ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ..!

ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ..!
Facebook
Twitter
LinkedIn
WhatsApp

ಶಿವಮೊಗ್ಗ: ಮಲೆನಾಡಿನ ಅನೇಕ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿಗಿದ್ದು ಅನೇಕ ಕಡೆಗಳಲ್ಲಿ ಕಾಡು ಆನೆಗಳ ದಾಳಿಯಿಂದ ರೈತರ ಬೆಳೆಗಳು ನಾಶವಾಗಿದೆ ಪ್ರಾಣಿಹಾನಿಯಂತ ಘಟನೆಗಳು ನಡೆಯುತ್ತಿದೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಮಾಜಿ‌ ಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದರು‌.

ಶಿವಮೊಗ್ಗ ನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಎದುರು ಬಿಜೆಪಿ ರೈತಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಸಿ ಕಾಡುಪ್ರಾಣಿಗಳಿಂದ ದಾಳಿಗೆ ಒಳಾದ ಕುಟುಂಬಕ್ಕೆ ಪರಿಹಾರ ಹಾಗೂ ಬೆಳೆಹಾನಿಯಾದ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಮನವಿ ಮಾಡಲಾಯಿತು‌‌.

ಈ ವೇಳೆ ಮಾಜಿ ಶಾಸಕ ಹಾರತಾಳು ಹಾಲಪ್ಪ, ಅಶೋಕ್, ಎಂಎಎಲ್ಸಿ ಡಿ‌.ಎಸ್ ಅರುಣ್ ,ಶಾಸಕ ಚೆನ್ನಬಸಪ್ಪ, ಜಿಲ್ಲಾಧ್ಯಕ್ಷ ಮೇಘರಾಜ್ ಸೇರಿ ಅನೇಕು ಮುಖಂಡರು ಕಾರ್ಯಕರ್ತರು ಇದ್ದರು.

ಸುದ್ದಿ ಜಾಹೀರಾತಿಗಾಗಿ: 7411515737