ಶಿಕಾರಿಪುರ ತಾಲೂಕಿ‌‌ನ ಎರಡು ಗ್ರಾಮ ಪಂಚಾಯತ್ ಉಪ ಚುನಾವಣೆ ಫಲಿತಾಂಶ ಪ್ರಕಟ..!

ಶಿಕಾರಿಪುರ ತಾಲೂಕಿ‌‌ನ ಎರಡು ಗ್ರಾಮ ಪಂಚಾಯತ್ ಉಪ ಚುನಾವಣೆ ಫಲಿತಾಂಶ ಪ್ರಕಟ..!
Facebook
Twitter
LinkedIn
WhatsApp

ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಮತ್ತು ಬಳ್ಳಿಗಾವಿ ಗ್ರಾಮ ಪಂಚಾಯತಿ ತಲಾ‌ 1 ಕ್ಷೇತ್ರಕ್ಕೆ ಮೆ.25 ರಂದು ಉಪ ಚುನಾವಣೆ ನಡೆದಿದ್ದು ಅದರ ಫಲಿತಾಂಶ ಇಂದು ಪ್ರಕಟವಾಗಿದೆ‌.

ಅಂಬಾರಗೊಪ್ಪ ಗ್ರಾಮ ಪಂಚಾಯತಿ ಒಂದು ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ 4 ಜನ ಅಭ್ಯರ್ಥಿಗಳು ಸ್ಪರ್ಧೆ ನಡೆಸಿದ್ದು ಕಾಂಗ್ರೆಸ್ ಬೆಂಬಲಿತ ಮಂಜುನಾಯ್ಕ್ ಅವರು 216 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದಾರೆ.

ಸುರೇಶ್ ನಾಯ್ಕ್ 77 ಮತ್ತು ಹಾಗೂ ರಘುನಾಯ್ಕ್ 74 ದಯಾನಂದನಾಯ್ಕ್ 23 ಮತಗಳನ್ನು ಪಡೆದುಕೊಂಡಿದ್ದಾರೆ.

ಬಳ್ಳಿಗಾವಿ ಗ್ರಾಮ ಪಂಚಾಯತಿ ಮಳ್ಳೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಜಯಮ್ಮ ಡಿ.ಆರ್ ಅವರು 351 ಮತಗಳನ್ನು ಪಡೆಯುವ ಮೂಲಕ‌ ಜಯಗಳಿಸಿದ್ದಾರೆ ಸಮೀಪದ ಸ್ಪರ್ಧಿ ಶೈಲಾಜಾ ಅವರು 158 ಮತಗಳನ್ನು ಪಡೆದುಕೊಂಡಿದ್ದಾರೆ.

News By: Raghu Shikari-7411515737