ಶಿಕಾರಿಪುರ ಪಟ್ಟಣದ ಆರಾಧ್ಯದೈವ ಶ್ರೀ ಹುಚ್ಚರಾಯಸ್ವಾಮಿ ದೇವರ ಬ್ರಹ್ಮ ರಥೋತ್ಸವ ಶನುವಾರ ಅದ್ದೂರಿಯಾಗಿ ನೆರವೇರಿತು.
ಹುಚ್ಚರಾಯಸ್ವಾಮಿ ದೇವರ ಉತ್ಸವಮೂರ್ತಿ ಪೂಜೆ ಸಲ್ಲಿಸಿ ಪಲ್ಲಕ್ಕಿ ಮೂಲಕ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ ರಥದ ಉತ್ಸವ ನಡೆಸಲಾಯಿತು.

ರಥೋತ್ಸವದ ವೇಳೆ ಗರುಡ ದರ್ಶನ..!
ಪ್ರತಿವರ್ಷ ಬ್ರಹ್ಮ ರಥೋತ್ಸವದ ವೇಳೆ ಆಕಾಶದಲ್ಲಿ ಗರುಡ ರಥದ ಸುತ್ತು ಹಾಕುತ್ತದೆ ನಂತರ ರಥವನ್ನು ಎಳೆಯಲಾಗುತ್ತದೆ.

ಮಾಜಿ ಸಿಎಂ ಬಿಎಸ್ ವೈ ಭಾಗಿ:
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಹುಚ್ಚರಾಯಸ್ವಾಮಿಯ ಪರಮಭಕ್ತರಾಗಿದ್ದು ರಥೋತ್ಸವಕ್ಕೆ ತಪ್ಪದೆ ಆಗಮಿಸುತ್ತಾರೆ. ಮಕ್ಕಳಾದ ಸಂಸದ ಬಿವೈ ರಾಘವೇಂದ್ರ , ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿವೈ ವಿಜಯೇಂದ್ರ ಹಾಗೂ ಕುಟುಂಬದವರು ಭಾಗವಹಿಸಿದರು.
News by: Raghu Shikari-7411515737