ಶಿಕಾರಿಪುರ: ಪಟ್ಟಣದ ತಾಲೂಕ್ ಕಛೇರಿ ಸಭಾಂಗಣದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಿಸಿ ಶಾಸಕ ಬಿವೈ ವಿಜಯೇಂದ್ರ ಮಾತನಾಡಿದರು.
ಸರ್ಕಾರ ಕಂದಾಯ ಇಲಾಖೆಯ ಅಧಿಕಾರಿಗಳ ಸೇವೆಯನ್ನು ಗಮನಿಸಿ ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಹೆಚ್ಚು ಸೇವೆ ಒದಗಿಸು ಅಧಿಕಾರಿಗಳಿಗೆ ಸಹಕಾರಿಯಾಗಲು ಲ್ಯಾಪ್ ಟಾಪ್ ನೀಡಲಾಗಿದೆ.
ಶಿಕಾರಿಪುರ ತಾಲೂಕು ರಾಜ್ಯದಲ್ಲಿ ಅಭಿವೃದ್ಧಿ ಹೊಂದಿದ ತಾಲೂಕು ಎಂಬ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಅಧಿಕಾರಿಗಳು ಜನರಿಗೆ ತೊಂದರೆ ಕೊಡದೆ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಬೇಕು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಸಂಸದ ಬಿವೈ ರಾಘವೇಂದ್ರ ಮಾತನಾಡಿ ಅಧಿಕಾರಿಗಳು ಜನರಿಗೆ ತೊಂದರೆ ಕೊಡದೇ ಹಣಕ್ಕೆ ಆಸೆ ಪಡದೆ ಸೇವೆ ಸಲ್ಲಿಸಬೇಕು ಜನರು ನಿಮಗೆ ಹಾರೈಹಿಸುತ್ತಾರೆ. ಗೌರಯುತವಾಗಿ ಜನರನ್ನು ನಡೆಸಿಕೊಳ್ಳಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸವನ್ನು ಮಾಡಬೇಕಾಗಿದೆ.
ತಹಶಿಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಮಾತನಾಡಿ ಶಿಕಾರಿಪುರ ತಾಲೂಕಿನಲ್ಲಿ 90%ರಷ್ಟು ಆಧಾರ್ ನೊಂದಿಗೆ ಪಹಣಿ ಜೋಡಣೆ ಆಗಿದೆ ರಾಜ್ಯದಲ್ಲಿ 10 ಸ್ಥಾನದಲ್ಲಿ ಇದೆ.ಪೋಡಿ ಮುಕ್ತ ಗ್ರಾಮವಾಗಿಸಲು ಅಧಿಕಾರಿಗಳು ಸ್ವಯಂ ಸರ್ವೆ ಕಾರ್ಯ ಮಾಡುತ್ತಿದ್ದಾರೆ.

ಕೆರೆ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ ಜಿಲ್ಲೆಯಲ್ಲಿ ಮೊದಲನೇ ಸ್ಥಾನ 12800 ಅರ್ಜಿ ಬಂದಿದ್ದು ಪರಿಶೀಲನೆ ನಡೆಸಿ ಅರ್ಹರಿಗೆ ಹಕ್ಕು ಪತ್ರ ನೀಡಲು ಎಲ್ಲಾ ರೀತಿಯಲ್ಲಿ ಪ್ರಗತಿ ಸಾಧಿಸಿದೆ ಇಡೀ ರಾಜ್ಯದಲ್ಲಿ ತಾಲೂಕು ಮೊದಲನೇ ಸ್ಥಾನ ಪಡೆಸದುಕೊಂಡಿದೆ. ರೆಕಾರ್ಡ್ ರೂಂ ದಾಖಲೆಗಳನ್ನು ಶೀಘ್ರವಾಗಿ ಜನರಿಗೆ ಸೇವೆ ನೀಡಲು ಇನ್ನೂ ಹೆಚ್ಚಿನ ಶ್ರಮವಹಿಸಲಾಗಿದೆ ಎಂದರು.
News by: Raghu Shikari-7411515737