ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಸವರಾಜ್ ಎಂಬಾತನೇ ಮೃತ ವ್ಯಕ್ತಿ. ಈ ಘಟನೆ ಜೈಲಿನ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಏನಿದು ಪ್ರಕರಣ..?
ಕೌಟುಂಬಿಕ ಕಲಹದ ಹಿನ್ನೆಲೆ ಗಂಡನೇ ಹೆಂಡತಿಯ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ.ಶಿಕಾರಿಪುರ ಪಟ್ಟಣದ ಸೊಸೈಟಿ ಕೇರಿಯಲ್ಲಿ ಘಟನೆ ಸಂಭವಿಸಿತ್ತು. ಈ ಘಟನೆ ಜೂನ್ 12 ರಂದು ನಡೆದಿತ್ತು.
ಲಾರಿ ಚಾಲಕ ಬಸವರಾಜು ಎಂಬಾತ ತನ್ನ ಪತ್ನಿ ಮಂಜುಳಾ (32) ಎಂಬುವವರ ಕೊಲೆ ಮಾಡಿದ್ದನು ಕುಡಿತದಲ್ಲಿದ್ದ ಬಸವರಾಜು ಪತ್ನಿಯ ನಡುವಿನ ಜಗಳವಾಡುತ್ತಿದ್ದನು.
ಬಸವರಾಜು ಮತ್ತು ಮಂಜುಳಾ ಮದುವೆಯಾಗಿ 15 ವರ್ಷವಾಗಿದೆ. ದಂಪತಿಗೆ ಇಬ್ಬರು ಹೆಣ್ಣು , ಓರ್ವ ಗಂಡು ಮಗ ಇದ್ದಾನೆ. ಮಂಜುಳಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಜೂನ್ 11 ರಂದು ಪ್ರಕರಣ ವಿಕೋಪಕ್ಕೆ ಹೋದ ಪರಿಣಾಮ ಹೆಂಡತಿಯ ಹತ್ಯೆ ನಡೆದಿದೆ. ಪ್ರಕರಣ ಶಿಕಾರಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿತ್ತು. ಬಸವರಾಜ್ ಹೊಳೆಹೊನ್ನೂರು ನಿವಾಸಿಯಾಗಿದ್ದು ಬಳ್ಳಾರಿ ಮೈನ್ಸ್ ಲಾರಿ ಚಾಲಕನಾಗಿದ್ದ ಎನ್ನಲಾಗಿದೆ.