ಶಿಕಾರಿಪುರ: ಸಿಸಿ ಕ್ಯಾಮೆರಾ ಗಳು ಪುರಸಭಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಹಲವು ಬಾರಿ ಹೇಳಿದರೂ ಮುಖ್ಯ ಅಧಿಕಾರಿ ಅದನ್ನು ಸರಿಪಡಿಸಿಲ್ಲ ಸಭೆಗಳಲ್ಲಿ ಏನಾದರೂ ಅವಘಡ ಸಂಭವಿಸಿದರೆ ದಾಖಲೆಯಾಗಿ ಉಳಿಯುತ್ತದೆ ಆ ವ್ಯವಸ್ಥೆಯನ್ನು ಏಕೆ ಸರಿ ಮಾಡಿಲ್ಲ ಎಂದು ಮುಖ್ಯ ಅಧಿಕಾರಿಗಳನ್ನು ಸದಸ್ಯ ಸುರೇಶ್ ಪ್ರಶ್ನಿಸಿದರು.
ಪಟ್ಟಣದ ಪುರಸಭಾ ಕಾರ್ಯಾಲಯದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗುಂಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಕೋಟ್ಯಂತರ ರೂ ವ್ಯವಹಾರ ನಡೆಯುವ ಜಾಗ ಲಕ್ಷಾಂತರ ರೂಪಾಯಿಗಳು ವಾಹನಗಳು ಕೋಟ್ಯಾನು ಕೋಟಿ ಬೆಲೆಬಾಳುವ ದಾಖಲೆಗಳ ಕೋಣೆ ಇವುಗಳ ಹೊಣಗಾರಿಕೆ ಯಾರದ್ದೂ ಸಕಲ ವ್ಯವಸ್ಥೆಯನ್ನು ಹೊಂದಿರುವ ಪುರಸಭೆಯಲ್ಲಿ ಇದರ ಬಗ್ಗೆ ನಿರ್ಲಕ್ಷ ಏಕೆ ಎಂದು ಪ್ರಶ್ನಿಸಿದರು.
ಇನ್ನೂ ಪುರಸಭೆ ವತಿಯಿಂದ ನೀಡಲಾಗುವ ಎಸ್ ಸಿಪಿ ಟಿಸಿಎಸ್ ಪಿ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಿ ಎಲ್ಲಾ ವಾರ್ಡ್ ಗಳ ಫಲಾನುಭವಿಗಳ ಪರಿಗಣಿಸಬೇಕು ಎಂದು ಎಲ್ಲಾ ಸದಸ್ಯರು ಒತ್ತಾಯಿಸಿದರು.
ನಿನ್ನೆ ದಿನ ನಡೆದ ಪೌರಕಾರ್ಮಿಕ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಕೆಲವು ಅವ್ಯಚ್ಚ ಶಬ್ದಗಳ ನಿಂದನಾ ಕೆಲಸಗಳು ನಡೆದವು ನಾನು ಕೊಟ್ಟ ಮನವಿಗೆ ಸರಿಯಾದ ಗೌರವ ಸಿಗಲಿಲ್ಲ ಪೌರಕಾರ್ಮಿಕರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಅದಕ್ಕೆ ಎಲ್ಲರ ಸಹಾಯ ಸಹಕಾರ ಅಗತ್ಯ ಎಂದು ನಾನು ಹಾಗೂ ಕೆಲವು ಸದಸ್ಯರು ಕೈ ಜೋಡಿಸಿ ಮನವಿ ಮಾಡಿದರು ಸಹಕರಿಸಲಿಲ್ಲ ಹಾಗೂ ನಿರ್ಲಕ್ಷದ ಧೋರಣೆ ತೋರಿದ್ದೀರಿ ಸಿಸಿ ಕ್ಯಾಮೆರಾ ವ್ಯವಸ್ತೆ ಸರಿ ಇದ್ದಲ್ಲಿ ಅದೊಂದು ದಾಖಲೆಯಾಗಿ ಉಳಿಯುತ್ತಿತ್ತು ಎಂದು ತಮಗಾದ ಅನ್ಯಾಯದ ಮಾಹಿತಿಯನ್ನು ಹೊರ ಹಾಕಿದರು.

ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ರೂಪಕಲಾ ಹೆಗಡೆಯವರು ಸಹ ಅದಕ್ಕೆ ಸಹಮತ ವ್ಯಕ್ತಪಡಿಸಿದರು ಪಕ್ಷ ಭೇದವಿಲ್ಲದೆ ಸದಸ್ಯ ಪ್ರಕಾಶ ಫುಡ್ ಕೋರ್ಟ್ ಹಂಚಿಕೆಯಲ್ಲಿ ಯಾರ ಶಿಪಾರಸ್ಸಿಗೂ ಮುಖ್ಯಾಧಿಕಾರಿಗಳು ಮಣೆ ಹಾಕಬಾರದು ಎಂದರು.
ಸದಸ್ಯ ಜೀನಹಳ್ಳಿ ಪ್ರಶಾಂತ್ ಮಾತನಾಡುತ್ತ ಪ್ರತಿ ಮೀಟಿಂಗಿನಲ್ಲೂ ಮುಖ್ಯ ಅಧಿಕಾರಿಗಳು ಆಶ್ವಾಸನೆಯೊಂದಿಗೆ ಸಮಾಜಸಿ ನೀಡುವುದಲ್ಲದೆ ಸಮಿತಿ ರಚಿಸುತ್ತೇವೆ ಎಲ್ಲರೂ ಸೇರಿ ತೀರ್ಮಾನ ಮಾಡುತ್ತೇವೆ ಎಂಬ ಬುದ್ಧಿವಂತಿಕೆಯ ಹಾರಿಕೆಯ ಉತ್ತರವನ್ನು ಕೊಡುವುದನ್ನು ಬಿಟ್ಟರೆ ಯಾವ ಕೆಲಸ ಕಾರ್ಯಗಳು ಸಮರ್ಪವಾಗಿ ಆಗುತ್ತಿಲ್ಲ ಎಂದು ಆರೋಪಿಸಿದರು.
ದೇವರಾಜ್ ಅರಸು ನಗರ ಆಸ್ಪತ್ರೆ ಮುಂಬಾಗದಲ್ಲಿ ಬಾಕಿ ಉಳಿದ ಇಂಟರ್ಲಾಕ್ ಅಳವಡಿಕೆ ಬಗ್ಗೆ ಎಲ್ಇಡಿ ದೀಪ ಹಾಕಿಸುವುದರ ಬಗ್ಗೆ ಸಿಸಿ ಕ್ಯಾಮೆರಾ ಅಡವಳಕೆ ಕುರಿತು ಹಾಗೂ ಶ್ರೀಶೈಲ ಬಡಾವಣೆಯ ಗುಂಡಿಗಳ ದುರಸ್ತಿಯ ಬಗ್ಗೆ ಆಸ್ಪತ್ರೆಯ ಮುಂಭಾಗದಲ್ಲಿ ಆಂಬುಲೆನ್ಸ್ ಗಾಡಿಗಳನ್ನು ಸರಿಯಾದ ರೀತಿಯಲ್ಲಿ ಪಾರ್ಕ್ ಮಾಡಲು ಮಾರ್ಗದರ್ಶನ ನೀಡುವ ಕುರಿತು ಚರ್ಚಿಸುವ ವಿಚಾರಗಳನ್ನ ಮನವಿ ನೀಡಿದ್ದರೂ ಅದರ ವಿಚಾರವಾಗಿ ಮಾತನಾಡುವಾಗ ಅಧಿಕಾರಿಗಳ ನಿರ್ಲಕ್ಷ ಧೋರಣೆಯ ಬಗ್ಗೆ ಬೇಸರದ ಮಾತನಾಡಿದರು.

ಸ್ಥಾಯಿ ಸಮಿತಿಯ ಕಳೆದ ಸಭೆಯಲ್ಲಿ ವಿಷಯಗಳ ಬಗ್ಗೆ ಎಷ್ಟು ಕೆಲಸ ಕಾರ್ಯ ಆಗಿದೆ ಏನೇನು ಕೆಲಸ ಮಾಡಿದೆ ಬಾಕಿ ಉಳಿದಿರುವ ಕೆಲಸಗಳು ಎಷ್ಟು ಎಂಬ ಪ್ರಶ್ನೆಯನ್ನು ಕೇಳಿದರು ವೇದಿಕೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರಮೇಶ್ ಗುಂಡಾರವರು ಇದು ಮೂರನೇ ಮೀಟಿಂಗ್ ಆಗಿದ್ದು ಸಂಬಂಧಿಸಿದ ಮಾಹಿತಿಗಳನ್ನು ಅಭಯಂತಕರು ಹಾಗೂ ಮುಖ್ಯ ಅಧಿಕಾರಿಗಳು ನೀಡಲಿದ್ದಾರೆ ಎಂದು ತಿಳಿಸಿದರು.
ರೂಪಕಲಾ ಹೆಗ್ಡೆ ಪುರಸಭಾ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಬಿ ಖಾತೆ ಫಲಾನುಭವಿಗಳಿಗೆ ಕಮರ್ಷಿಯಲ್ ನೀರಿನ ತೆರಿಗೆ ರದ್ದುಪಡಿಸುವ ವಿಚಾರವನ್ನು ಚರ್ಚೆಗೆ ತಂದರು ಪುಟ್ ಬಾತ್ ವ್ಯಾಪಾರಿಗಳಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಪ್ರತಿ ಮೀಟಿಂಗ್ ನ ಲ್ಲೂ ವಾದ ವಿವಾದಗಳು ಚರ್ಚೆಗೆ ಆಸ್ಪದ ನೀಡುತ್ತಲೇ ಬಂದಿದ್ದರು ಸಹ ಈ ಗ ಸ್ಥಾಯಿ ಸಮಿತಿಯ ಸಭೆಯಲ್ಲಿ ಕೂಡ ಮತ್ತೆ ಚರ್ಚೆಗೆ ಗ್ರಾಸವಾಗಿ ಈ ಸಮಯವೇ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವಂತೆ ಒತ್ತಾಯಿಸಿದಾಗ ಮುಖ್ಯ ಅಧಿಕಾರಿ ಭರತ್ ರವರು ಇನ್ನು 10 ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸುವ ಕಾರ್ಯತಂತ್ರ ರೂಪಿಸಿ ಕ್ರಮ ಜರುಗಿಸುವ ಬಗ್ಗೆ ಸದಸ್ಯರ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸಮಸ್ಯೆ ಪರಿಹರಿಸಲಾಗುವುದೆಂದು ಆಶ್ವಾಸನೆ ನೀಡಿದರು.
ಈ ಸಭೆಯಲ್ಲಿ ಮುಖ್ಯ ಅಧಿಕಾರಿಗಳಾದ ಭರತ್. ವ್ಯವಸ್ಥಾಪಕ ರಾಜಕುಮಾರ್ ಸಂಘಟನಾ ಅಧಿಕಾರಿ ಸುರೇಶ್ ಇಂಜಿನಿಯರ್ ಶೇಖರ್ ನಾಯಕ್ ಹೊನ್ನಾಳಿ ಸುರೇಶ್ ಮೋಹನ್ ಇತರರು . ಸದಸ್ಯರುಗಳಾದ ರೂಪಾಕಲ ಹೆಗಡೆ ಪ್ರಕಾಶ್ ಗೋಣಿ, ಕಮಲಮ್ಮ, ಶಕುಂತಲಮ್ಮ ಇತರರು ಉಪಸ್ಥಿತರಿದ್ದರು