ಖಾಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಕರೆ

ಶಿವಮೊಗ್ಗ : ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮವು ಗುತ್ತಿಗೆ ಆಧಾರದ ಮೇಲೆ ಖಾಲಿ ಹುದ್ದೆಗಳಾದ ನ್ಯೂರಾಲಜಿಸ್ಟ್, ಶುಶ್ರ‍್ರೂಷಕ ಅಧಿಕಾರಿ, ಫಿಸಿಯೊಥೆರಪಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್, ಸ್ಪೀಚ್ ಥೆರಪಿಸ್ಟ್ ಹಾಗೂ ಜಿಲ್ಲಾ ಸಂಯೋಜಕರ ಹುದ್ದೆಗೆ ಭರ್ತಿ ಮಾಡುವ ಸಂಬಂಧ ನೇರ ಸಂದರ್ಶನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗೆ ಕನ್ನಡವನ್ನು ಸ್ಪಷ್ಟವಾಗಿ ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು.ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಜೂನ್ 19 ರಿಂದ 25 ರವರೆಗೆ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆಯ ತನಕ ಮಾತ್ರ ವಿತರಿಸಲಾಗುವುದು. […]
ಶಿಕಾರಿಪುರ ಗಾಂಜಾ ಮಾರಟ ಆರೋಪಿಗಳಿಗೆ ಕಠಿಣ ಕಾರಗೃಹ ಶಿಕ್ಷೆ..!

ಶಿಕಾರಿಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರ ಗುಂಡಿ ಏರಿಯಾದಲ್ಲಿ,ದಿನಾಂಕಃ 05-12-2021 ರಂದು ಮಾದಕ ದ್ರವ್ಯ ಗಾಂಜಾ ಮಾರಾಟ ಮಾಡುತ್ತಿದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಪಿಐ ಗುರುರಾಜ್ ಮತ್ತು ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಆರೋಪಿತರಾದ ಯಾಸಿರ್ ಪಾಷಾ ಹಾಗೂ ಶಹಜಾನ್ @ ಸಾನಿಯಾ ಬೇಗಂ* ರವರುಗಳ ವಿರುದ್ಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0113/2021 ಕಲಂ 8(c), 20 (b) (II)(B), NDPS Act ರೀತ್ಯಾ ಪ್ರಕರಣ […]
ಶಿವಮೊಗ್ಗ ಪೋಲಿಸರ ಲಾಠಿ ಚಾರ್ಜ್ ಕ್ರಮಕ್ಕೆ ಜನರ ಮೆಚ್ಚುಗೆ..!

ಶಿವಮೊಗ್ಗ: ಆರ್ ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನೂಕು ನುಗ್ಗಲು ಕಾಲ್ತುಳಿತಕ್ಕೆ ಅಮಾಯಕರ ಸಾವು ಸಂಭವಿಸಿದ್ದು ನಿನ್ನೆ ದಿನ ರಾತ್ರಿ ಶಿವಮೊಗ್ಗ ದಲ್ಲಿ ಲಘು ಲಾಠಿ ಪ್ರಹಾರ ಮಾಡಿ ಬಿಗಿಯಾದ ಕ್ರಮ ಜರುಗಿಸಿರುವುದು ಸೂಕ್ತ ನಿರ್ಧಾರ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಒಂದು ಸಣ್ಣ ಘಟನೆ ಶಿವಮೊಗ್ಗದ ಶಾಂತಿ ನೆಮ್ಮದಿಯನ್ನೇ ಬುಡ ಮೇಲು ಮಾಡಿಬಿಡುತ್ತದೆ ಈ ಹಿಂದಿನ ಹಲವಾರು ಘಟನೆಗಳು ನಮಗೆ ಪಾಠವಾಗಿದ್ದು ನಿನ್ನೆ ರಾತ್ರಿ […]
ಉಪನೋಂದಣಿ ಕಚೇರಿ 2ನೇ ಮತ್ತು 4ನೇ ಶನಿವಾರ ಮತ್ತು ಭಾನುವಾರದಂದು ಕಾರ್ಯನಿರ್ವಹಣೆ..!

ಶಿವಮೊಗ್ಗ: ಜೂನ್ ಮಾಹೆಯಲ್ಲಿ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ ಶಿವಮೊಗ್ಗ ಉಪನೋಂದಣಿ ಕಚೇರಿ ಜೂ. 01, ತೀರ್ಥಹಳ್ಳಿ ಉಪನೋಂದಣಿ ಕಚೇರಿ ಜೂ.08, ಶಿಕಾರಿಪುರ ಉಪನೋಂದಣಿ ಕಚೇರಿ ಜೂ.14, ಸೊರಬ ಉಪನೋಂದಣಿ ಕಚೇರಿ ಜೂ.15, ಸಾಗರ ಉಪನೋಂದಣಿ ಕಚೇರಿ ಜೂ.22, ಭದ್ರಾವತಿ ಉಪನೋಂದಣಿ ಕಚೇರಿ ಜೂ.28 ಹಾಗೂ ಹೊಸನಗರ ಉಪನೋಂದಣಿ ಕಚೇರಿ ಜೂ.29 ರಂದು ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕುವೆಂಪು ವಿವಿ, ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಯಡವಟ್ಟು,ಪರೀಕ್ಷೆ ದಿಢೀರ್ ರದ್ದು: ಗೊದ್ದಲಕ್ಕೆ ಕಾರಣರಾದ ಅಧ್ಯಾಪಕರ ವಿರುದ್ಧ ಕ್ರಮಕ್ಕೆ ಸೂಚನೆ

ಶಿವಮೊಗ್ಗ : ಪ್ರಶ್ನೆ ಪತ್ರಿಕೆಯಲ್ಲಿನ ಗೊಂದಲದಿಂದಾಗಿ ಕುವೆಂಪು ವಿಶ್ವವಿದ್ಯಾಲಯದ ಬಿ.ಎ. ಕನ್ನಡ ಐಚ್ಛಿಕ ಪರೀಕ್ಷೆ ದಿಢೀರ್ ರದ್ದಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆಗಳನ್ನು ಹಿಂಪಡೆದು ಕಳುಹಿಸಲಾಗಿದೆ. ಬಿ.ಎ. 6ನೇ ಸೆಮಿಸ್ಟರ್ ಐಚ್ಛಿಕ ಕನ್ನಡ ಪರೀಕ್ಷೆ (ಪ್ರಶ್ನೆ ಪತ್ರಿಕೆ ಸಂಖ್ಯೆ 30632) ಇಂದು ನಿಗದಿಯಾಗಿತ್ತು. ಆದರೆ ಪ್ರಶ್ನೆ ಪತ್ರಿಕೆ ಬದಲಾದ ಹಿನ್ನೆಲೆ ಗೊಂದಲ ಉಂಟಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಲಕೋಟೆ ತೆರೆದಾಗ ಪ್ರಶ್ನೆ ಪತ್ರಿಕೆಯಲ್ಲಿನ ಸಮಸ್ಯೆ ಗೊತ್ತಾಗಿದೆ. ಆತಂಕ, ಗೊಂದಲದಲ್ಲಿ ಸಿಬ್ಬಂದಿ, ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಯಿಂದ ಇವತ್ತು […]
ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷಾ ಕಾರ್ಯಕ್ಕೆ ಸಹಕರಿಸಿ : ಗುರುದತ್ತ ಹೆಗಡೆ

ಶಿವಮೊಗ್ಗ: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಕುರಿತಂತೆ ಮೇ 5 ರಿಂದ 21 ವರೆಗೆ ಜಿಲ್ಲೆಯಲ್ಲಿ ಗಣತಿದಾರರು ಮನೆ-ಮನೆಗೆ ತೆರಳಿ ಸಮೀಕ್ಷೆ ಕಾರ್ಯ ನಡೆಸಲಿದ್ದು ಈ ಸಮೀಕ್ಷೆಯಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿಯ ಸಮುದಾಯದವರು ತಮ್ಮ ಮೂಲಜಾತಿಯನ್ನು ತಿಳಿಸಬಹುದಾಗಿದ್ದು, ಸಮೀಕ್ಷಾ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕೋರಿದ್ದಾರೆ. ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತಂತೆ ಗೌರವಾನ್ವಿತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ ದಾಸ್ ರವರ ಏಕಸದಸ್ಯ ವಿಚಾರಣಾ ಆಯೋಗ ರಚಿಸಿದ್ದು, ಆಯೋಗದಿಂದ ಪರಿಶಿಷ್ಟ […]
ಸೊರಬ ತಾಲೂಕಿನಲ್ಲಿ ನೀರಾವರಿ ಬ್ಯಾರೇಜ್ಗಳ ನಿರ್ಮಾಣ ಕಾಮಗಾರಿಗೆ ಚಾಲನೆ: ಮಧು ಬಂಗಾರಪ್ಪ

ಶಿವಮೊಗ್ಗ: ವರದಾನದಿಯ ಅಭಿವೃದ್ಧಿಗಾಗಿ ಕೈಗೆತ್ತಿ ಕೊಂಡಿರುವ ಈ ಯೋಜನೆಗಳಿಂದಾಗಿ ತಾಲೂಕಿನ 39 ಗ್ರಾಮಗಳ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು, ಕೆರೆ-ಕಟ್ಟೆ-ಕಾಲುವೆಗಳ ಭರ್ತಿ ಮಾಡಲು ಸಹಕಾರಿಯಾಗಲಿದೆ. ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. 3013 ಎಕರೆ ಭೂ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. 53 ಕಿ.ಮೀ. ಯೋಜನಾ ವ್ಯಾಪ್ತಿಯ ಉದ್ದವಿದ್ದು, ಅಂದಾಜು 218.62 ಎಂ.ಸಿ.ಎಫ್ .ಟಿ. ಸಾಮರ್ಥ್ಯದ ನೀರಿನ ಶೇಖರಣೆ ಆಗಲಿದೆ ಎಂದರು. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಸೊರಬ ತಾಲೂಕಿನ ಕಡಸೂರು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ […]
ವಿದ್ಯುತ್ ಮಾರ್ಗಗಳ ನಿರ್ಮಾಣದಲ್ಲಿ ರೈತರ ಹಿತ ಕಾಯಲು ಸೂಚನೆ – ಮಧು ಬಂಗಾರಪ್ಪ

ಶಿವಮೊಗ್ಗ : ಜಿಲ್ಲೆಯಲ್ಲಿ ಈಗಾಗಲೇ ಮಂಜೂರಾಗಿ ಕಾಮಗಾರಿ ಕೈಗೆತ್ತಿಕೊಂಡಿರುವ ಜಡೆ-ಬನವಾಸಿ ಮತ್ತು ಈಸೂರು-ಅಂಜನಾಪುರ 110ಕೆ.ವಿ. ವಿದ್ಯುತ್ಪ್ರಸರಣಾ ಮಾರ್ಗದಲ್ಲಿ ಬರುವ ರೈತರೊಂದಿಗೆ ಸಂಬಂಧಿಸಿದ ಮೆಸ್ಕಾಂ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಶೀಘ್ರ ಸಮಾಲೋಚನೆ ನಡೆಸಿ, ರೈತರಿಗೆ ಅನುಕೂಲವಾಗುವ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು. ಇಂದು ನಗರದ ಲೋಕೋಪಯೋಗಿ ಭವನದಲ್ಲಿ ವಿವಿಧ ಇಲಾಖೆಗಳ ಹಲವು ಯೋಜನೆಗಳ ಪ್ರಗತಿ ಪರಿಶೀಲನೆ ಸರಣಿ ಸಭೆಗಳ ಅಧ್ಯಕ್ಷತೆ […]
ತುರ್ತು ಚಿಕಿತ್ಸಾ ವೈದ್ಯರ ನೇರ ಸಂದರ್ಶನಕ್ಕೆ ಆಹ್ವಾನ

ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಅಧೀನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿಯಿರುವ 13 ತುರ್ತು ಚಿಕಿತ್ಸಾ ವೈದ್ಯರು/ಅಪಘಾತ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ರೋಸ್ಟರ್ ಮತ್ತು ಮೆರಿಟ್ ಅಧಾರದಲ್ಲಿ ನೇಮಕ ಮಾಡಲು ಅರ್ಹ ಎಂ.ಬಿ.ಬಿ.ಎಸ್. ಪದವೀಧರ ವೈದ್ಯರುಗಳ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಹುಟ್ಟಿದ ದಿನಾಂಕ ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳ ಒಂದು ಸೆಟ್ ನಕಲು ಮತ್ತು ಮೂಲ […]
ಪಕ್ಷದಲ್ಲಿ ಏನೆಲ್ಲಾ ಡ್ಯಾಮೇಜ್ ಆಗಬೇಕು ಎಲ್ಲಾವೂ ಆಗಿದೆ: ಬಿವೈ ವಿಜಯೇಂದ್ರ

ರಾಜ್ಯ ಬಿಜೆಪಿಯಲ್ಲಿನ ಬಣ ರಾಜಕೀಯ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪಕ್ಷಕ್ಕೆ ಏನೆಲ್ಲಾ ಡ್ಯಾಮೇಜ್ ಆಗಬೇಕು ಎಲ್ಲಾ ಆಗಿದೆ ಇನ್ನೊಂದು ವಾರದಲ್ಲಿ ರಾಜ್ಯಾಧ್ಯಕ್ಷರು ಯಾರು ಆಗಲಿದ್ದಾರೆ ಎಲ್ಲಾ ತಿಳಿಯಲಿದೆ. ಬಿಜೆಪಿ ಯತ್ನಲ್ ಬಣದಿಂದ ದೆಹಲಿ ಪ್ರವಾಸ ಕೈಗೊಂಡಿದ್ದು ಇಂದು ಬಿಜೆಪಿ ಹೈ ಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. ಈ ಕುರಿತು ಶಿವಮೊಗ್ಗದಲ್ಲಿ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವರ್ಷದಿಂದ ನಾನು ಯಾರ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ ಪಕ್ಷಕ್ಕೆ ನಿಷ್ಠನಾಗಿ ದುಡಿಯುತ್ತಿದ್ದೇನೆ.ಇನ್ನೋಂದು ವಾರ […]