ಚಿಕ್ಕಮಗಳೂರು: ಬೇಟೆಗಾರರ ಉರುಳಿಗೆ ಸಿಲುಕಿದ ಚಿರತೆ – ಸಾವು ಬದುಕಿನ ನಡುವೆ ಹೋರಾಟ

ಚಿಕ್ಕಮಗಳೂರು: ಬೇಟೆಗಾರರ ಉರುಳಿಗೆ ಸಿಲುಕಿದ ಚಿರತೆ – ಸಾವು ಬದುಕಿನ ನಡುವೆ ಹೋರಾಟ
Facebook
Twitter
LinkedIn
WhatsApp

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಕಾಫಿ ತೋಟದಲ್ಲಿ ಚಿರತೆ ಒಂದು ಬೇಟೆಗಾರರು ಹಾಕಿದ ಅಕ್ರಮ ಉರುಳಿಗೆ ಸಿಲುಕಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಕಾಡುಹಂದಿ ಬೇಟೆಗೆ ಉರುಳು ಹಾಕಿದ್ದ ಬೇಟೆಗಾರರು ಘಟನೆ ಬಳಿಕ ಪರಾರಿಯಾಗಿದ್ದಾರೆ.

ಘಟನೆಯ ಮಾಹಿತಿ ತಿಳಿದ ನಂತರ ಮೂಡಿಗೆರೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಚಿರತೆಗೆ ಅಗತ್ಯವಾದ ರಕ್ಷಣೆಯನ್ನು ನೀಡಲು ಶ್ರಮಿಸುತ್ತಿದ್ದಾರೆ. ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಲು ಶಿವಮೊಗ್ಗದಿಂದ ಅರವಳಿಕೆ ತಜ್ಞರನ್ನು ಕರೆಸಲಾಗುತ್ತಿದೆ.

ಅರಣ್ಯಾಧಿಕಾರಿಗಳು ಚಿರತೆಗೆ ಅರವಳಿಕೆ ನೀಡಿ ಅದನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುವ ಯೋಜನೆ ರೂಪಿಸಿದ್ದು, ಪರಾರಿಯಾದ ಬೇಟೆಗಾರರ ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಈ ಘಟನೆಯಿಂದ ಬಾಳೂರು ಪ್ರದೇಶದ ಜನರಲ್ಲಿ ಆತಂಕ ಮನೆಮಾಡಿದೆ. ಅಕ್ರಮ ಬೇಟೆಯನ್ನು ತಡೆಯಲು ಅಧಿಕಾರಿಗಳು ಹೆಚ್ಚಿನ ಪೆಟ್ರೋಲಿಂಗ್ ಹಾಗೂ ಕಟ್ಟುನಿಟ್ಟಿನ . ಕ್ರಮ ಕೈಗೊಂಡಿದ್ದಾರೆ