ಶಿಕಾರಿಪುರ ತಾಲೂಕಿನಲ್ಲಿ ಮೇಸ್ಕಾಂ ಇಲಾಖೆ ನಿರ್ವಹಣೆ ನೆಪದಲ್ಲಿ ಪದೇ ಪದೇ ಭಾನುವಾರ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ಆರೋಪಿಸಿ
ಪಟ್ಟಣದ ಮೇಸ್ಕಾಂ ಕಛೇರಿ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವೇಳೆ ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ್ ಮಾತನಾಡಿ ಮೇಸ್ಕಾಂ ಇಲಾಖೆ ನಿರ್ವಹಣೆ ಮಾಡುವ ನೆಪದಲ್ಲಿ ಭಾನುವಾರ 10 ಗಂಟೆಗೆ ವಿದ್ಯುತ್ ತೆಗೆದರೆ ರಾತ್ರಿ 7-8 ಗಂಟೆಗೆ ಕೊಡುತ್ತಿದ್ದಾರೆ.
ಇದರಿಂದ ತಾಲೂಕಿನ ಜನತೆಗೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದ್ದು ಅಧಿಕಾರಿಗಳು ಕೂಡಲೇ ಈ ಕುರಿತು ಗಮನ ನೀಡಬೇಕು ಎಂದರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಯ್ಕ್ ಮುಖಂಡರಾದ ಭಂಡಾರಿ ಮಾಲತೇಶ್, ಶಿವು, ಸುನೀಲ್ ಇದ್ದರು.
News by: Raghu Shikari-7411515737