ಶಿಕಾರಿಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರೊಬ್ಬರು ಲಂಚವನ್ನು ಸ್ವೀಕರಿಸುವ ವೇಳೆ ಲೋಕಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಗ್ರಾಮದ ಸುನೀಲ್ ಎಂಬಾತ ತಮ್ಮ ಸಂಬಂಧಿಕರೊಬ್ಬ ಮರಣೋತ್ತರ ವರದಿ ಪಡೆಯಲು ಅರ್ಜಿ ಸಲ್ಲಿಸಿದ್ದರು ವರದಿಯನ್ನು ನೀಡಲು ಡಾ.ಗೋಪಲ್ ಜಿ ಹರಗಿ ಅವರು 20,000 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು 10,000 ಲಂಚದ ಹಣವನ್ನು ನೀಡುವ ವೇಳೆ ಲೋಕಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಟ್ರಾಪ್ ಕಾರ್ಯಾಚರಣೆಯಲ್ಲಿ ಲೋಕಯುಕ್ತ ಅಧೀಕ್ಷಕರಾದ ಮಂಜುನಾಥ ಚೌಧರಿ ಉಪ ಅಧೀಕ್ಷಕರಾದ ಚಂದ್ರಶೇಖರ್ ಸಿಪಿಐ ಗುರುರಾಜ್ , ಹಾಗೂ ಲೋಕಯುಕ್ತ ಸಿಬ್ಬಂದಿಗಳು ದಾಳಿ ವೇಳೆ ಇದ್ದರು.
News By: Raghu Shikari-7411515737