ಶಿಕಾರಿಪುರ ಪಿಎಲ್ ಡಿ ಬ್ಯಾಂಕ್ ಕಾಂಗ್ರೇಸ್ ತೆಕ್ಕೆಗೆ..!

ಶಿಕಾರಿಪುರ ಪಿಎಲ್ ಡಿ ಬ್ಯಾಂಕ್ ಕಾಂಗ್ರೇಸ್ ತೆಕ್ಕೆಗೆ..!
Facebook
Twitter
LinkedIn
WhatsApp

ಶಿಕಾರಿಪುರ ತಾಲೂಕು ಪ್ರಾಥಮಿಕ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರ ಉಪಾಧ್ಯಕ್ಷರಾದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರಾಗಿ ಲೋಹಿತ್ ಕಪ್ಪನಹಳ್ಳಿ ಉಪಾಧ್ಯಕ್ಷರಾಗಿ ಶಾಂತಮ್ಮ ಈಶ್ವರಪ್ಪ ಆಯ್ಕೆಯಾಗಿದ್ದಾರೆ.

ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್ ಪಿ ನಾಗರಾಜ್ ಗೌಡ ಮಾತನಾಡಿ ಕಳೆದ 25 ವರ್ಷಗಳ ನಂತರ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರ ಪರಿಶ್ರಮದಿಂದ ನಮ್ಮ‌ ಪಕ್ಷ ಬೆಂಬಲಿತರು ಅಧಿಕಾರ ಹಿಡಿದಿದ್ದು ಗ್ರಾಮೀಣ ರೈತರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ತಿಳಿಸಿದ್ದರು.

ಈ ಸಂದರ್ಭದಲ್ಲಿ ಮುಖಂಡರಾದ ನಗರದ ಮಹದೇವಪ್ಪ, ಶಿವಾರಂ ಪಾರಿವಾಳ, ಬಸವನಗೌಡ, ಹಾಗೂ ನಿರ್ದೇಶಕರು, ಕಾರ್ಯಕರ್ತರು ಇದ್ದರು.