ಶಿಕಾರಿಪುರ: ಭಾರತೀಯ ವಿದ್ಯಾರ್ಥಿ ಸಂಘ ಶಿಕಾರಿಪುರ ಶಾಖೆ ಹಾಗೂ ಶ್ರೀ ಶಿವಶರಣರ ಮಾದರ ಚನ್ನಯ್ಯ ಜನ್ಮಸ್ಥಳ ಅಭಿವೃದ್ಧಿ ಸಮಿತಿ ಬಳ್ಳಿಗಾವಿ ವತಿಯಿಂದ ಎಸ್ಎಸ್ಎಲ್‌ಸಿ ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ದಿನಗ ಕಾರ್ಯಾಗಾರವನ್ನು ದಿ:30 ರಂದು ಪಟ್ಟಣದ ಗುರು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಮುಖೇಶ್ ಮತ್ತಿಕೊಟ್ಟೆ ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್ ಎಸ್ ಎಲ್ ಸಿ ಪಿಯುಸಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು ಶಿಕ್ಷಣ ತಜ್ಞ ಎಂ.ಸಿ ಮೋಹನ್‌ಕುಮಾರ್ ಹಾಗೂ ಉಪನ್ಯಾಸಕ ನಾಗರಾಜ್ ಹರಿಜನ ಮತ್ತು ಡಾ.ಸೋಮಶೇಖರ್ ಶಿಮೋಗಿ ಅವರು ಉಪನ್ಯಾಸ ನೀಡಲಿದ್ದಾರೆ.ತಾಲೂಕಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನಮ್ಮ ಸಂಘಟನೆಯನ್ನು ತಾಲೂಕಿನ ಪ್ರತಿ ಗ್ರಾಮಗಳಲ್ಲಿ ತಲುಪಿಸು ಗುರಿಯನ್ನು ಹೊಂದಿದ್ದೇವೆ ಸಂವಿಧಾನದ ಭಾಷೆಯಲ್ಲಿ ಆಡಳಿತಾತ್ಮಕ ಅವಕಾಶವನ್ನು ಕಲ್ಪಿಸುವ ಗುರಿಯನ್ನು ಹೊಂದಿದು ಶೈಕ್ಷಣಿಕ,ಸಮಾಜಿಕ, ಆಡಳಿತತ್ಮಾಕವಾಗಿ, ಆರ್ಥಿಕವಾಗಿ ಕೆಳವರ್ಗವನ್ನು ಉನ್ನತ ದರ್ಜೆಗೆ ತೆಗೆದುಕೊಂಡು ಹೊಗುವ ಗುರಿಯನ್ನು ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಸುರೇಶ್ ಹರಳಿಹಳ್ಳಿ ಹೋಳೆಯಪ್ಪ ಕಾನೂನು ಸಲಹೆಗಾರರು ರತನ್ ಎಲ್ ಜಿ , ತಾಲೂಕ್ ಅಧ್ಯಕ್ಷರು ಮಂಜುನಾಥ ಹೊಸರು,ರಾಮಪ್ಪ , ಸುರಗಿಹಳ್ಳಿ ಮಂಜುನಾಥ, ಮನೋಜ್ ಇದ್ದರು.