ಪ್ರಯಾಗ್ ರಾಜ್ ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ರಾಜ್ಯದ 4 ಮಂದಿ ಸಾವು..!
ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಭಕ್ತರ ಜನದಟ್ಟಣೆಯಿಂದ ಕಾಲ್ತುಳಿತ ಉಂಟಾಗಿ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಪಷ್ಟಪಡಿಸಿದ್ದಾರೆ. ಮಹಾಕುಂಭ ಮೇಳದ ಕಾಲ್ತುಳಿತಕ್ಕೆ ಸಿಲುಕಿದ್ದ ಇವರನ್ನು ಪ್ರಯಾಗರಾಜ್ ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ಇದೇ 26 ರಂದು ಖಾಸಗಿ ಸಾರಿಗೆ ಸಂಸ್ಥೆಯ ಮೂಲಕ 13 ಜನರ ತಂಡ ಕುಂಭಮೇಳಕ್ಕೆ ತೆರಳಿತ್ತು ಎಂದು ಅವರು ವಿವರ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ […]
2 ಕಾರುಗಳ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ದುರ್ಮರಣ
ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ತಡಸ ಕ್ರಾಸ್ ಬಳಿ ದುರ್ಘಟನೆ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಇನ್ನಿಬ್ಬರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಕ್ಯಾಲಿಫೋರ್ನಿಯ ಮತ್ತು ಕಾಡ್ಗಿಚ್ಚಿನ ಉರಿ
ಕ್ಯಾಲಿಫೋರ್ನಿಯ ರಾಜ್ಯ ಹಳೆಯ ಕಾಡ್ಗಿಚ್ಚುಗಳಿಂದ ಪಾಠ ಕಲಿತದ್ದು ಏನು? ಹಿಂದೆಲ್ಲ ನಾಲ್ಕಾರು ತಿಂಗಳುಗಳವರೆಗೆ ಕಾಡ್ಗಿಚ್ಚುಗಳು ಕ್ಯಾಲಿಫೋರ್ನಿಯಾದಲ್ಲಿ ನಿರಂತರ ಉರಿದ ಉದಾಹರಣೆಗಳಿವೆ. ಹೀಗಿದ್ದೂ ಅಮೆರಿಕ ಏಕೆ ಮೈಮರೆಯಿತು? ಹವಾಮಾನ ಬದಲಾವಣೆಯ ಕಾವು ತಟ್ಟಿದ್ದು ಇನ್ನೂ ಸಾಲದೆ ಅದಕ್ಕೆ? ವಿಜ್ಞಾನ ಲೇಖಕ ಹಾಸನದ ಕೆ.ಎಸ್.ರವಿಕುಮಾರ್ ಅವರು ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚಿನ ಕುರಿತು ಬರೆಯುವ ಸರಣಿ ಲೇಖನದ ಮೊದಲ ಭಾಗ ಇಲ್ಲಿದೆ.ದಕ್ಷಿಣ ಕ್ಯಾಲಿಫೋರ್ನಿಯಾದ ಲಾಸ್‍ಎಂಜೆಲಿಸ್ ಕೌಂಟಿಯನ್ನು ಸುಟ್ಟ ಕಾಡ್ಗಿಚ್ಚಿನ ವಿಡಿಯೋಗಳನ್ನು ಸತತ ನೋಡಿದ ಮೇಲೆ ಒಂದು ದೊಡ್ಡ ದೇಶದಲ್ಲಿ ಮಿಲಿಟರಿ ಸೈನಿಕರಿಗಿಂತ ಬೆಂಕಿ […]