ತೀರ್ಥಹಳ್ಳಿ: ಕಾಡುಕೋಣ ದಾಳಿ ಭತ್ತದ ಸಸಿಗಳು ನಾಶ..!

ಶಿವಮೊಗ್ಗ: ಮಲೆನಾಡಿನಲ್ಲಿ ಮುಂದುವರಿದ ಕಾಡು ಪ್ರಾಣಿಗಳ ಹಾವಳಿಯಿಂದ ಸಾರ್ವಜನಿಕರು ಬೆಸತ್ತು ಹೊಗಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಕಮ್ಮರಡಿ ಬಳಿ ಕೆಸಲೂರ ಹಡ್ಸೆ ಗ್ರಾಮದ ಕೃಷ್ಣಪ್ಪ ಹೆಚ್ ಸಿ ಮತ್ತು ಸುಂದೇಶ್ ಹೆಚ್ ಡಿ ಎಂಬುವರರು ಗದ್ದೆಯಲ್ಲಿ ಭತ್ತದ ಸಸಿಗಳನ್ನು ಕಾಡುಕೋಣಗಳು ನಾಶ ಪಡಿಸಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಮಲೆನಾಡಿನ ಅನೇಕ ಭಾಗಗಳಲ್ಲಿ ಈಗಾಗಲೇ ಜನಾಕ್ರೋಶ ಹೆಚ್ಚಿಗೆಯಾಗಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಹೋರಾಟ ನಡೆಸುತ್ತಿದೆ ಈ ಕುರಿತು ಅರಣ್ಯ ಅಧಕಾರಿಗಳು ಗಮನ ನೀಡಬೇಕಾಗಿದೆ. News by: Raghu Shikari-7411515737

ಬಹು ನಿರೀಕ್ಷಿತ ಒಳ ಮೀಸಲಾತಿ ಡಾ.ನಾಗಮೋಹನದಾಸ್ ಆಯೋಗ ಸಿಎಂಗೆ ವರದಿ ಸಲ್ಲಿಕೆ..!

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತು ಶಿಫಾರಸು ಮಾಡಲು ರಾಜ್ಯ ಸರ್ಕಾರ ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್‌ ನೇತೃತ್ವದ ಏಕಸದಸ್ಯ ಆಯೋಗವು ಶಿಫಾರಸುಗಳನ್ನು ಒಳಗೊಂಡ ತನ್ನ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು ಸಲ್ಲಿಸಿದೆ‌. ಒಳಮೀಸಲಾತಿ ಬೇಕೆಂದು ನ್ಯಾಯಾಲಯಗಳ ಒಳಗೆ ಮತ್ತು ಹೊರಗೆ 30 ವರ್ಷಗಳ ಹೋರಾಟ ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯವು ದಿನಾಂಕ 01-08-2024 ರಂದು ದವಿಂದರ್‌ಸಿಂಗ್‌ ಪ್ರಕರಣದ ತೀರ್ಪಿನಲ್ಲಿ ಈ ರೀತಿ ಸ್ಪಷ್ಟಪಡಿಸಿತು ಉಪವರ್ಗೀಕರಣ ಮಾಡುವುದಕ್ಕೆ ಸಂವಿಧಾನದ ಅನುಚ್ಛೇದ 14 ರಲ್ಲಿ […]

ಶಿಕಾರಿಪುರದಲ್ಲಿ ಪತ್ನಿಕೊಲೆ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ..!

ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಸವರಾಜ್ ಎಂಬಾತನೇ ಮೃತ ವ್ಯಕ್ತಿ. ಈ ಘಟನೆ ಜೈಲಿನ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏನಿದು ಪ್ರಕರಣ..? ಕೌಟುಂಬಿಕ ಕಲಹದ ಹಿನ್ನೆಲೆ ಗಂಡನೇ ಹೆಂಡತಿಯ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ.ಶಿಕಾರಿಪುರ ಪಟ್ಟಣದ ಸೊಸೈಟಿ ಕೇರಿಯಲ್ಲಿ ಘಟನೆ ಸಂಭವಿಸಿತ್ತು. ಈ ಘಟನೆ ಜೂನ್ 12 ರಂದು ನಡೆದಿತ್ತು. ಲಾರಿ ಚಾಲಕ ಬಸವರಾಜು ಎಂಬಾತ ತನ್ನ ಪತ್ನಿ ಮಂಜುಳಾ (32) ಎಂಬುವವರ ಕೊಲೆ […]

Big Breaking News: ಅತ್ಯಾಚಾರ ಕೇಸ್‌ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಕಟ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಕೆ.ಆ‌ರ್. ನಗರ (ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ) ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಶನಿವಾರ ಪ್ರಕಟಿಸುವುದಾಗಿ ತಿಳಿಸಿತ್ತು. ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಿದೆ.ಶಿಕ್ಷೆ ಪ್ರಮಾಣ ನಿಗದಿಪಡಿಸುವ ಕುರಿತು ನ್ಯಾಯಾಧೀಶ ಸಂತೋಷ ಗಜಾನನ ಭಟ್ ಶನಿವಾರ […]

ಅತ್ಯಾಚಾರ ಕೇಸ್’ನಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಕೋರ್ಟ್‌ ತೀರ್ಪು..!

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ‘ಪ್ರಜ್ವಲ್ ರೇವಣ್ಣ’ ದೋಷಿ ಎಂದು ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ ಇಂದು ತೀರ್ಪು ಪ್ರಕಟಿಸಿದೆ. ಜಡ್ಜ್ ಸಂತೋಷ್‌ ಗಜಾನನ ಭಟ್ ಒಟ್ಟು 4 ಪ್ರಕರಣಗಳ ಪೈಕಿ ಕೆ. ಆ‌ರ್ ನಗರದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ತೀರ್ಪು ತೀರ್ಪು ಪ್ರಕಟಿಸಿದ್ದಾರೆ. ಶಿಕ್ಷೆ ಪ್ರಮಾಣವನ್ನು ನಾಳೆ ಪ್ರಕಟವಾಗಲಿದೆ.

ರಾಷ್ಟ್ರಧ್ವಜಕ್ಕಾಗುವ ಅಪಮಾನವನ್ನು ತಡೆಯಿರಿ – ಹಿಂದೂ ಜನಜಾಗೃತಿ ಸಮಿತಿ

ಆಗಸ್ಟ್ 15ರಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ ಆದರೆ ಅದೇ ದಿನ ರಾಷ್ಟ್ರಧ್ವಜವು ರಸ್ತೆ ಹಾಗೂ ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ ಹೀಗಾಗಿ ಪ್ಲಾಸ್ಟಿಕ್ ,ರಾಷ್ಟ್ರಧ್ವಜಗಳ ಮಾರಾಟವನ್ನು ಕೂಡಲೇ ನಿಷೇಧಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಾನ್ಯತಹಶೀಲ್ದಾರ್, ಡಿ.ವೈ. ಎಸ್. ಪಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರಾಷ್ಟ್ರಧ್ವಜದ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮುಂಬೈ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಯಿತು ಈ ಸಂಬಂಧ […]

ಚಿಕ್ಕಮಗಳೂರು ಇಬ್ಬರ ಮೇಲೆ ಚಿರತೆ ದಾಳಿ…!

ಚಿಕ್ಕಮಗಳೂರು: ಇಬ್ಬರು ದಾರಿಹೊಕ್ಕರ ಮೇಲೆ ಚಿರತೆ ದಾಳಿ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಎಮ್ಮೆದೊಡ್ಡಿ ಗ್ರಾಮದಲ್ಲಿ ನಡೆದಿದೆ. ಎಮ್ಮೆದೊಡ್ಡಿ ಗ್ರಾಮದ ಮೂರ್ತಣ್ಣ ಹಾಗೂ ಮಂಜಣ್ಣ ಎಂಬುವರು ಬೆಳಗ್ಗೆ ಸಖರಾಯಪಟ್ಟಣಕ್ಕೆ ಬರುವಾಗ ರಸ್ತೆ ಮಧ್ಯೆ ಚಿರತೆ ದಾಳಿ ಮಾಡಿದೆ. ಮೂರ್ತಣ್ಣ ಎಂಬುವರ ಎಡಗೈನ ಒಂದು ಬೆರಳನ್ನ ಚಿರತೆ ತಿಂದಿದ್ದು ಮಂಜಣ್ಣ ಎಂಬುವರ ಎಡಗೈಗೂ ಗಂಭೀರ ಗಾಯವಾಗಿದೆ. ಚಿರತೆ ಮತ್ತೊಬ್ಬರ ಮೇಲೆ ದಾಳಿಗೆ ಯತ್ನಿಸುತ್ತಿದ್ದಂತೆ ಸ್ಥಳೀಯರು ಕೂಗುತ್ತಿದ್ದಂತೆ ಚಿರತೆ ಓಡಿಹೋಗಿದೆ. ಸ್ಥಳೀಯರು ಚಿರತೆಯನ್ನ ಕಲ್ಲಿನಿಂದ […]

ಕಾರ್ಗಿಲ್ ವಿಜಯ ದಿವಸ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ದಿಂದ ಈಸೂರಿನ ಹುತಾತ್ಮರ ಸ್ಮಾರಕ ಸ್ವಚ್ಚತೆ..!

ಶಿಕಾರಿಪುರ: ಬಿಜೆಪಿ ಯುವಮೋರ್ಚಾ ವತಿಯಿಂದ ಈಸೂರು ಗ್ರಾಮದಲ್ಲಿ ಹುತಾತ್ಮರ ಸ್ಮಾರಕ ವನ್ನು ಸ್ವಚ್ಛತೆ ಮಾಡುವ ಮೂಲಕ ಕಾರ್ಗಿಲ್ ವಿಜಯ್ ದಿವಸ್ ಆಚರಿಸಿದರು. ಈ ವೇಳೆ ಯುವ ಮೋರ್ಚಾ ಅಧ್ಯಕ್ಷ ವೀರಣ್ಣಗೌಡ ಮಾತನಾಡಿಅದಮ್ಯ ಸಾಹಸ ಅಪ್ರತಿಮ ಶೌರ್ಯ ದೇಶಭಕ್ತಿಯ ‌ಸ್ಫೂರ್ತಿಯೊಂದಿಗೆ ಶತ್ರುಗಳನ್ನು ಸದೆಬಡಿದು ಭಾರತಾಂಬೆಯ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್‌ ಯುದ್ಧದ ವೀರ ಹುತಾತ್ಮರಿಗೆ ಕಾರ್ಗಿಲ್‌ ವಿಜಯ ದಿವಸ‌ ಎಂದು ಆಚರಣೆ ಮಾಡಲಾಗುತ್ತಿದೆ. ಈ ದಿನ ನಮ್ಮ ವೀರ ಯೋಧರಿಗೆ ಗೌರವ ಸಲ್ಲಿಸಲು ಇತಿಹಾಸದಲ್ಲಿ ಮೊಟ್ಟಮೊದಲ […]

ಶಿಕಾರಿಪುರ ಸೇರಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಷೋಷಣೆ..!

ಶಿಕಾರಿಪುರ ತಾಲೂಕಿನಲ್ಲಿ ಸುರಿಯುತ್ತಿರು ನಿರಂತರ ಮಳೆಯಿಂದಾಗಿ ದಿನಾಂಕ 26/7/2025 ರಂದು ಶಿಕಾರಿಪುರ ತಾಲ್ಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಡಿಪ್ಲೋಮ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅತಿಯಾದ ಮಳೆಯಿಂದ ಶೀತ ವಾತಾವರಣ ಮಕ್ಕಳ ಆರೋಗ್ಯದ ದೃಷ್ಠಿಯಿಂದ ರಜೆ ಘೋಷಣೆ ಮಾಡಿ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳು ಶಿಕಾರಿಪುರ ತಾಲ್ಲೂಕು ಅವರು ಘೋಷಿಸಿದ್ದಾರೆ. ಇನ್ನೂ ಶಿವಮೊಗ್ಗ ತಾಲೂಕು, ಸಾಗರ, ಸೊರಬ, ಹೊಸನಗರ, ಭದ್ರಾವತಿ ತೀರ್ಥಹಳ್ಳಿ ತಾಲೂಕು ಕೇಂದ್ರಗಳಲ್ಲೂ ಆಯಾ ತಾಲೂಕು ತಹಶಿಲ್ದಾರ್ ಅವರು ರಜೆ […]

ಶಿಕಾರಿಪುರ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಷೋಷಣೆ..!

ಶಿಕಾರಿಪುರ ತಾಲೂಕಿನಲ್ಲಿ ಸುರಿಯುತ್ತಿರು ನಿರಂತರ ಮಳೆಯಿಂದಾಗಿ ದಿನಾಂಕ 25/7/2025 ರಂದು ಶಿಕಾರಿಪುರ ತಾಲ್ಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಡಿಪ್ಲೋಮ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಜೆ ಘೋಷಣೆ ಮಾಡಿ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳಾದ ಮಲ್ಲೇಶ್ ಬೀರಪ್ಪ ಪೂಜಾರ್ ಅವರು ಘೋಷಿಸಿದ್ದಾರೆ. News by: Raghu Shikari-7411515737