ರಾಷ್ಟ್ರಧ್ವಜಕ್ಕಾಗುವ ಅಪಮಾನವನ್ನು ತಡೆಯಿರಿ – ಹಿಂದೂ ಜನಜಾಗೃತಿ ಸಮಿತಿ

ರಾಷ್ಟ್ರಧ್ವಜಕ್ಕಾಗುವ ಅಪಮಾನವನ್ನು ತಡೆಯಿರಿ – ಹಿಂದೂ ಜನಜಾಗೃತಿ ಸಮಿತಿ
Facebook
Twitter
LinkedIn
WhatsApp

ಆಗಸ್ಟ್ 15ರಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ ಆದರೆ ಅದೇ ದಿನ ರಾಷ್ಟ್ರಧ್ವಜವು ರಸ್ತೆ ಹಾಗೂ ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ ಹೀಗಾಗಿ ಪ್ಲಾಸ್ಟಿಕ್ ,ರಾಷ್ಟ್ರಧ್ವಜಗಳ ಮಾರಾಟವನ್ನು ಕೂಡಲೇ ನಿಷೇಧಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಾನ್ಯತಹಶೀಲ್ದಾರ್, ಡಿ.ವೈ. ಎಸ್. ಪಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಷ್ಟ್ರಧ್ವಜದ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮುಂಬೈ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಯಿತು ಈ ಸಂಬಂಧ ವಿಚಾರಣೆ ವೇಳೆ ನ್ಯಾಯಾಲಯವು ಪ್ಲಾಸ್ಟಿಕ್ ರಾಷ್ಟ್ರ ಧ್ವಜದಿಂದ ಆಗುವ ಅವಮಾನವನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಆದೇಶ ನೀಡಿದ್ದು ಅದರಂತೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆ ಹಾಗೂ ಶಿಕ್ಷಣ ಇಲಾಖೆಯೂ ಈ ಸಂಬಂಧ ಸುತ್ತೋಲೆ ಹೊರಡಿಸಿತ್ತು ಇದರೊಂದಿಗೆ ಕೇಂದ್ರ ಸರ್ಕಾರವು ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾಗಿದೆ ಅದರ ಪ್ರಕಾರ ಪ್ಲಾಸ್ಟಿಕ್ ಧ್ವಜವನ್ನು ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ ಇದು ಲಾಂಛನಗಳು ಮತ್ತು ಹೆಸರುಗಳ ಅನುಚಿತ ಬಳಕೆ ತಡೆ ಕಾಯಿದೆ 1950 ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆ 1971ರ ಉಲ್ಲಂಘನೆಯಾಗಿದೆ.

ರಾಷ್ಟ್ರಧ್ಚಕ್ಕೆ ಆಗುವ ಅವಮಾನವನ್ನು ತಡೆಯಲು ಸಮಿತಿಯು ಕಳೆದ 21 ವರ್ಷಗಳಿಂದ ಜನಜಾಗೃತಿ ಮೂಡಿಸುತ್ತಿದೆ ದೇಶದ ಸ್ವಾತಂತ್ರ್ಯ ಸಮರದಲ್ಲಿ ಸಮಾವೇಶಗೊಂಡ ದೇಶ ಭಕ್ತರು ಆಂಗ್ಲದ ದೌರ್ಜನ್ಯಗಳ ಸಮಯದಲ್ಲಿ ಕೈಯಲ್ಲಿ ತೆಗೆದುಕೊಂಡ ರಾಷ್ಟ್ರ ಧ್ವಜಗಳು ಭೂಮಿಯ ಮೇಲೆ ಬೀಳಬಾರದು ಎಂದು ಅನೇಕ ಲಾಟಿ ಹೊಡೆತಗಳನ್ನು ತಿಂದರು ದೌರ್ಜನ್ಯವನ್ನು ಸಹಿಸಿದರು ರಾಷ್ಟ್ರಧ್ವಜದ ಅನಾದರವನ್ನು ತಡೆಗಟ್ಟಲು ಕ್ರಾಂತಿಕಾರಿಗಳು ತಮ್ಮ ಪ್ರಾಣಗಳನ್ನು ಅರ್ಪಿಸಿದ್ದಾರೆ.

ಹೀಗಿದ್ದರೂ ಚಿಕ್ಕ ಮಕ್ಕಳಿಗೆ ಆಡಲು ವಾಹನಗಳ ಮೇಲೆ ಅಂಟಿಸುವ ಉದ್ದೇಶದಿಂದ ತೆಗೆದುಕೊಳ್ಳಲಾದ ಕಾಗದ ಮತ್ತು ಪ್ಲಾಸ್ಟಿಕ್ ಧ್ವಜಗಳು ರಸ್ತೆಗಳಲ್ಲಿ ಮತ್ತು ಕಸ ತೊಟ್ಟಿಗಳಲ್ಲಿ ನೋಡಲು ಸಿಗುತ್ತದೆ ಮತ್ತು ಅವು ಕಾಲಿನ ಕೆಳಗೆ ತುಳಿಯಲ್ಪಡುತ್ತವೆ ಆದ್ದರಿಂದ ಇದು ರಾಷ್ಟ್ರಧ್ವಜಕ್ಕೆ ಬಲಿದಾನ ನೀಡುವ ಕ್ರಾಂತಿಕಾರಿಗಳ ಅಪಮಾನವಾಗಿದೆ ಕೆಲವು ಜನರು ತ್ರಿವರ್ಣಗಳಿಂದ ತಮ್ಮ ಮುಖವನ್ನು ಬಳಿದುಕೊಳ್ಳುತ್ತಾರೆ.

ರಾಷ್ಟ್ರಧ್ವಜದ ಬಣ್ಣಗಳ ಬಟ್ಟೆಗಳನ್ನು ಧರಿಸಿ ತಿರುಗಾಡುತ್ತಾರೆ ಇದರಿಂದಲೂ ರಾಷ್ಟ್ರಧ್ವಜದ ಅಮಾನವಾಗುತ್ತಿದೆ ಹೀಗಾಗಿ ಹಿಂದೂ ಜನ ಜಾಗೃತಿ ಸಮಿತಿಯು ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಪ್ರಶ್ನೋತ್ತರ ಸ್ಪರ್ಧೆಗಳನ್ನು ಆಯೋಜಿಸುವುದು ಕರ ಪತ್ರಗಳನ್ನು ವಿತರಿಸುವುದು ಪೋಸ್ಟರ್ ಫ್ಲೆಕ್ಸ್ ಗಳನ್ನು ಹಾಕುವುದು ಸ್ಥಳೀಯ ಕೇಬಲ್ ಚಾನೆಲ್ ಗಳಲ್ಲಿ ವಿಡಿಯೋ ಗಳನ್ನು ತೋರಿಸುವುದು ರಸ್ತೆಗಳಲ್ಲಿ ಬಿದ್ದಿರುವ ರಾಷ್ಟ್ರ ಧ್ವಜವನ್ನು ಸಂಗ್ರಹಿಸುವುದು ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ರಾಷ್ಟ್ರಧ್ವಜದ ಅಪಮಾನವನ್ನು ತಡೆಗ ತಡೆಯಲು ರಾಷ್ಟ್ರಧ್ವಜ ಗೌರವ ಕೃತಿ ಸಮಿತಿಯನ್ನು ಸ್ಥಾಪಿಸಬೇಕು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಧ್ವಜಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಶಾಲೆಗಳಲ್ಲಿ ರಾಷ್ಟ್ರಧ್ವಜವನ್ನು ಗೌರವಿಸಿ ಎಂಬ ಉಪಕ್ರಮವನ್ನು ನಡೆಸಲು ಸೂಚನೆ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಯಿತು, ಈ ಸಂದರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಪರಶುರಾಮ, ಈರೇಶ್, ಶ್ರೀ ಕಲ್ಪವೃಕ್ಷ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ವಿ. ರಘು, ಬಿ. ವಿ. ಮಂಜುನಾಥ್, ಮಾಲತೇಶ್, ಬಸವನ ಗೌಡ್ರು ಇದ್ದರು.