ಅಯ್ಯಪ್ಪ ಮಾಲಾಧಾರಿಗಳ ಮೇಲೆ ನೌಕಾನೆಲೆ ಸಿಬ್ಬಂದಿ ಹಲ್ಲೆ: ಕಾರವಾರದಲ್ಲಿ ಉದ್ವಿಗ್ನ
ಕಾರವಾರದ ನೌಕಾನೆಲೆ ಸಿಬ್ಬಂದಿಯಿಂದ ಅಯ್ಯಪ್ಪ ಮಾಲಾಧಾರಿಗಳ ಮೇಲೆ ನಡೆದ ಹಲ್ಲೆಯಿಂದಾಗಿ ನೇವಲ್ ಹೌಸಿಂಗ್ ಕಾಲೋನಿಯಲ್ಲಿ ಪ್ರತಿಭಟನೆ ಮಾಡಲಾಗಿದೆ. ಹಲ್ಲೆಗಾರರನ್ನು ಬಂಧಿಸುವಂತೆ ಒತ್ತಾಯಿಸಿ ಸ್ಥಳೀಯರು ಪ್ರತಿಭಟಿಸುತ್ತಿದ್ದಾರೆ. ರಾಜಕೀಯ ನಾಯಕರು ಪ್ರತಿಭಟನೆಗೆ ಬೆಂಬಲಿಸಿದ್ದಾರೆ. ಪೊಲೀಸರು ಭದ್ರತಾ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಘಟನೆಯಿಂದ ಕಾರವಾರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹಾಸನ: ಪತ್ನಿ ಕಿರುಕುಳ ಆರೋಪ, ಸಾಫ್ಟ್‌ವೇರ್ ಇಂಜಿನಿಯರ್ ಪ್ರಮೋದ್ ಆತ್ಮಹತ್ಯೆ
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ನಂತರ ಕರ್ನಾಟಕದಲ್ಲಿ ಅಂತಹದ್ದೇ ಕೆಲವು ಪ್ರಕರಣಗಳು ವರದಿಯಾಗುತ್ತಿವೆ. ಹೆಂಡತಿ ಕಾಟಕ್ಕೆ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ವರದಿಯಾಗಿತ್ತು. ಇದೀಗ ಹಾಸನದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಪತ್ನಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2ನೇ ಹೆಂಡ್ತಿ ಮಾತು ಕೇಳಿ ಮೊದಲ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿರಾಯ
ಬೆಳಗಾವಿ: 2ನೇ ಹೆಂಡತಿಯನ್ನು ಬಿಟ್ಟು ತನ್ನ ಬಳಿಯೇ ಇರುವಂತೆ ಪೀಡಿಸುತ್ತಿದ್ದ ಮೊದಲ ಹೆಂಡ್ತಿಯನ್ನೇ ಪತಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ನಡೆದಿದೆ. ಶಮಾ ರಿಯಾಜ್ ಪಠಾಣ್(25) ಕೊಲೆಯಾದ ಮೊದಲ ಹೆಂಡತಿ. ರಿಯಾಜ್ ಪಠಾಣ್(30) ಕೊಲೆ ಮಾಡಿದ ಪಾಪಿ ಗಂಡ. ಎರಡನೇ ಹೆಂಡತಿ ಫರ್ಜಾನಾ ಪಠಾಣ್ ಮಾತು ಕೇಳಿ ರಿಯಾಜ್, ಮೊದಲ ಪತ್ನಿ ಶಮಾ ಮಲಗಿದ್ದಾಗ ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಶಮಾ ಪಠಾಣ್ 27ವರ್ಷದ ಈಕೆ […]
ತಂಗಿಗೆ ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದನಿಗೆ ಅಣ್ಣನಿಂದ ಧರ್ಮದೇಟು
ನೆಲಮಂಗಲ: ಇನ್ಸ್ಟಾಗ್ರಾಂನಲ್ಲಿ ಯುವತಿಗೆ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದನಿಗೆ ಯುವತಿ ಅಣ್ಣನಿಂದ ಧರ್ಮದೇಟು ನೀಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸತೀಶ್ಗೆ ಯುವತಿ ಅಣ್ಣ ರಮೇಶ್ನಿಂದ ಹಲ್ಲೆ ಮಾಡಲಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸತೀಶ್ ಇನ್ಸ್ಟಾಗ್ರಾಂನಲ್ಲಿ ಯುವತಿಗೆ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ. ಯುವತಿ ಮೊಬೈಲ್ನಿಂದ ಲೊಕೇಷನ್ ಹಾಕಿದ್ದ ಅಣ್ಣ ರಮೇಶ್, ಕೆಂಪಲಿಂಗನಹಳ್ಳಿ ಬಂದಾಗ ಏಕಾಏಕಿ ಮುಖಕ್ಕೆ ಗುದ್ದಿ ತೀವ್ರ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಸತೀಶ್ನನ್ನು ಖಾಸಗಿ ಆಸ್ಪತ್ರೆಗೆ […]
ಲಾರಿ ಸಮೇತ ಕೋಟ್ಯಂತರ ರೂ ಮೌಲ್ಯದ ಅಡಿಕೆಯೊಂದಿಗೆ ಚಾಲಕ ಪರಾರಿ…
ಚಿಕ್ಕಮಗಳೂರು: ಲಾರಿ ಸಮೇತ ಕೋಟ್ಯಂತರ ಮೌಲ್ಯದ ಅಡಿಕೆ (Areca Nut) ಕಳ್ಳತನ ಮಾಡಿದ್ದ ಐವರು ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. 10552500 ಮೌಲ್ಯದ 335 ಚೀಲ ಅಡಿಕೆ ಕಳ್ಳತನ ಮಾಡಿದ್ದರು. ಹಮ್ಜ, ಮೊಹಮ್ಮದ್ ಗೌಸ್ ಖಾನ್, ಮೊಹಮ್ಮದ್ ಸುಭಾನ್, ಮೊಹಮ್ಮದ್ ಫಯಾಜ್ ಮತ್ತು ಮೊಹಮ್ಮದ್ ಸಾದಿಕ್ ಬಂಧಿತರು. ಬಂಧಿತರಿಂದ 1 ಕೋಟಿ ರೂ. ಗೂ ಅಧಿಕ ಮೌಲ್ಯದ ಅಡಕೆ, 12 ಚಕ್ರದ ಲಾರಿ ಮತ್ತು 2.30 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ. ಬೀರೂರು ಪೊಲೀಸ್ […]