ಬೆಂಗಳೂರು: ಕರ್ನಾಟಕ ಸರ್ವೋದಯ ಮಂಡಲ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಶಿವಮೊಗ್ಗದ ಶಿಕಾರಿಪುರ ತಾಲ್ಲೂಕು ಈಸೂರು ಹುತಾತ್ಮರ ಸ್ಮಾರಕದಲ್ಲಿ ರಾಷ್ಟ್ರೀಯ ಸಮಾವೇಶ ಮತ್ತು ಹುತಾತ್ಮರ ದಿನ ಆಚರಿಸುತ್ತಿದೆ.
ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಈಸೂರು ಗ್ರಾಮದ ವೀರ ಹೋರಾಟಗಾರರು ಸಕ್ರಿಯವಾಗಿ ಭಾಗವಹಿಸಿದ್ದರು.1942 ರ ಸೆಪ್ಟೆಂಬರ್ 25 ರಂದು ಗ್ರಾಮದ ವೀರಭದ್ರಸ್ವಾಮಿ ದೇವಾಲಯದ ಮೇಲೆ ತ್ರಿವರ್ಣಧ್ವಜ ಹಾರಿಸಿ ತಮ್ಮ ಗ್ರಾಮ ಸ್ವತಂತ್ರ್ಯ ಗಳಿಸಿತು. ಎಂಬುದನ್ನು ತೋರಿಸಿಕೊಟ್ಟರು.
ಈ ಮೂಲಕ ಈಸೂರಿನ ಕೀರ್ತಿ ದೇಶಾದ್ಯಂತ ಪಸರಿಸಿತ್ತು. ಒಂದು ನೂರು ಸರ್ವೋದಯ ಕಾರ್ಯಕರ್ತರು ಈ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಇಂದು ಈಸೂರು ಸ್ವಾತಂತ್ರ್ಯ ಹೋರಾಟದ ಕುರಿತು ನಾಟಕ ಪ್ರದರ್ಶನವನ್ನು ನಡೆಸಲಾಯಿತು. ನಾಳೆ ವೀರಭದ್ರೇಶ್ವರ ದೇವಸ್ಥಾನದಿಂದ ಅದ್ದೂರಿ ಮೆರವಣಿಗೆ ನಡೆಸಲಾಗುತ್ತದೆ.
ಸುದ್ದಿ ಮತ್ತು ಜಾಹೀರಾತಿಗಾಗಿ-7411515737