ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣವಾಗಬೇಕು:ಸಿ.ಬಿ. ವೆಂಕಟೇಶ್

ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣವಾಗಬೇಕು:ಸಿ.ಬಿ. ವೆಂಕಟೇಶ್
Facebook
Twitter
LinkedIn
WhatsApp

ಶಿಕಾರಿಪುರ 18 ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯವೆಸಗಿದರೆ ಅಪರಾಧ ಘಟಿಸಿದ 24 ಗಂಟೆಗಳಲ್ಲಿ ಮಕ್ಕಳ ವಿಶೇಷ ಪೊಲೀಸರಿಗೆ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಈ ರೀತಿ ಮಾಡುವುದರಿಂದ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣಮಾಡಲು ಸಹಾಯವಾಗುತ್ತದೆಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಿ.ಬಿ. ವೆಂಕಟೇಶ್ ಅಭಿಮತ ವ್ಯಕ್ತಪಡಿಸಿದರು.


ಸಮುದಾಯ ಆರೋಗ್ಯ ಕೇಂದ್ರ ಶಿಕಾರಿಪುರ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳಿಗೆ ಪೋಕ್ಸೋ ಆಕ್ಟ್- 2012ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಉದ್ಘಾಟಿಸಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಿ.ಬಿ ವೆಂಕಟೇಶ್ ಉದ್ಘಾಟನಾ ನುಡಿಯಲ್ಲಿ ದೈಹಿಕ, ಮಾನಸಿಕ ದೌರ್ಜನ್ಯಗಳಿಂದ ರಕ್ಷಣೆ ಹೊಂದಲು ವಿದ್ಯಾರ್ಥಿಗಳು ಹಾಗೂ ಪೋಷಕರ ಪಾತ್ರ ಗುರುತರವಾಗಿದೆ. ವಿದ್ಯಾರ್ಥಿನಿಯರು ಮೊದಲು ಸುರಕ್ಷಿತವಾಗಿದ್ದರೆ ಮತ್ತೊಬ್ಬರಿಗೆ ಸುರಕ್ಷತೆಯ ಅಭಯ ನೀಡಬಹುದೆಂದರು.


ಸಮುದಾಯ ಆರೋಗ್ಯ ಕೇಂದ್ರ ಚನ್ನಕೇಶವ ನಗರದ ಡಾ. ವಿನುತಾ ಮಾತನಾಡಿ ಹೆಣ್ಣು ಮಕ್ಕಳಿಗೆ 18 ವರ್ಷ ಗಂಡು ಮಕ್ಕಳಿಗೆ 21 ವರ್ಷದೊಳಗೆ ವಿವಾಹವಾದರೆ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಪ್ರಕಾರ ಅಪರಾಧವಾಗಿದೆ. ಈ ಕಾಯ್ದೆಯು ಬಾಲ್ಯ ವಿವಾಹಗಳನ್ನು ನಿಷೇಧಿಸುತ್ತದೆ. ಅದಕ್ಕೆ ಸಂಬಂಧಿಸಿದ ಅಪರಾಧಗಳಿಂದ ಶಿಕ್ಷೆಗಳನ್ನು ನೀಡುತ್ತದೆ ಎಂದರು.


ಉಪನ್ಯಾಸಕ ಕೆ.ಎಚ್. ಪುಟ್ಟಪ್ಪ ಬಿಳವಾಣಿ ಮಾತನಾಡಿ ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ಅಧ್ಯಯನದ ಕಡೆ ಗಮನಹರಿಸಿ ಉತ್ತಮ ಕನಸು ಮತ್ತು ಗುರಿಯನ್ನು ಇಟ್ಟುಕೊಂಡು ಅವುಗಳನ್ನು ಸಾಧಿಸಲು ಪರಿಶ್ರಮ ಪಡಬೇಕು. ಆ ಮೂಲಕ ಜೀವನದಲ್ಲಿ ಯಶಸ್ಸು ಕಾಣಬೇಕೆಂದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಗೀತಾ ಎಂ. ಸಿಂಧೆ, ವಿದ್ಯಾರ್ಥಿನಿಯರಾದ ನಿಖಿತಾ, ಶಾಂತ, ಸೌಂದರ್ಯ, ಹೊಸುಂದರ ಉಪಸ್ಥಿತರಿರುವರು.