ಬೆಂಗಳೂರು: ಪಶ್ಚಿಮಘಟ್ಟದ ಕಾಡಿನಲ್ಲಿ ಕಂಡುಬರುವ 32 ಕ್ಕೂ ಅಧಿಕ ಜಾತಿಯ ಕೆಎಫ್‌ಡಿ ವೈರಸ್ ಹರಡಬಲ್ಲ ಉಣ್ಣೆಗಳಲ್ಲಿ ಎರಡು ಜಾತಿಯ ಉಣ್ಣೆಗಳು ಅನುವಂಶಿಕವಾಗಿ ಕೆಎಫ್‌ಡಿ ವೈರಸ್ ಅನ್ನು ಮತ್ತೊಂದು ಪೀಳಿಗೆಗೆ ವರ್ಗಾಯಿಸುತ್ತಿರುವುದು ಸಂಶೋಧನೆಯಿಂದ ದೃಢಪಟ್ಟಿದೆ.
ಈ ಸಂಶೋಧನೆಯು ಕೆಎಫ್‌ಡಿ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಗೆ ಹೊಸ ಭರವಸೆ ನೀಡಿದೆ. ಉಣುಗು ನಿಯಂತ್ರಣವೇ ಕೆಎಫ್‌ಡಿ ನಿಯಂತ್ರಣದ ಮೊದಲ ಭಾಗವಾಗಲಿದೆ. ಕೆಎಫ್‌ಡಿ ಕುರಿತಂತೆ ಕಳೆದ 6 ವರ್ಷದಿಂದ ರಾಜ್ಯ ಅರೋಗ್ಯ ಇಲಾಖೆಯು ಸೇರಿದಂತೆ ಐಸಿಎಂಆರ್, ಐಸಿಎಆರ್ ಸಂಸ್ಥೆಗಳ ಸಹಯೋಗದಲ್ಲಿ ಸಂಶೋಧನೆ ನಡೆಸುತ್ತಿರುವ “ಮಂಕಿ ಫಿವರ್ ರಿಸ್ಕ್” ತಂಡ ಉಣುಗುಗಳ ಬಗ್ಗೆ ಅಧ್ಯಯನ ನಡೆಸುತ್ತಾ ಬಂದಿದೆ.
ಕೆಎಫ್‌ಡಿ ವೈರಸ್ ಪತ್ತೆಯಾಗಿ 60 ವರ್ಷವಾಗಿದ್ದರೂ ಅದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಆಗಿರಲಿಲ್ಲ. ಮಲೆನಾಡಿನ ಕಾಡುಗಳಲ್ಲಿ ಕಂಡುಬರುವ ಹೆಮಾಫಿಸಾಲಿಸ್ ಮತ್ತು ರೈಪಿಸೆಫಾಲಸ್ ಹೆಸರಿನ ಎರಡು ಜಾತಿಯ ಉಣುಗು ವೈರಸ್ ಅನ್ನು ತನ್ನ ಮಕ್ಕಳಿಗೂ ವರ್ಗಾಯಿಸುತ್ತಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ ಎಂದು ವಿಜ್ಞಾನಿ ಡಾ.ದರ್ಶನ್ ನಾರಾಯಣ್ ತಿಳಿಸಿದ್ದಾರೆ.
ಸುದ್ದಿ ಮತ್ತು ಜಾಹೀರಾತಿಗಾಗಿ-7411515737