ಕೇಂದ್ರ ಬಜೆಟ್ ಮಂಡನೆ ಯಾವ ಕ್ಷೇತ್ರಕ್ಕೆ ಎಷ್ಟು? ಯಾರಿಗೆ ಲಾಭನಷ್ಟ ..?
ನವದೆಹಲಿ :ಲೋಕಸಭೆಯಲ್ಲಿಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರು. ಈ ಬಾರಿಯ ಬಜೆಟ್ ಕೃಷಿ ವಲಯ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಹೂಡಿಕೆ ವಲಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿಶೇಷತೆಗಳನ್ನು ಹೊಂದಿದೆ. ಬಜೆಟ್ ಮಂಡನೆಯ ಆರಂಭದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಈ ಬಾರಿಯ ಬಜೆಟ್ ಬೆಳವಣಿಗೆಗೆ ಹೊಸ ಶಕ್ತಿ ನೀಡುವ ಒಳಗೊಳ್ಳುವ ಅಭಿವೃದ್ಧಿ ಖಾತ್ರಿಪಡಿಸುವ, ಖಾಸಗಿ ಹೂಡಿಕಯನ್ನು ಉತ್ತೇಜಿಸುವ ಮತ್ತು ಮಧ್ಯಮವರ್ಗದವರ […]
ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಣೆ : ಈಶ್ವರ ಖಂಡ್ರೆ
ಬೆಂಗಳೂರು: ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ಅತ್ಯಾವಶ್ಯಕವಾಗಿರುವ ಹೆಸರಘಟ್ಟ ಕೆರೆ ಮತ್ತು ಸುತ್ತಲಿನ ಪ್ರದೇಶವನ್ನು ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸಿದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಧನ್ಯವಾದ ಅರ್ಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 133 ಪ್ರಭೇದದ ಪಕ್ಷಿಗಳು, 40 ಸ್ಥಳೀಯ ಹಾಗೂ ನೈಸರ್ಗಿಕ ಸಸ್ಯಗಳು ಮತ್ತು ಚಿರತೆ, ತೋಳ, ಕಾಡುಪಾಪ ಮೊದಲಾದ ವನ್ಯಜೀವಿಗಳಿಗೆ ಆಶ್ರಯತಾಣವಾದ ಈ ಕಾನನ ಮತ್ತು ಹುಲ್ಲುಗಾವಲು ಪ್ರದೇಶದ ಸಂರಕ್ಷಣೆ ತಮ್ಮ […]
ಪ್ರಯಾಗ್ ರಾಜ್ ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ರಾಜ್ಯದ 4 ಮಂದಿ ಸಾವು..!
ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಭಕ್ತರ ಜನದಟ್ಟಣೆಯಿಂದ ಕಾಲ್ತುಳಿತ ಉಂಟಾಗಿ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಪಷ್ಟಪಡಿಸಿದ್ದಾರೆ. ಮಹಾಕುಂಭ ಮೇಳದ ಕಾಲ್ತುಳಿತಕ್ಕೆ ಸಿಲುಕಿದ್ದ ಇವರನ್ನು ಪ್ರಯಾಗರಾಜ್ ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ಇದೇ 26 ರಂದು ಖಾಸಗಿ ಸಾರಿಗೆ ಸಂಸ್ಥೆಯ ಮೂಲಕ 13 ಜನರ ತಂಡ ಕುಂಭಮೇಳಕ್ಕೆ ತೆರಳಿತ್ತು ಎಂದು ಅವರು ವಿವರ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ […]
ಮಲೆನಾಡಿನ ಮಾರಕ ಕಾಯಿಲೆ ಕೆಎಫ್’ಡಿ ಕುರಿತು ಮಹತ್ವ ಸಂಶೋಧನೆ ಏನಿದೆ ವರದಿಯಲ್ಲಿ..?
ಬೆಂಗಳೂರು: ಪಶ್ಚಿಮಘಟ್ಟದ ಕಾಡಿನಲ್ಲಿ ಕಂಡುಬರುವ 32 ಕ್ಕೂ ಅಧಿಕ ಜಾತಿಯ ಕೆಎಫ್‌ಡಿ ವೈರಸ್ ಹರಡಬಲ್ಲ ಉಣ್ಣೆಗಳಲ್ಲಿ ಎರಡು ಜಾತಿಯ ಉಣ್ಣೆಗಳು ಅನುವಂಶಿಕವಾಗಿ ಕೆಎಫ್‌ಡಿ ವೈರಸ್ ಅನ್ನು ಮತ್ತೊಂದು ಪೀಳಿಗೆಗೆ ವರ್ಗಾಯಿಸುತ್ತಿರುವುದು ಸಂಶೋಧನೆಯಿಂದ ದೃಢಪಟ್ಟಿದೆ. ಈ ಸಂಶೋಧನೆಯು ಕೆಎಫ್‌ಡಿ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಗೆ ಹೊಸ ಭರವಸೆ ನೀಡಿದೆ. ಉಣುಗು ನಿಯಂತ್ರಣವೇ ಕೆಎಫ್‌ಡಿ ನಿಯಂತ್ರಣದ ಮೊದಲ ಭಾಗವಾಗಲಿದೆ. ಕೆಎಫ್‌ಡಿ ಕುರಿತಂತೆ ಕಳೆದ 6 ವರ್ಷದಿಂದ ರಾಜ್ಯ ಅರೋಗ್ಯ ಇಲಾಖೆಯು ಸೇರಿದಂತೆ ಐಸಿಎಂಆರ್, ಐಸಿಎಆರ್ ಸಂಸ್ಥೆಗಳ ಸಹಯೋಗದಲ್ಲಿ ಸಂಶೋಧನೆ ನಡೆಸುತ್ತಿರುವ “ಮಂಕಿ […]
ಕಾಡ್ಗಿಚ್ಚು ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಹಿಸಲು ಈಶ್ವರ ಖಂಡ್ರೆ ಸೂಚನೆ
ಬೆಂಗಳೂರು: ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುವ ವಲಯ ಸೇರಿದಂತೆ ರಾಜ್ಯದ ಯಾವುದೇ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಮತ್ತು ಅರಣ್ಯಪಡೆ ಮುಖ್ಯಸ್ಥರಿಗೆ ನೀಡಿರುವ ಸೂಚನೆಯಲ್ಲಿ, ಕಾಡ್ಗಿಚ್ಚು ನಂದಿಸಲು ಅಗ್ನಿಶಾಮಕ ಸಾಧನಗಳು ಮತ್ತು ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ನಿರ್ದೇಶಿಸಲೂ ಸೂಚಿಸಿದ್ದಾರೆ. ಚಾರ್ಮಾಡಿಘಾಟ್ ಕಾಡ್ಗಿಚ್ಚಿನ ವಿವರ ಕೇಳಿಸ ಸಚಿವರು :ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆ […]
ಕ್ಯಾಲಿಫೋರ್ನಿಯ ಮತ್ತು ಕಾಡ್ಗಿಚ್ಚಿನ ಉರಿ
ಕ್ಯಾಲಿಫೋರ್ನಿಯ ರಾಜ್ಯ ಹಳೆಯ ಕಾಡ್ಗಿಚ್ಚುಗಳಿಂದ ಪಾಠ ಕಲಿತದ್ದು ಏನು? ಹಿಂದೆಲ್ಲ ನಾಲ್ಕಾರು ತಿಂಗಳುಗಳವರೆಗೆ ಕಾಡ್ಗಿಚ್ಚುಗಳು ಕ್ಯಾಲಿಫೋರ್ನಿಯಾದಲ್ಲಿ ನಿರಂತರ ಉರಿದ ಉದಾಹರಣೆಗಳಿವೆ. ಹೀಗಿದ್ದೂ ಅಮೆರಿಕ ಏಕೆ ಮೈಮರೆಯಿತು? ಹವಾಮಾನ ಬದಲಾವಣೆಯ ಕಾವು ತಟ್ಟಿದ್ದು ಇನ್ನೂ ಸಾಲದೆ ಅದಕ್ಕೆ? ವಿಜ್ಞಾನ ಲೇಖಕ ಹಾಸನದ ಕೆ.ಎಸ್.ರವಿಕುಮಾರ್ ಅವರು ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚಿನ ಕುರಿತು ಬರೆಯುವ ಸರಣಿ ಲೇಖನದ ಮೊದಲ ಭಾಗ ಇಲ್ಲಿದೆ.ದಕ್ಷಿಣ ಕ್ಯಾಲಿಫೋರ್ನಿಯಾದ ಲಾಸ್‍ಎಂಜೆಲಿಸ್ ಕೌಂಟಿಯನ್ನು ಸುಟ್ಟ ಕಾಡ್ಗಿಚ್ಚಿನ ವಿಡಿಯೋಗಳನ್ನು ಸತತ ನೋಡಿದ ಮೇಲೆ ಒಂದು ದೊಡ್ಡ ದೇಶದಲ್ಲಿ ಮಿಲಿಟರಿ ಸೈನಿಕರಿಗಿಂತ ಬೆಂಕಿ […]