ಶಿರಾಳಕೊಪ್ಪ ಪುರಸಭೆ :ಎ ಮತ್ತು ಬಿ ಖಾತಾ ಪಡೆಯಲು ಅವಕಾಶ

ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ದಿ: 10/09/2024ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ನಿವೇಶನ/ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಆಸ್ತಿ ಮಾಲೀಕರು ಪುರಸಭೆ ಕಚೇರಿಯನ್ನು ಸಂಪರ್ಕಿಸುವಂತೆ ಶಿರಾಳಕೊಪ್ಪ ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ. ಎ-ಖಾತೆ ಪಡೆಯಲು ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತು ಮಾಡಿಸುವ ಮೊಂದಾಯಿತ ಮಾರಾಟ ಪತ್ರಗಳು/ದಾನ ಪತ್ರ/ವಿಭಾಗ ಪತ್ರಗಳು ಅಥವಾ ಸರ್ಕಾರದ ನಿಗಮ ಮಂಡಳಿಗಳಿAದ ನೀಡಲಾದ ಹಕ್ಕುಪತ್ರಗಳು/ ಮಂಜೂರಾತಿ ಪತ್ರಗಳು, ಕಂದಾಯ ಇಲಾಖೆಯಿಂದ 94 ಸಿ.ಸಿ. ಅಡಿ ನೀಡಲಾದ ಹಕ್ಕುಪತ್ರ. ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಢೀಕೃತ […]

ಅಂಬ್ಲಿಗೊಳ ಜಲಾಶಯದಲ್ಲಿ ಹುಲಿ ಮೃತದೇಹ ಪತ್ತೆ: ತನಿಖೆಗೆ ಈಶ್ವರ ಖಂಡ್ರೆ ಸೂಚನೆ

ಶಿವಮೊಗ್ಗ ಜಿಲ್ಲೆ ಸಾಗರ ಅರಣ್ಯ ವಿಭಾಗದ, ಬೈರಾಪುರ ಗ್ರಾಮದ ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ ನಿನ್ನೆ ಸಂಜೆ 7-8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯ ಜೀವಿ ಪರಿಪಾಲಕರಿಗೆ ಸೂಚನೆ ನೀಡಿರುವ ಸಚಿವರು, ಹುಲಿಗೆ ಗುಂಡು (ಪೆಲೆಟ್ಸ್) ಹೊಡೆದ ಗಾಯವೂ ಇರುವುದಾಗಿ ಮಾಧ್ಯಮಗಳಲ್ಲಿ ಸಚಿತ್ರ […]

ವಿದ್ಯುತ್ ಮಾರ್ಗಗಳ ನಿರ್ಮಾಣದಲ್ಲಿ ರೈತರ ಹಿತ ಕಾಯಲು ಸೂಚನೆ – ಮಧು ಬಂಗಾರಪ್ಪ

ಶಿವಮೊಗ್ಗ : ಜಿಲ್ಲೆಯಲ್ಲಿ ಈಗಾಗಲೇ ಮಂಜೂರಾಗಿ ಕಾಮಗಾರಿ ಕೈಗೆತ್ತಿಕೊಂಡಿರುವ ಜಡೆ-ಬನವಾಸಿ ಮತ್ತು ಈಸೂರು-ಅಂಜನಾಪುರ 110ಕೆ.ವಿ. ವಿದ್ಯುತ್ಪ್ರಸರಣಾ ಮಾರ್ಗದಲ್ಲಿ ಬರುವ ರೈತರೊಂದಿಗೆ ಸಂಬಂಧಿಸಿದ ಮೆಸ್ಕಾಂ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಶೀಘ್ರ ಸಮಾಲೋಚನೆ ನಡೆಸಿ, ರೈತರಿಗೆ ಅನುಕೂಲವಾಗುವ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು. ಇಂದು ನಗರದ ಲೋಕೋಪಯೋಗಿ ಭವನದಲ್ಲಿ ವಿವಿಧ ಇಲಾಖೆಗಳ ಹಲವು ಯೋಜನೆಗಳ ಪ್ರಗತಿ ಪರಿಶೀಲನೆ ಸರಣಿ ಸಭೆಗಳ ಅಧ್ಯಕ್ಷತೆ […]

ವ್ಯಾಲೆಂಟೈನ್ ಡೇ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ತಡೆಯಿರಿ – ಹಿಂದೂ ಜನಜಾಗೃತಿ ಸಮಿತಿ

ಶಿಕಾರಿಪುರ: ಫೆ14 ರ ವ್ಯಾಲೆಂಟೈನ್ ಡೇ ಯಂದು ನಡೆಯುವ ಅನಾಚಾರಗಳನ್ನು ತಡೆಯುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳವಾರ ಶಿಕಾರಿಪುರದ ತಾಲೂಕು ಕಚೇರಿ, ಡಿವೈಎಸ್ಪಿ ಕಚೇರಿ, ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಕಳೆದ ಕೆಲವು ವರ್ಷಗಳಿಂದ 14 ಫೆಬ್ರವರಿಯನ್ನು ವ್ಯಾಲೆಂಟೈನ್ ಡೇ ಎಂದು ಆಚರಿಸುವ ಪಾಶ್ಚಾತ್ಯರ ದುಷ್ಟ ಪ್ರವೃತ್ತಿಯು ಭಾರತದಲ್ಲಿಯೂ ವ್ಯಾಪಕವಾಗಿ ಪಸರಿಸಿದೆ ಪಾಶ್ಚಾತ್ಯರ ವ್ಯಾಪಾರಿಕ ಲಾಭಕ್ಕಾಗಿ ಪ್ರೇಮದ ಹೆಸರಿನಲ್ಲಿ ಈ ವಿಕೃತ ಕಲ್ಪನೆಯ ಪ್ರಚಾರದಿಂದ ಯುವ ಪೀಳಿಗೆ ಭೋಗವಾದ ಮತ್ತು ಅನೈತಿಕತೆಯಲ್ಲಿ […]

ಮೂಲಭೂತ ಸೌಕರ್ಯ ವಿವಿಧ ಬೇಡಿಗಳನ್ನು ಈಡೇರಿಸುವಂತೆ ಒತ್ತಾಹಿಸಿ ಗ್ರಾಮ ಅಧಿಕಾರಿಗಳ‌ ಪ್ರತಿಭಟನೆ..!

ಶಿಕಾರಿಪುರ ಪಟ್ಟಣದ ತಾಲೂಕ್ ಕಛೇರಿ ಆಚರಣದಲ್ಲಿ ಸೋಮವಾರ ಗ್ರಾಮ ಆಡಳಿತ‌ ಅಧಿಕಾರಿಗಳು ( ಗ್ರಾಮ ಲೇಕ್ಕಿಗರು) ಪ್ರತಿಭಟನೆ ಧರಣಿ ನಡೆಸಿದ್ದಾರೆ. ಕಂದಾಯ ಇಲಾಖೆಯ ಮೂಲ‌ ಆಧಾರ ಸ್ತಂಭವಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಉತ್ತಮ ಕಛೇರಿ ಪೀಠೋಪಕರಣಗಳನ್ನು ಒದಗಿಸಬೇಕು ಹಾಗೂ ಇನ್ನು ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಲಾಗುತ್ತಿದೆ. ಫೆ.10 ರಂದು ಇಡೀ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದ್ದು ತಾಲೂಕಿನ ಎಲ್ಲಾ ವಿಎ ಸಿಬ್ಬಂದಿಗಳು ಇಂದು ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ನಡೆಲಾಗುತ್ತಿದೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ. ಈ […]

ಸಚಿವರ ಭರವಸೆಗೆ ಪ್ರತಿಭಟನಾ ಧರಣಿ ಹಿಂಪಡೆದ ರೈತ ಸಂಘ..!

ಶಿಕಾರಿಪುರದ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ “ಬೃಹತ್ ಪ್ರತಿಭಟನಾ” ಸ್ಥಳಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ, ರೈತರ ಸಮಸ್ಯೆಗಳನ್ನು ಆಲಿಸಿದರು. ಈಸೂರು ಭಾಗದಲ್ಲಿ ಕೆ.ಪಿ.ಟಿ.ಸಿ.ಎಲ್ 4.5 ಕಿ.ಮೀ. ದೂರವಿರುವ ಗ್ರೀಡ್ ಗೆ 20 ಕಿ.ಮೀ. ನಿಂದ ಹೈಟೆನ್ಷನ್ ವಿದ್ಯುತ್ ಮಾರ್ಗ ಯೋಜನೆ ರೂಪಿಸುತ್ತಿದೆ. ಇದು ಅವೈಜ್ಞಾನಿಕವಾಗಿದ್ದು “ಹೈಟೆನ್ಷನ್ ವಿದ್ಯುತ್ ಮಾರ್ಗ ನಿರ್ಮಾಣ” ಕಾಮಗಾರಿ ಮಾಡದಂತೆ ರೈತರು ಮನವಿ ಸಲ್ಲಿಸಿದರು. ಈ ಪ್ರದೇಶದಲ್ಲಿ ರೈತರು […]

ಶಿಕಾರಿಪುರಕ್ಕೆ ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ‌ ಸಾರ್ವಜನಿಕ ಅಹವಾಲು ಸ್ವೀಕಾರ..!

ಶಿಕಾರಿಪುರ ತಾಲೂಕಿಗೆ ನಾಳೆ (ಬುಧವಾರ) ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವರಾದ ಮುಧು ಬಂಗಾರಪ್ಪ ಅವರು ಆಗಮಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನೆಲವಾಗಿಲು ಗ್ರಾಮದಲ್ಲಿ ಕೃಷಿ ಅಧ್ಯಯನ ಶಿಬಿರ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಲಿದ್ದು ನಂತರ ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಶಿವಪುರ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟಿಸಿ ಬಳಿಕ ಜಾವಗಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಿದ್ದು ಸ್ವಕ್ಷೇತ್ರ ಸೊರಬದಲ್ಲಿ ವಿವಿಧ ಕಾರ್ಯಕ್ರಮದಲ್ಲಿ […]

ಶಾಸಕ‌ ಬಿವೈ ವಿಜಯೇಂದ್ರ ಸಂಧಾನಕ್ಕೂ ಜಗ್ಗದ ರೈತರು ಮುಂದುವರಿದ ಅಹೋರಾತ್ರಿ ಧರಣಿ..!

ಶಿಕಾರಿಪುರ: ತಾಲೂಕಿಮ ಈಸೂರಿನಿಂದ -ಅಂಜನಾಪುರ ವರೆಗೆ ಕೆಇಬಿ 11 ಕೆವಿ ಗ್ರೀಡ್ ನೀಲನಕ್ಷೆ ವಿದ್ಯುತ್ ಮಾರ್ಗ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ರೈತಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು ಸೋಮವಾರ ಬೆಳಗ್ಗೆಯಿಂದಲೇ ಆರಂಭವಾದ ಪ್ರತಿಭಟನೆ ಅಹೋರಾತ್ರಿ ಭಜನೆ ಮಾಡಲುವ ಮೂಲಕ‌ ಚಳಿಯನ್ನು ಲೆಕ್ಕಿಸದೇ ರೈತರು ಪ್ರತಿಭಟನೆ ಧರಣಿ ಮುಂದುವರಿಸಿದ್ದಾರೆ. ಶಾಸಕ ಬಿವೈ ವಿಜಯೇಂದ್ರ ಮನವೋಲಿಕೆ ವಿಫಲ:ಶಾಸಕ ಬಿವೈ ವಿಜಯೇಂದ್ರ ಸಂಜೆ ವೇಳೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಧರಣಿ ನಿಲ್ಲಿಸುವಂತೆ ಮನವಿ […]

ತಾಲೂಕು ಕಚೇರಿ ಎದುರು ಪ್ರತಿಭಟನೆ ವೇಳೆ ವಿಷ ಕುಡಿಯಲು ಯತ್ನಿಸಿದ ರೈತ..!

ಶಿಕಾರಿಪುರ ಪಟ್ಟಣದ ತಾಲೂಕ್ ಕಛೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಈಸೂರಿನಿಂದ ಅಂಜನಾಪುರವರೆಗೆ ಕೆಇಬಿಗ್ರೀಡ್ ಅವೈಜ್ಞಾನಿಕ ನೀಲನಕ್ಷೆ ವಿದ್ಯುತ್ ಮಾರ್ಗದ ವಿರುದ್ದ ತಾಲೂಕ್ ಕಛೇರಿ ಎದುರು ಪ್ರತಿಭಟನೆ ವೇಳೆ ರೈತನೋರ್ವ ವಿಷ ಕುಡಿಯಲು ಯತ್ನಿಸಿದ ಘಟನೆ ನಡೆದಿದೆ. ಚಿಕ್ಕಜೋಗಿಹಳ್ಳಿಯ ಸುಭಷ್ ಚಂದ್ರ ಎನ್ನುವ ರೈತ ವಿಷ ಕುಡಿಯಲು‌ ಯತ್ನಿಸಿದ ರೈತ ಎಂದು ತಿಳಿದು ಬಂದಿದೆ. ತಕ್ಷಣ ರೈತ ಮುಖಂಡರು ಪೋಲಿಸ್ ಇಲಾಖೆ ಸಿಬ್ಬಂದಿಗಳು ಬಟರ್ ಅನ್ನು ಕಸಿದುಕೊಂಡಿದ್ದಾರೆ. ಸುದ್ದಿ ಜಾಹೀರಾತಿಗಾಗಿ-7411515737

ಜಿಲ್ಲಾದ್ಯಂತ ಒಂದೆ ದರದಲ್ಲಿ ಅಡಿಕೆ ಖೇಣಿ ಹಿಡಿಯಲು ಖೇಣಿದಾರರ ಸಂಘ ನಿರ್ಧಾರ..!

ಶಿಕಾರಿಪುರ ತಾಲೂಕಿನ ಕಣಿವೆಮನೆ ಗ್ರಾಮದಲ್ಲಿ ಜಿಲ್ಲಾ ಅಡಿಕೆ ಖೇಣಿದಾರರ ಸೌಹಾರ್ದ ಸಹಕಾರ ಸಂಘದ ವತಿಯಿಂದ ಜಿಲ್ಲಾ ಖೇಣಿದಾರರ ಸಭೆ ನಡೆಸಲಾಯಿತು. ಈ ವೇಳೆ ಜಿಲ್ಲೆಯ ಅಡಿಕೆ ಖೇಣಿದಾರರು ಒಂದೇ ದರದಲ್ಲಿ ರೈತರ ತೋಟಗಳನ್ನು ಹಿಡಿಯಬೇಕು ಹಾಗೂ ಆಗಸ್ಟ್ 15ರ ನಂತರ ಅಡಿಕೆ ಕೊಯ್ಲು ಶುರು ಮಾಡಬೇಕು ಇದರಿಂದ ರೈತರಿಗೂ ಹಾಗೂ ಖೇಣಿದಾರರಿಗೂ ಅನುಕೂಲ ಆಗಲಿದೆ ಎಂದು ಸಭೆಯಲ್ಲಿ ತಿರ್ಮಾನಿಸಲಾಗಿದೆ. ಜಿಲ್ಲಾದ್ಯಂತ ಪ್ರತಿ 75ಕೆಜಿ ಗೆ 1kg ಪೆಚ್ಚು ನಿಗದಿ ಇನ್ನು ಹೆಚ್ಚಿನ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು […]