ದೆಹಲಿ ವಿಧಾನಸಭೆ ಚುನಾವಣೆ : ಬಿಜೆಪಿಗೆ ಭರ್ಜರಿ ಧಮಾಕ..!

ದೆಹಲಿ ವಿಧಾನಸಭೆ ಚುನಾವಣೆ : ಬಿಜೆಪಿಗೆ ಭರ್ಜರಿ ಧಮಾಕ..!
Facebook
Twitter
LinkedIn
WhatsApp

ದೆಹಲಿ: ಚುನಾವಣೆ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಇತ್ತೀಚಿನ ವರದಿಯಂತೆ ಎಲ್ಲಾ 70 ವಿಧಾನಸಭಾ ಸ್ಥಾನಗಳ ಅಂಕಿಅಂಶಗಳು ಲಭ್ಯವಿದ್ದು, 19 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ 48 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಆಮ್ ಆದ್ಮಿ ಪಕ್ಷ 22 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ದೆಹಲಿ ಎನ್‌ಸಿಟಿಯಲ್ಲಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್‌ನ ಸಂದೀಪ್ ದೀಕ್ಷಿತ್ ನವದೆಹಲಿ ಕ್ಷೇತ್ರದಲ್ಲಿ ತಮ್ಮ ಹತ್ತಿರದ ಬಿಜೆಪಿ ಅಭ್ಯರ್ಥಿ ಪರ್ವೇಶ್ ಸಾಹಿಬ್ ಸಿಂಗ್‌ ಗಿಂತ ಹಿಂದುಳಿದಿದ್ದಾರೆ. ಇತರೆ ಪ್ರಮುಖ ಆಮ್ ಆದ್ಮಿ ಪಕ್ಷದ ನಾಯಕರಾದ ಮುಖ್ಯಮಂತ್ರಿ ಅತಿಶಿ, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸೋಮನಾಥ್ ಭಾರ್ತಿ, ಸೌರಭ್ ಭಾರದ್ವಾಜ್ ಮತ್ತು ಅವಧ್ ಓಜಾ ಹಿನ್ನಡೆಯಲ್ಲಿದ್ದಾರೆ. ಕಲ್ಕಾಜಿ ಕ್ಷೇತ್ರದಲ್ಲಿ ಅತಿಶಿ ಹಿನ್ನಡೆಯಲ್ಲಿದ್ದಾರೆ, ಅಲ್ಲಿ ಬಿಜೆಪಿಯ ರಮೇಶ್ ಬಿಧುರಿ ಮುನ್ನಡೆಯಲ್ಲಿದ್ದಾರೆ. ತ್ರಿ ನಗರ ಕ್ಷೇತ್ರದ 14 ಸುತ್ತಿನ ಎಣಿಕೆಯ ನಂತರ ಬಿಜೆಪಿಯ ತಿಲಕ್ ರಾಮ್ ಗುಪ್ತಾ ಅವರ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಪ್ರೀತಿ ಜಿತೇಂದರ್ ತೋಮರ್‌ಗಿಂತ 15 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಶಾಲಿಮಾರ್ ಬಾಗ್ ಕ್ಷೇತ್ರದಲ್ಲಿ, 14 ಸುತ್ತಿನ ಎಣಿಕೆಯ ನಂತರ ಬಿಜೆಪಿಯ ರೇಖಾ ಗುಪ್ತಾ ಹತ್ತಿರದ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಬಂದನ ಕುಮಾರಿ ವಿರುದ್ಧ 29 ಸಾವಿರಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ. ದೆಹಲಿ ಕಂಟೋನ್ಮೆಂಟ್‌ನಲ್ಲಿ 8 ಸುತ್ತುಗಳಲ್ಲಿ 7ನೇ ಸುತ್ತಿನ ನಂತರ ಆಮ್ ಆದ್ಮಿ ಪಕ್ಷದ ವೀರೇಂದ್ರ ಸಿಂಗ್ ಕಡಿಯಾನ್ 1700 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆಯಲ್ಲಿದ್ದಾರೆ.

12 ಸುತ್ತುಗಳ ಎಣಿಕೆಯ ನಂತರ ಕೊಂಡ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಕುಲದೀಪ್ ಕುಮಾರ್ ಸುಮಾರು 8000 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ರಾಜೌರಿ ಗಾರ್ಡನ್‌ನಲ್ಲಿ 12 ಸುತ್ತುಗಳಲ್ಲಿ 11 ನೇ ಸುತ್ತಿನ ನಂತರ ಬಿಜೆಪಿಯ ಮಂಜಿಂದರ್ ಸಿಂಗ್ ಸಿರ್ಸಾ 16 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಸ್ತೂರ್ಬಾ ನಗರದಲ್ಲಿ, 15 ಸುತ್ತುಗಳ 13ನೇ ಸುತ್ತಿನ ನಂತರ ಬಿಜೆಪಿಯ ನೀರಜ್ ಬಸೋಯಾ ಸುಮಾರು 10 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಮತ್ತು ವಿಶ್ವಾಸ್ ನಗರದಿಂದ ಮೂರು ಬಾರಿ ಶಾಸಕರಾಗಿರುವ ಓಂ ಪ್ರಕಾಶ್ ಶರ್ಮಾ 16 ಸುತ್ತುಗಳ ಎಣಿಕೆಯ 14ನೇ ಸುತ್ತಿನ ನಂತರ 23 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಮುಸ್ತಾಬಾದ್ ಕ್ಷೇತ್ರದಲ್ಲಿ ಬಿಜೆಪಿಯ ಮೋಹನ್ ಸಿಂಗ್ ಬಿಶ್ಟ್ 38 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆಯಲ್ಲಿದ್ದಾರೆ

ಘೋಂಡಾದಲ್ಲಿ ಬಿಜೆಪಿಯ ಅಜಯ್ ಮಹಾವರ್ ಸುಮಾರು 15 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಾಬರ್‌ಪುರ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಗೋಪಾಲ್ ರೈ ತಮ್ಮ ಹತ್ತಿರದ ಪ್ರತಿಸ್ಪರ್ಧಿಗಿಂತ 20 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಡಿಯೋಲಿಯಲ್ಲಿ ಆಮ್ ಆದ್ಮಿ ಪಕ್ಷದ ಪ್ರೇಮ್ ಚೌಹಾಣ್ 19 ಸಾವಿರಕ್ಕೂ ಹೆಚ್ಚು ಮುನ್ನಡೆ ಕಾಯ್ದುಕೊಂಡಿದ್ದಾರೆ. ಜಂಗ್‌ಪುರ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಿಜೆಪಿಯ ತರ್ವಿಂದರ್ ಸಿಂಗ್ ಮಾರ್ವಾ ಅವರಿಗಿಂತ ಹಿಂದುಳಿದಿದ್ದಾರೆ.

ಪತ್ಪರ್‌ಗಂಜ್ ಕ್ಷೇತ್ರದಿಂದ ಬಿಜೆಪಿಯ ರವಿ ನೇಗಿ ಸುಮಾರು 18 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದಾರೆ, ಆಮ್ ಆದ್ಮಿ ಪಕ್ಷದ ಅವಧ್ ಓಜಾ ಹಿನ್ನಡೆಯಲ್ಲಿದ್ದಾರೆ. ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಸೌರಭ್ ಭಾರದ್ವಾಜ್ ಹಿನ್ನಡೆಯಲ್ಲಿದ್ದಾರೆ. ಮಾಲ್ವಿಯಾ ನಗರದಲ್ಲಿ ಆಮ್ ಆದ್ಮಿ ಪಕ್ಷದ ಸೋಮನಾಥ್ ಭಾರ್ತಿ ಹಿನ್ನಡೆಯಲ್ಲಿದ್ದಾರೆ. ಬದ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ದೇವೇಂದರ್ ಯಾದವ್ ಹಿನ್ನಡೆಯಲ್ಲಿದ್ದಾರೆ.

ಕಾಂಗ್ರೆಸ್‌ನ ಅಲ್ಕಾ ಲಂಬಾ ಕೂಡ ಹಿನ್ನಡೆಯಲ್ಲಿದ್ದಾರೆ. ಬವಾನಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರವೀಂದರ್ ಇಂದ್ರಜ್ ಸಿಂಗ್ 14 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದಾರೆ ರಿಥಾಲಾದಲ್ಲಿ ಬಿಜೆಪಿಯ ಕುಲ್ವಂತ್ ರಾಣಾ 19 ಸಾವಿರ ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಈ ನಡುವೆ, ಉತ್ತರ ಪ್ರದೇಶದ ಮಿಲ್ಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಬಿಜೆಪಿಯ ಚಂದ್ರಭಾನು ಪಾಸ್ವಾನ್ 36 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ತಮಿಳುನಾಡಿನ ಈರೋಡ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ದ್ರಾವಿಡ ಮುನ್ನೇತ್ರ ಕಳಗಂನ ಚಂದ್ರಕುಮಾರ್ ವಿ.ಸಿ. 24 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆಯಲ್ಲಿದ್ದಾರೆ.