ಶಿಕಾರಿಪುರ: ತಾಲೂಕಿನ ದಿಂಡದಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸೃಷ್ಟಿಯಾಗಿದ್ದ ಚಿರತೆ ಭೀತಿ ಈಗ ಹೊಸ ತಿರುವು ಪಡೆದುಕೊಂಡಿದೆ. ಗ್ರಾಮದ ಹೊಂಡವೊಂದರಲ್ಲಿ ಚಿರತೆ ಬಿದ್ದಿರುವುದು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅದನ್ನು ಸೆರೆಹಿಡಿಯಲು ಮುಂದಾಗಿದೆ.
ಶ್ವಾನಗಳ ಸಾಹಸ:
ಸಾಮಾನ್ಯವಾಗಿ ಚಿರತೆ ಕಂಡರೆ ನಾಯಿಗಳು ಹೆದರುತ್ತವೆ. ಆದರೆ ಇಲ್ಲಿ ಉಲ್ಟಾ ನಡೆದಿದೆ! ನಿತ್ರಾಣಗೊಂಡಿದ್ದ ಚಿರತೆಯನ್ನು ಗ್ರಾಮದ ನಾಯಿಗಳೇ ಗುಂಪುಕಟ್ಟಿ ಬೆನ್ನಟ್ಟಿವೆ. ಈ ರೋಚಕ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನಾಯಿಗಳಿಗೆ ಹೆದರಿ ಓಡುವಾಗ ಚಿರತೆಯು ಹತ್ತಿರದ ಸಣ್ಣ ಹೊಂಡಕ್ಕೆ ಬಿದ್ದಿದೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: “ಕಳೆದ ಒಂದು ವಾರದಿಂದ ದೂರು ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಈಗ ಚಿರತೆ ತಾನಾಗಿಯೇ ಹೊಂಡಕ್ಕೆ ಬಿದ್ದಿರುವುದರಿಂದ ನಮ್ಮ ಆತಂಕ ದೂರವಾಗಿದ್ದು ಸದ್ಯ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಅರಿವಳಿಕೆ ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಚಿರತೆ ಸೇರೆ ಹಿಡಿಯಲಾಗಿದೆ. ಸುರಕ್ಷಿತವಾಗಿ ಸಾಗಿಸುವ ಪ್ರಕ್ರಿಯೆ ನಡೆಯುತ್ತಿದೆ.
News By: Raghu Shikari-7411515737
