ಶಿಕಾರಿಪುರ ಪಟ್ಟಣದ ಆರಾಧ್ಯ ದೈವ ಶ್ರೀ ಹುಚ್ಚುರಾಯ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಇದೇ ತಿಂಗಳ 9 ರ ಶನಿವಾರ ನೂಲು ಹುಣ್ಣಿಮೆಯ ದಿವಸ ಬರುವ ಭಕ್ತಾದಿಗಳಿಗೆ ಎ ಪಿ ಎಂ ಸಿ ವರ್ತಕರು ಮತ್ತು ರೈಸ್ ಮಿಲ್ ಮಾಲಿಕರ ಸಂಯುಕ್ತಶ್ರಯದಲ್ಲಿ ಬೆಳಗ್ಗೆಯಿಂದಲೇ ಬೃಹತ್ ಅನ್ನ ಸಂತರ್ಪಣೆ ಹಾಗೂ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿದೆ ಎಂದು ವರ್ತಕರ ಸಂಘದ ಕರಿಬಸಪ್ಪನವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರಾವಣ ಮಾಸದ ಮೂರನೇ ಶನಿವಾರದಂದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದು, ಹಾವೇರಿ ಜಿಲ್ಲೆಯ ಕದರ ಮಂಡಗಿ ಕಾಂತೇಶ, ಸಾತೇನಹಳ್ಳಿ ಶಾಂತೇಶ ಹಾಗೂ ಶಿಕಾರಿಪುರದ ಬ್ರಾಂತೇಶ (ಹುಚ್ಚುರಾಯಸ್ವಾಮಿ ) ಯ ದರ್ಶನ ಪಡೆಯಲು ಅಸಂಖ್ಯಾತ ಭಕ್ತರು ಆಗಮಿಸಲಿದ್ದು, ಆ ನಿಮಿತ್ತ ಅನ್ನ ಸಂತರ್ಪಣೆ ಏರ್ಪಡಿಸಿದ್ದು ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಬೇಕೆಂದು ಕೋರಿದರು.
ಈ ಸಂದರ್ಭ ಮಲ್ಲಿಕಪ್ಪ, ಲಕ್ಷ್ಮಣ್ ನಾಯಕ್, ಗಜಾನನ, ಮಹಾರುದ್ರಪ್ಪ, ಕುಮಾರ್, ನಾಗರಾಜ್, ಈರಣ್ಣ, ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
News By: Raghu Shikari-7411515737