ಶಿರಾಳಕೊಪ್ಪದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ: ಶಿಕಾರಿಪುರದಲ್ಲಿ ಶೀಘ್ರದಲ್ಲಿ ಆರಂಭ: ಸಚಿವ ಮಧು ಬಂಗಾರಪ್ಪ

ಶಿರಾಳಕೊಪ್ಪದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ: ಶಿಕಾರಿಪುರದಲ್ಲಿ ಶೀಘ್ರದಲ್ಲಿ ಆರಂಭ: ಸಚಿವ ಮಧು ಬಂಗಾರಪ್ಪ
Facebook
Twitter
LinkedIn
WhatsApp

ಶಿಕಾರಿಪುರ : ಶಿರಾಳಕೊಪ್ಪ ಪಟ್ಟಣದಲ್ಲಿ ಇಂದು ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ಈಗಾಗಲೇ ಸೊರಬ ಆನವಟ್ಟಿ, ಶಿರಾಳಕೊಪ್ಪ ಪಟ್ಟಣಗಳಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದ್ದು. ಮುಂದಿನ ದಿನಗಳಲ್ಲಿ ಶಿಕಾರಿಪುರ ಪಟ್ಟಣದಲ್ಲಿ ಸಹ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಲಿದ್ದೇವೆ ಎಂದರು.

ದಿವಂಗತ ಶ್ರೀಮತಿ ಇಂದಿರಾ ಗಾಂಧಿ ಪ್ರಧಾನಿಯಾದ ಸಮಯದಲ್ಲಿ ಬಡವರ ಕಲ್ಯಾಣಕ್ಕಾಗಿ 20 ಅಂಶಗಳ ಕಾರ್ಯಕ್ರಮವನ್ನು ಅವರ ಹಮ್ಮಿಕೊಂಡಿದ್ದು. ಅದರಲ್ಲಿ ಹಸಿವು ಮುಕ್ತ ಭಾರತ ಕಾರ್ಯಕ್ರಮವು ಒಂದಾಗಿದೆ. ವಿರೋಧ ಪಕ್ಷದವರು ಇಷ್ಟು ದಿನ ನಾವು ಕಲ್ಯಾಣ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳುತ್ತದೆ. ಆದರೆ ನಾವು ಮಾಡಿ ತೋರಿಸಿದ್ದೇವೆ.

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದು ಕಾಂಗ್ರೆಸ್ ಸರ್ಕಾರ. ಅದರ ಪಾಲುದಾರರು ಮಾತ್ರ ನಾವಾಗಿದ್ದು. ಸ್ವಾರ್ಥಕ್ಕೋಸ್ಕರ ಇಂದಿರಾ ಕ್ಯಾಂಟೀನನ್ನು ಬೇರೆ ಕಡೆ ಮಾಡಿದ್ದು. ನಾವು ಇಂದಿರಾ ಕ್ಯಾಂಟೀನ್ ನ್ನು ಶಿರಾಳಕೊಪ್ಪದ ಪಟ್ಟಣದಲ್ಲಿ ಆಗಬೇಕು ಎಂದು ಇಲ್ಲಿಯ ಸ್ಥಳೀಯ ನಾಯಕರು ಆಗ್ರಹಿಸಿದ ಮೇರೆಗೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಲಾಗಿದೆ. ಇದು ಬಡವರಿಗೆ ತಲುಪಬೇಕಾಗಿದೆ.

ರೈಟ್ ಫುಡ್ ಆಕ್ಟ್ ತಂದಿರುವುದು ಕಾಂಗ್ರೆಸ್ ಸರ್ಕಾರ ಆದರೆ ಬಿಜೆಪಿಯವರು ಸೋಶಿಯಲ್ ಮೀಡಿಯಾ ಜನರಲ್ಲಿ ಸುಳ್ಳು ವಿಷಯವನ್ನು ಹೇಳಿ ದೇಶ ಹಾಳು ಮಾಡುತ್ತಿದ್ದಾರೆ ಇದನ್ನು ಕೂಡಲೇ ನಿಲ್ಲಿಸಬೇಕು .ಸಮಾಜದಲ್ಲಿ ಎಲ್ಲರೂ ಪ್ರೀತಿ ವಿಶ್ವಾಸದಿಂದ ವಾಸಿಸುವ ಪರಿಕಲ್ಪನೆ ನಿರ್ಮಾಣವಾಗಬೇಕು.

ಶಾಲೆಗಳು ಇನ್ನೇನು ಆರಂಭವಾಗಲಿದೆ 51,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತೇವೆ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಎಲ್ಲವನ್ನು ನೀಡಲಿದ್ದೇವೆ. ಎಲ್ಲಾ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಗುಣಮಟ್ಟದ ಶಿಕ್ಷಣವನ್ನು ಕೊಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ.

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕೊಟ್ಟವರಿಗೆ ಮೋಸ ಮಾಡಿದ್ದಾರೆ. ಭೂಮಿ ಕಳೆದುಕೊಂಡ 340 ಜನರಿಗೆ ನಿವೇಶನ ನೀಡುವಂತೆ ಕೋರ್ಟ್ ಆದೇಶ ಮಾಡಿದ್ದು ಅದು ಖುಷಿಯ ವಿಚಾರವಾಗಿದೆ ಎಂದರು.

News By; Raghu Shikari-7411515737