ಪೆಹಲ್ಗಾಮ್ ಉಗ್ರರ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಶೃಂಗೇರಿ ಮಠದಿಂದ ತಲಾ 2 ಲಕ್ಷ ರೂಗಳ ಪರಿಹಾರ

ಪೆಹಲ್ಗಾಮ್ ಉಗ್ರರ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಶೃಂಗೇರಿ ಮಠದಿಂದ ತಲಾ 2 ಲಕ್ಷ ರೂಗಳ ಪರಿಹಾರ
Facebook
Twitter
LinkedIn
WhatsApp


ಚಿಕ್ಕಮಗಳೂರು : ಪೆಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟ ಕುಟುಂಬಗಳೀಗೆ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ದ ಶೃಂಗೇರಿ ಶಾರದಾ ಮಠವು ತಲಾ 2 ಲಕ್ಷ ರೂಗಳ ಪರಿಹಾರವನ್ನು ಘೋಷಣೆ ಮಾಡಿದೆ. ದಾಳಿಯಲ್ಲಿ ಮೃತಪಟ್ಟ ಒಟ್ಟು 26 ಸದಸ್ಯರ ಕುಟುಂಬಗಳೀಗೆ ಒಟ್ಟು 52 ಲಕ್ಷ ರೂ ಪರಿಹಾರವನ್ನು ಘೋಷಣೆ ಮಾಡಲಾಗಿದೆ.


ಶೃಂಗೇರಿ ಶಾರದ ಮಠದಲ್ಲಿ ಇಂದು ನಡೆದ ಅನುರಾಗ ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಮಠದ ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತಿತೀರ್ಥ ಸ್ವಾಮೀಜಿಯವರು ಕಾಶ್ಮೀರದಲ್ಲಿ ಶ್ರೀ ಶಾರದಾ ಮಾತೆಯು ನೆಲ್ಲೆಸಿದಾಳೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.ಅಂತಹ ಕಾಶ್ಮೀರದ ಪೆಹೆಲ್ಗಾಮ್ ನಲ್ಲಿ ನಡೆದ ಈ ಘಟನೆ ದುಖ: ತಂದಿದೆ.

ನೋವಿನಲ್ಲಿರುವ ಕುಟುಂಬಗಳ ಜೊತೆಗೆ ನಾವಿದೇವೆ ಮತ್ತು ತಲಾ 2 ಲಕ್ಷ ರೂಗಳ ಪರಿಹಾರದ ಸಹಾಯ ನೀಡಲಾಗುವುದು ಎಂದು ತಿಳಿಸಿದ್ದಾರೆ.ಉಗ್ರರು ಜನರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿರುವುದು ಯಾರು ಕ್ಷಮಿಸಲು, ಸಮರ್ಥಿಸಲು ಸಾಧ್ಯವಿಲ್ಲದಂತಹದು. ಘಟನೆಯನ್ನು ನಾವು ಖಂಡಿಸುತ್ತೇವೆ. ಭಾರತ ಸರ್ಕಾರ ಹಾಗು ನಮ್ಮ ಸದೃಡ ಭಾರತೀಯ ಸೇನೆ ಇದಕ್ಕೆ ತಕ್ಕ ಉತ್ತರ ನೀಡಬೇಕಿದೆ ಹಾಗೆ ದಾಳಿ ನಡೆಸಿದ ಆ ಉಗ್ರರೀಗೆ ಕಠಿಣ ಶಿಕ್ಷೆಯನ್ನು ಸರ್ಕಾರ ನೀಡುತ್ತದೆ ಎಂಬ ವಿಶ್ವಾಸವು ನಮ್ಮಗಿದೆ.ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

News by: Raghu Shikari-7411515737