ಕಾರ್ಗಿಲ್ ವಿಜಯ ದಿವಸ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ದಿಂದ ಈಸೂರಿನ ಹುತಾತ್ಮರ ಸ್ಮಾರಕ ಸ್ವಚ್ಚತೆ..!

ಕಾರ್ಗಿಲ್ ವಿಜಯ ದಿವಸ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ದಿಂದ ಈಸೂರಿನ ಹುತಾತ್ಮರ ಸ್ಮಾರಕ ಸ್ವಚ್ಚತೆ..!
Facebook
Twitter
LinkedIn
WhatsApp

ಶಿಕಾರಿಪುರ: ಬಿಜೆಪಿ ಯುವಮೋರ್ಚಾ ವತಿಯಿಂದ ಈಸೂರು ಗ್ರಾಮದಲ್ಲಿ ಹುತಾತ್ಮರ ಸ್ಮಾರಕ ವನ್ನು ಸ್ವಚ್ಛತೆ ಮಾಡುವ ಮೂಲಕ ಕಾರ್ಗಿಲ್ ವಿಜಯ್ ದಿವಸ್ ಆಚರಿಸಿದರು.

ಈ ವೇಳೆ ಯುವ ಮೋರ್ಚಾ ಅಧ್ಯಕ್ಷ ವೀರಣ್ಣಗೌಡ ಮಾತನಾಡಿ
ಅದಮ್ಯ ಸಾಹಸ ಅಪ್ರತಿಮ ಶೌರ್ಯ ದೇಶಭಕ್ತಿಯ ‌ಸ್ಫೂರ್ತಿಯೊಂದಿಗೆ ಶತ್ರುಗಳನ್ನು ಸದೆಬಡಿದು ಭಾರತಾಂಬೆಯ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್‌ ಯುದ್ಧದ ವೀರ ಹುತಾತ್ಮರಿಗೆ ಕಾರ್ಗಿಲ್‌ ವಿಜಯ ದಿವಸ‌ ಎಂದು ಆಚರಣೆ ಮಾಡಲಾಗುತ್ತಿದೆ.

ಈ ದಿನ ನಮ್ಮ ವೀರ ಯೋಧರಿಗೆ ಗೌರವ ಸಲ್ಲಿಸಲು ಇತಿಹಾಸದಲ್ಲಿ ಮೊಟ್ಟಮೊದಲ ಸ್ವಾತಂತ್ರ್ಯ ಘೋಷಿಸಿಕೊಂಡ ಗ್ರಾಮ ಈಸೂರಿನ ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕವನ್ನು ಸ್ವಚ್ಚತೆಗೊಳಿಸುವ ಮೂಲಕ ಆಚರಿಸಲಾಗುತ್ತಿದೆ ಎಂದರು‌.

ಈ ಸಂದರ್ಭದಲ್ಲಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಬೆಣ್ಣೆ ಪ್ರವೀಣ್,ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಲೋಹಿತನಾಯ್ಕ ಪಿ, ನಿರಂಜನ್ ತೊಗರ್ಸಿ,ಪಿ ಎಲ್ ಡಿ ಬ್ಯಾಂಕ್ ಸದಸ್ಯರಾದ ಜಗದೀಶ್, ಸುರೇಶ್,ಧಾರವಾಡ ಗೀರಿಶ, ಪ್ರಶಾಂತ,ರಾಜು, ಮಂಜು, ಚಂದ್ರು ಬಿಳಕಿ,ಹಾಲೇಶ್, ಸುದೀಪ್ ಸ್ಥಳೀಯ ಮುಖಂಡರು ಮತ್ತಿತರರು ಇದ್ದರು‌.

News By: Raghu Shikari-7411515737