ಸರ್ಕಾರದ ಎರಡು ವರ್ಷದಲ್ಲಿ ಅತ್ಯುತ್ತಮ ಕಾರ್ಯ: ಸಚಿವ ಮಧು ಬಂಗಾರಪ್ಪ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ: ದರ್ಶನ್ ಉಳ್ಳಿ

ಸರ್ಕಾರದ ಎರಡು ವರ್ಷದಲ್ಲಿ ಅತ್ಯುತ್ತಮ ಕಾರ್ಯ: ಸಚಿವ ಮಧು ಬಂಗಾರಪ್ಪ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ: ದರ್ಶನ್ ಉಳ್ಳಿ
Facebook
Twitter
LinkedIn
WhatsApp

ಶಿಕಾರಿಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರ ಪರ ಜನಸಾಮಾನ್ಯರ ಪರವಾದ‌ ಆಡಳಿತ ನೀಡಿದೆ‌ ಜೊತೆ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಅವರು ಎರಡು ವರ್ಷದಲ್ಲಿ ಶಿಕ್ಷಣ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಇತಿಹಾಸದಲ್ಲಿ 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಮೂಲಕ ಇದುವರೆಗೂ ಯಾವ ಸಚಿವರು ಮಾಡದೇ ಇರುವ ಕೆಲಸವನ್ನು ಮಾಡಿದ್ದಾರೆ‌.

13 ಸಾವಿರ ಕಾಯಂ ಶಿಕ್ಷಕರ ನೇಮಕಾತಿ,ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಶಿಕ್ಷಕರ ನೇಮಕ ಮುಂದಿನ ದಿನಗಳಲ್ಲಿ 71 ಸಾವಿರ ಶಿಕ್ಷಕರ ನೇಮಕಕ್ಕೆ ಮುಂದಾಗಿದ್ದಾರೆ‌.

ಅಜೀಂ ಪ್ರೇಮ್ ಜೀ ಪೌಂಡೆಷನ್ ವತಿಯಿಂದ ರಾಜ್ಯ ಸರ್ಕಾರದ ಜೊತೆಗೆ ವಾರದ 6 ದಿನ ಮೊಟ್ಟೆ ರಾಗಿ ಮಾಲ್ಟ್ , ವಿತರಣೆ
ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ವತಿಯಿಂದ ಅನುದಾನದ ಮೂಲಕ ರಾಜ್ಯದಲ್ಲಿ 500 ಕ್ಕೂ ಹೆಚ್ಚು ಕೆಪಿಸಿ ಶಾಲೆಗಳನ್ನು ಆರಂಭಿಸಲಿದ್ದಾರೆ.

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ 3 ಬಾರಿ ಪರೀಕ್ಷೆ ಬರೆಯಲು‌‌‌ ಅವಕಾಶ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಚೈತನ್ಯ ನೀಡಿದ್ದಾರೆ. ರಾಜ್ಯದ ಸರ್ಕಾರಿ 24347 ಶಾಲೆಗಳಲ್ಲಿ ಗ್ರಂಥಾಲಯ, ಎಲ್ ಕೆಜಿ ಯುಕೆಜಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆ ಅಡಿ ಶಾಲೆ ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದಾರೆ‌.

ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳ ಮೂಲಕ ಅವರ ತಂದೆ ಮಾಜಿ ಸಿಎಂ ಬಂಗಾರಪ್ಪ ಅವರಂತೆ ಜನರ‌ ಮನಸ್ಸಿನಲ್ಲಿ ಸದಾ ಉಳಿಯುತ್ತಿದ್ದಾರೆ ಎಂದರು.

ಶಿಕಾರಿಪುರ‌ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಿಲ್ಲ ಶಾಸಕರು ಹಾಗೂ ಸ್ಥಳೀಯ ರಾಜಕೀಯ ಕಾಣದ ಕೈಗಳು ಇಂದಿರಾ ಕ್ಯಾಂಟಿನ್
ತಾಲೂಕು ಕಛೇರಿ ಹಿಂಭಾಗ ಜಾಗ‌‌ದಲ್ಲಿ ಆರಂಭಿಸಲು ಮುಂದಾಗಿದ್ದು ಈಗ ಸಚಿವರ ಗಮನಕ್ಕೆ‌ ತಂದು ತಾಲೂಕ್ ಕಛೇರಿ ಮುಂಭಾಗ ತೆರೆಯಲು ಯೋಜನೆ ರೂಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಭಂಡಾರಿ ಮಾಲತೇಶ್, ರಾಘವೇಂದ್ರ ನಾಯ್ಕ್, ಪಾಲಕ್ಷಪ್ಪ ಬಡಗಿ, ದಯಾನಂದ ಗಾಮ ,ಚನ್ನಳ್ಳಿ ಗಿಡಪ್ಪ, ಜಾಕೀರ್ ಸಾಬ್, ಚರಣ್ ಮಂಜುನಾಯ್ಕ್, ಇದ್ದರು.

News By: Raghu Shikari-7411515737