ಊಟ ಮಾಡುತ್ತಿದ್ದಾಗ ಆಕಸ್ಮಿಕವಾಗಿ ತಟ್ಟೆ ಬಿದ್ದು ಅನ್ನ ಚೆಲ್ಲಿತ್ತು. ಈ ವೇಳೆ ತಾಯಿ, “ಬರೀ ಟಿವಿ ನೋಡುತ್ತಿರುತ್ತೀಯಾ, ಓದ ಕಡೆ ಗಮನವಿಲ್ಲ. ಮೊದಲು ಚೆಲ್ಲಿರುವ ಅನ್ನವನ್ನು […]

ಪೆಹಲ್ಗಾಮ್ ಉಗ್ರರ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಶೃಂಗೇರಿ ಮಠದಿಂದ ತಲಾ 2 ಲಕ್ಷ ರೂಗಳ ಪರಿಹಾರ

ಚಿಕ್ಕಮಗಳೂರು : ಪೆಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟ ಕುಟುಂಬಗಳೀಗೆ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ದ ಶೃಂಗೇರಿ ಶಾರದಾ ಮಠವು ತಲಾ 2 ಲಕ್ಷ ರೂಗಳ ಪರಿಹಾರವನ್ನು ಘೋಷಣೆ ಮಾಡಿದೆ. ದಾಳಿಯಲ್ಲಿ ಮೃತಪಟ್ಟ ಒಟ್ಟು 26 ಸದಸ್ಯರ ಕುಟುಂಬಗಳೀಗೆ ಒಟ್ಟು 52 ಲಕ್ಷ ರೂ ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಶೃಂಗೇರಿ ಶಾರದ ಮಠದಲ್ಲಿ ಇಂದು ನಡೆದ ಅನುರಾಗ ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಮಠದ ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತಿತೀರ್ಥ ಸ್ವಾಮೀಜಿಯವರು ಕಾಶ್ಮೀರದಲ್ಲಿ ಶ್ರೀ ಶಾರದಾ ಮಾತೆಯು ನೆಲ್ಲೆಸಿದಾಳೆ […]

ಚಿಕ್ಕಮಗಳೂರಿಗೆ ಸಮೀಪವೇ ಬಂದ ಒಂಟಿ ಸಲಗ: ಸ್ಥಳೀಯರಲ್ಲಿ ಆತಂಕ

ಚಿಕ್ಕಮಗಳೂರು: ಕಳೆದ ರಾತ್ರಿ ಚಿಕ್ಕಮಗಳೂರು ನಗರಕ್ಕೆ ಹೊಂದಿಕೊಂಡಿರುವ ನಲ್ಲೂರಿನಲ್ಲಿ ಒಂಟಿ ಸಲಗ ತಿರುಗಾಡಿದ ಘಟನೆ ಆತಂಕಕ್ಕೆ ಕಾರಣವಾಗಿದೆ. ನಗರದಿಂದ ಕೇವಲ 2 ಕಿ.ಮೀ. ದೂರದಲ್ಲಿಯೇ ಈ ಸಲಗ ಕಂಡು ಬಂದಿದ್ದು, ಇದು ನಗರ ಪ್ರದೇಶಕ್ಕೆ ಪ್ರವೇಶಿಸಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಸಿಸಿಟಿವಿಯಲ್ಲಿ ಸೆರೆನಲ್ಲೂರಿನ ವಿವಿಧ ರಸ್ತೆಗಳಲ್ಲೂ ಆನೆ ಸಂಚರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದು, ಮನೆಯಿಂದ ಹೊರಬರಲು ಹಿಂಜರಿದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳ ಹರಸಾಹಸಸಲಗವನ್ನು ಕಾಡು ಪ್ರದೇಶಕ್ಕೆ ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ […]

ಚಿಕ್ಕಮಗಳೂರು: ಬೇಟೆಗಾರರ ಉರುಳಿಗೆ ಸಿಲುಕಿದ ಚಿರತೆ ಸಾವು..!

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಬಾಳೂರು ಸಮೀಪದ ಕಾಫಿ ತೋಟದಲ್ಲಿ ಚಿರತೆಯೊಂದು ಬೇಟೆಗಾರರು ಹಾಕಿದ ಉರುಳಿಗೆ  ಸಿಲುಕಿ ಮೃತಪಟ್ಟಿದೆ. ಕಾಡುಹಂದಿ ಬೇಟೆಗೆ ಬೇಟೆಗಾರರು ಹಾಕಿದ್ದ ಉರುಳಿಗೆ ಗುರುವಾರ ರಾತ್ರಿಯೇ ಚಿರತೆ ಸಿಲುಕಿದೆ. ಶುಕ್ರವಾರ ಬೆಳಿಗ್ಗೆ ಗಮನಿಸಿದ ಸ್ಥಳೀಯರು, ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಚಿರತೆ ರಕ್ಷಣೆಗೆ ಪ್ರಯತ್ನಿಸಿದರು.  ಶಿವಮೊಗ್ಗದಿಂದ ಅರಿವಳಿಕೆ ತಜ್ಞರನ್ನು ಕರೆಸಿ ರಕ್ಷಣೆ ಮಾಡಲು ಮುಂದಾದರು. ಅಷ್ಟರಲ್ಲಿ ಚಿರತೆ ಉಸಿರಾಟ ನಿಲ್ಲಿಸಿದ್ದು, ಮೃತಪಟ್ಟಿದೆ ಎಂದು ಅಧಿಕಾರಿಗಳು ಘೋಷಣೆ ಮಾಡಿದರು. ಉರುಳು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ […]

ಚಿಕ್ಕಮಗಳೂರು: ಬೇಟೆಗಾರರ ಉರುಳಿಗೆ ಸಿಲುಕಿದ ಚಿರತೆ – ಸಾವು ಬದುಕಿನ ನಡುವೆ ಹೋರಾಟ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಕಾಫಿ ತೋಟದಲ್ಲಿ ಚಿರತೆ ಒಂದು ಬೇಟೆಗಾರರು ಹಾಕಿದ ಅಕ್ರಮ ಉರುಳಿಗೆ ಸಿಲುಕಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಕಾಡುಹಂದಿ ಬೇಟೆಗೆ ಉರುಳು ಹಾಕಿದ್ದ ಬೇಟೆಗಾರರು ಘಟನೆ ಬಳಿಕ ಪರಾರಿಯಾಗಿದ್ದಾರೆ. ಘಟನೆಯ ಮಾಹಿತಿ ತಿಳಿದ ನಂತರ ಮೂಡಿಗೆರೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಚಿರತೆಗೆ ಅಗತ್ಯವಾದ ರಕ್ಷಣೆಯನ್ನು ನೀಡಲು ಶ್ರಮಿಸುತ್ತಿದ್ದಾರೆ. ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಲು ಶಿವಮೊಗ್ಗದಿಂದ ಅರವಳಿಕೆ ತಜ್ಞರನ್ನು ಕರೆಸಲಾಗುತ್ತಿದೆ. ಅರಣ್ಯಾಧಿಕಾರಿಗಳು ಚಿರತೆಗೆ ಅರವಳಿಕೆ ನೀಡಿ ಅದನ್ನು ಸುರಕ್ಷಿತ ಸ್ಥಳಕ್ಕೆ […]

ಚಿಕ್ಕಮಗಳೂರು: ಅಳಿಯನಿಂದಲೇ ಅತ್ತೆಯ ಕೊಲೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲ್ ಗ್ರಾಮದಲ್ಲಿ ಅಳಿಯನಿಂದ ಅತ್ತೆಯ ಕೊಲೆ ನಡೆದಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಘಟನೆ ವಿವರ:65 ವರ್ಷದ ಯಮುನಾ ಎಂಬುವವರನ್ನು ಅವರ ಅಳಿಯ ಶಶಿಧರ್‌ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ ಕೊಲೆ ಮಾಡಿದ ಬಳಿಕ ಶಶಿಧರ್ ಪರಾರಿಯಾಗಿದ್ದಾನೆ. ಪೊಲೀಸರ ಪರಿಶೀಲನೆ:ಈ ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪರಾರಿಯಾಗಿರುವ ಶಶಿಧರ್‌ನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕೊಲೆಯ ಹಿಂದಿನ ಕಾರಣ:ಕೊಲೆಯ ಹಿಂದಿನ […]

ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿ ಕೋಟೆಹೊಂಡ ರವಿ ಶರಣಾಗತಿ :ನಕ್ಸಲ್ ಮುಕ್ತ ರಾಜ್ಯವಾಗಿ ಘೋಷಣೆ..!

ಚಿಕ್ಕಮಗಳೂರು: ನಕ್ಸಲ್‌ ಚಳವಳಿಯಲ್ಲಿ ಸಕ್ರಿಯವಾಗಿದ್ದ ಕೋಟೆಹೊಂಡ ರವೀಂದ್ರ ಇಂದೇ ಮುಖ್ಯವಾನಿಗೆ ಬರಲಿದ್ದಾರೆ. ಶೃಂಗೇರಿ ತಾಲ್ಲೂಕಿನ ಕಿಗ್ಗಾ ಗ್ರಾಮದ ಕೋಟೆಹೊಂಡ ರವೀಂದ್ರ ಕಾಡಿನಲ್ಲೇ ಉಳಿದಿದ್ದ ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿಯಾಗಿದ್ದರು. ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ಲೂರು, ಮಾರೆಪ್ಪ ಅರೋಲಿ, ಕೆ.ವಸಂತ(ತಮಿಳುನಾಡು), ಟಿ.ಎನ್.ಜಿಷಾ(ಕೇರಳ) ಒಳಗೊಂಡ ತಂಡ ಜ.8ರಂದು ಮುಖ್ಯವಾಹಿನಿಗೆ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಎಲ್ಲರನ್ನು ಸ್ವಾಗತಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಈ ತಂಡದಿಂದ ಬೇರ್ಪಟ್ಟಿದ್ದ ಕೋಟೆಹೊಂಡ ರವೀಂದ್ರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರನ್ನು ಸಂಪರ್ಕಿಸುವ […]