ಬಿಜೆಪಿ ಮುಖಂಡನಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನ ಹಿಂಪಡೆದ ಸರ್ಕಾರ..!

ಬಿಜೆಪಿ ಮುಖಂಡನಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನ ಹಿಂಪಡೆದ ಸರ್ಕಾರ..!
Facebook
Twitter
LinkedIn
WhatsApp

ಶಿಕಾರಿಪುರ: ವಿರೋಧಕ್ಕೆ ಕಾರಣವಾಗಿದ್ದ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳಿ ಅಧ್ಯಕ್ಷ ಬಿ.ಡಿ ಭೂಕಾಂತ್ ಅವರಿಗೆ ನೀಡಿದ್ದ ರಾಜ್ಯ ಸಚಿವ ಸಂಪುಟ ಸ್ಥಾನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ.

ರಾಜ್ಯ ಸರ್ಕಾರ ಎಲ್ಲಾ ನಿಗಮ ಮಂಡಳಿಯ ಅಧ್ಯಕ್ಷರಿಗೆ ಸಚಿವ ಸ್ಥಾನಮಾನ ನೀಡಿ ಆದೇಶವನ್ನು ನೀಡಿತ್ತು.

ಬಿ.ಡಿ.ಭೂಕಾಂತ್ ಅವರಿಗೆ ನೀಡಿದ್ದ ರಾಜ್ಯ ಸಂಪುಟ ಸ್ಥಾನವನ್ನ ಸರ್ಕಾರ ಹಿಂಪಡೆದಿದ್ದು ಬಿ.ಡಿ.ಭೂಕಾಂತ್ ಅವರು ಬಿಜೆಪಿ ಮುಖಂಡರಾಗಿದ್ದು ಆಗಿದ್ದು ಅವರ ಪತ್ನಿ ಬಿಜೆಪಿಯಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದು ಇನ್ನೂ ಬಿಜೆಪಿ ಪಕ್ಷದಲ್ಲಿ ವಿವಿಧ ಜವಾಬ್ದಾರಿಯನ್ನು ಅವರು ನಿಭಾಯಿಸಿದ್ದಾರೆ. ಬಿ.ಎಸ್ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಬಿಜೆಪಿ ಮುಖಂಡನಿಗೆ ರಾಜ್ಯ ಸಚಿವ ಸ್ಥಾನ ನೀಡಿದ್ದಕ್ಕೆ ದೊಡ್ಡಮಟ್ಟದ ವಿರೋಧ ಉಂಟಾಗಿತ್ತು. ಪಕ್ಷದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಸಚಿವ ಸ್ಥಾನ ಹಿಂಪಡೆದು ಸರ್ಕಾರ ಆದೇಶ ಹೊರಡಿಸಿದೆ.

News by: Raghu Shikari-7411515737