ಪ್ರತಿಷ್ಠಿತ ಶಾಲೆಯೊಂದರ ವಾಹನದಿಂದ ಕುಮದ್ವತಿ ನದಿಗೆ ಕಸದ ರಾಶಿ…!
ಶಿಕಾರಿಪುರ ಪಟ್ಟಣದ ಜೀವನದಿ ಕುಮದ್ವತಿ ನದಿಗೆ ಅನೇಕರು ಕಸವನ್ನು ಎಸೆಯುತ್ತಿರುವ ಘಟನೆ ನಡೆಯುತ್ತಿದೆ ಆದರೆ ಜನರಿಗೆ ಜಾಗೃತಿ ಮೂಡಿಸುವ ಶಿಕ್ಷಣ ಸಂಸ್ಥೆಯೊಂದರಿಂದಲೇ ಕಸವನ್ನು ನದಿಗೆ ಹಾಕು ಘಟನೆ ನಡೆದಿರುವುದು ಖಂಡನೀಯವಾಗಿದೆ. ಶಿಕಾರಿಪುರ ಪಟ್ಟಣದ ಹೊರವಲಯದಲ್ಲಿ ಇರುವ ಕುಮದ್ವತಿ ಸೇತುವೆ ಬಳಿ ಶ್ರೀ ಕೊಟ್ಟರೇಶ್ವರ ವಿದ್ಯಾಸಂಸ್ಥೆಯ ವಾಹನದಿಂದ ಬಂದು ಸಿಬ್ಬಂದಿಗಳು ಚೀಲಗಟ್ಟಲೇ ಕಸವನ್ನು ನದಿಗೆ ಎಸೆಯುತ್ತಿರುವ ದೃಶ್ಯ ಕಂಡುಬಂದಿದೆ. ನದಿಗಳ ಬಗ್ಗೆ ಕಸದ ವಿಲೇವಾರಿ ಬಗ್ಗೆ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ವಿದ್ಯಾಸಂಸ್ಥೆಯಿಂದ ಈ ರೀತಿಯ ಘಟನೆ ನಡೆಯುತ್ತಿರುವುದು […]
ಜ.21 ರಿಂದ ಹಿರಿಯ ನಾಗರೀಕರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ
ಶಿವಮೊಗ್ಗ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಇವರ ಸಂಯುಕ್ತಾಶ್ರಯದಲ್ಲಿ ಜ.21 ರಿಂದ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆವರೆಗೆ ಹಿರಿಯ ನಾಗರಿಕರಿಗೆ ಉಚಿತ ಕಣ್ಣಿನ ಪೊರೆ ಶಸ್ತç ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ.ಜ.21 ರಂದು ಸಾಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಗೌತಮಪುರ, ಸಂಪರ್ಕಿಸಬೇಕಾದ ದೂ.ಸಂ: 9535247757. […]
ಯುವನಿಧಿ ನೋಂದಣಿ ಅಭಿಯಾನ
ಶಿಕಾರಿಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವನಿಧಿ ವಿಶೇಷ ನೋಂದಣಿ ಅಭಿಯಾನ ಕೈಗೊಂಡಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಜ.20ವರೆಗೆ ಕಾಲೇಜಿನಲ್ಲಿ ಸಹಾಯಕೇಂದ್ರ ಸ್ಥಾಪಿಸಲಾಗಿದೆ. ಯುವನಿಧಿ ಅರ್ಜಿ ಸಲ್ಲಿಸುವ ಯುವಕ/ಯುವತಿಯರು 2022, 2023 ಹಾಗೂ 2024ರಲ್ಲಿ ಪದವಿ/ ಸ್ನಾತಕೋತ್ತರ ಪದವಿ/ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು. ಕನಿಷ್ಟ 6 ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿರಬಾರದು. ಉನ್ನತ ವಿದ್ಯಾಭ್ಯಾಸ ಮುಂದುವರಿಸಿರಬಾರದು ಎಂಬ ನಿಬಂಧನೆಗಳಿವೆ. ಅರ್ಹ ಯುವಕ/ಯುವತಿಯರು ಕಾಲೇಜಿನ ಪ್ಲೇಸ್‌ಮೆಂಟ್ ಅಧಿಕಾರಿ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಸ್ಥಳೀಯ ಸೈಬರ್ ಕೇಂದ್ರಗಳು, ಸೇವಾಸಿಂಧು ಪೋರ್ಟಲ್ […]