ಶಿಕಾರಿಪುರ ಪಟ್ಟಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಪ್ರಕರಣ ತನಿಖೆ ನಡೆಸಿದ ಪೋಲಿಸರು 16 ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳುವಾದ ಬೈಕ್ ಹಾಗೂ ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 1, ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ. ಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಕೇಶವ್* ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ ಮತ್ತು ಸಂತೋಷ್ ಪಾಟೀಲ್, ಪೊಲೀಸ್ ವೃತ್ತ ನಿರೀಕ್ಷಕರು, ಶಿಕಾರಿಪುರ ಟೌನ್ ವೃತ್ತ ರವರ ಮೇಲ್ವಿಚಾರಣೆಯಲ್ಲಿ ಶರತ್ ಪಿಎಸ್ಐ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳಾದ ಎಎಸ್ಐ ಮಲ್ಲೇಶಪ್ಪ, ವಿಶ್ವನಾಥ್,ಹೆಚ್ ಸಿ ರವರಾದ* ಸಂದೀಪ್ ಗಂಗಾಧರ್, ಸಿಪಿಸಿ ರವರಾದ ಶಿವಾಜಿ, ಗಿರೀಶ್, ಕೊಟ್ರೇಶ್, ಕುಮಾರ್, ಗಜೇಂಧ್ರ, ವಿಜಯ್, ಚೇತನ್ ನಾಗರಾಜ್ ನವೀನ್, ರಾಜ್ ಕುಮಾರ್, ಜಯಶೀಲ, ವೀರೇಶ್ ಹಾಗೂ ತಾಂತ್ರಿಕ ವಿಭಾಗದ ಹೆಚ್ ಸಿ ಇಂದ್ರೇಶ್ ಮತ್ತು ಎ ಹೆಚ್ ಸಿ ಕೃಷ್ಣಪ್ಪ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ಪ್ರಕರಣದ ಆರೋಪಿತಯಾದ ಪ್ರತಾಪ್, 33 ವರ್ಷ, ದೊಡ್ಡಲಿಂಗೇನಹಳ್ಳಿ, ತರೀಕೆರೆ ಚಿಕ್ಕಮಗಳೂರು ಮತ್ತು ಭೋಜರಾಜ, 32 ವರ್ಷ, ಬಿಳಚೋಡ್ ಗ್ರಾಮ, ಜಗಳೂರು ದಾವಣಗೆರೆ ಇವರುಗಳನ್ನು ಬಂಧಿಸಿಇಬ್ಬರು ಆರೋಪಿತರಿಂದ ಕಳತನವಾಗಿದ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ 01, ಅರಸೀಕೆರೆ* ಪೊಲೀಸ್ ಠಾಣೆಯ 01, ತರೀಕೆರೆ ಪೊಲೀಸ್ ಠಾಣೆಯ 02, ಚನ್ನರಾಯ ಪಟ್ಟಣ ಪೊಲೀಸ್ ಠಾಣೆಯ 01, ಶಿರಾ ಪೊಲೀಸ್ ಠಾಣೆಯ 01, ಚಿತ್ರದುರ್ಗ ಪೊಲೀಸ್ ಠಾಣೆಯ 01, ಜಗಳೂರು ಪೊಲೀಸ್ ಠಾಣೆಯ 01, ಕೂಡ್ಲಿಗಿ ಪೊಲೀಸ್ ಠಾಣೆಯ 01, ಕೊಟ್ಟೂರು ಪೊಲೀಸ್ ಠಾಣೆಯ 01, ಹಗರೀ ಬೊಮ್ಮನ ಹಳ್ಳಿ ಪೊಲೀಸ್ ಠಾಣೆಯ 01, ಹೊಸಪೇಟೆ ಪೊಲೀಸ್ ಠಾಣೆಯ 01, ಬೆಂಡೆಗೇರೆ ಪೊಲೀಸ್ ಠಾಣೆಯ 01, ಮುನಿರಾಬಾದ್* ಪೊಲೀಸ್ ಠಾಣೆಯ 01, ಮುಂಡರಗಿ ಪೊಲೀಸ್ ಠಾಣೆಯ 01 ಮತ್ತು ಹೂವಿನ ಹಡಗಲಿ ಪೊಲೀಸ್ ಠಾಣೆಯ 01 ಸೇರಿ ಅಂದಾಜು ಮೌಲ್ಯ 20,50,000/- ರೂಗಳ ಒಟ್ಟು 16 ಬೈಕ್ ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.