ಶಿಕಾರಿಪುರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ್ ಗುಂಡ ಅಧ್ಯಕ್ಷತೆ ಯಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ವಿವಿಧ ಸಮಸ್ಯೆಗಳ ಕುರಿತು ಚೆರ್ಚೆಸಿ ಸಮಸ್ಯೆಗಳ ಕುರಿತು ಕ್ರಮ ವಹಿಸುವಂತೆ ಅಧಿಕಾರಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಅವರು ಬೀದಿ ಬದಿಯ ವ್ಯಾಪರಗಳಿಗೆ ಸ್ಥಳ ಗುರುತಿಸಿ ಮುಖ್ಯ ರಸ್ತೆಗಳಲ್ಲಿ ತಲುವ ಗಾಡಿ ಜನ ದಟ್ಟತೆ ಇರುವ ಸ್ಥಳಲ್ಲಿ ತೆರವುಗೊಳಿಸಿ ಅನಾಹುತ ಸಂಭವಿಸುವ ಮುಂಚಿತವಾಗಿ ಕ್ರಮತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದಲ್ಲಿ ಪಾನಿ,ಹಣ್ಣಿನ ಅಂಗಡಿಗಳು ಸಣ್ಣಪುಟ್ಟ ಅಂಗಡಿಗಳನ್ನು ಹೊರತು ಪಡಿಸಿ ಹೆಚ್ಚುವರಿ ಜಾಗ ಒತ್ತುವರಿ ಮಾಡಿರುವ ಅಂಗಡಿಗಳನ್ನು ತೆರವುಗೊಳಿಸಲಾಗುವುದು ಹಾಗೂ 6×6 ಅಂಗಡಿಗಳನ್ನು ಇಟ್ಟುಕೊಳ್ಳಲು ಅವಕಾಶ ಇದೆ ಪುರಸಭೆ ಐಡಿ ಕಾರ್ಡ್ ಪಡೆದು ತೆರೆಯಲು ಅವಕಾಶ ಇದ್ದು ಈಗಾಗಲೇ ಪರವಾನಿಗೆ ಇದ್ದವರಿಗೆ ರಸ್ತೆ ಸಂಚಾರಕ್ಕೆ ಅಡಿ ಮಾಡದಂತೆ ಸೂಚಿಸಲಾಗುವುದು ಎಂದು ಮುಖಾಧಿಕಾರಿ ಭರತ್ ತಿಳಿಸಿದರು.

ಖಾಸಗಿ ಬಸ್ ನಿಲ್ದಾಣದಲ್ಲಿ ಕಾರು ಪಾರ್ಕಿಂಗ್ ವ್ಯವಸ್ಥೆ ಮಾಡುವ ಕುರಿತು ಸೂಕ್ತ ಸ್ಥಳ ಗುರುತಿಸಬೇಕು ಬೈಕ್ ಗಳಿಗೆ ಅವಕಾಶ ಇದೆ ಅದರೆ ಖಾಸಗಿ ಬಸ್ ನಿಲ್ದಾಣದಲ್ಲಿ ಕಾರುಗಳ ಪಾರ್ಕಿಂಗ್ ನಿಂದ ಬಸ್ ಸಂಚಾರಕ್ಕೆ ಅಡಿ ಉಂಟಾಗುತ್ತಿದೆ ಕಾರುಗಳ ನಿಲ್ದಾಣಕ್ಕೆ ಸೂಕ್ತ ಜಾಗ ಗುರುತಿಸಬೇಕು ಎಂದು ಸದಸ್ಯರಾದ ಸುರೇಶ್ ತಿಳಿಸಿದರು.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಕೊಟ್ಟಿಗೆಯಲ್ಲಿ ಕಟ್ಟಿದ ದನಕರುಗಳಿಗೆ ನಾಯಿಗಳು ಕಚ್ಚಿದೆ ಚಿಕ್ಕನ್ ಅಂಗಡಿಗಳಿಂದ ಪ್ರಗತಿ ನಗರ ಬಳಿ ಹಾಗೂ ಬಸ್ ನಿಲ್ದಾಣಗಳಲ್ಲಿ ಹಾವಳಿ ಹೆಚ್ಚಾಗಿದೆ ಕೂಡಲೇ ಇದರ ಕುರಿತು ಗಮನ ನೀಡಿ ಎಂದು ರಮೇಶ್ ಹಾಗೂ ಪತ್ರಕರ್ತ ಸಂಘದ ಅಧ್ಯಕ್ಷರಾದ ಬಿ.ಎಲ್ ರಾಜು ಅವರು ತಿಳಿಸಿದರು.
ಬೀದಿ ನಾಯಿಗಳ ಸಂತಾನೋತ್ಪತ್ತಿ ನಿಯಂತ್ರಿಸಲು ಟೆಂಡರ್ ಕರೆಯಲಾಗಿದೆ ಅದರೆ ಈ ವರೆಗೂ ಯಾರು ಟೆಂಡರ್ ಹಾಕಿಲ್ಲ ಅದ್ದರಿಂದ ಪಶು ವೈದ್ಯರಿಗೆ ತಿಳಿಸಲಾಗಿದ್ದು ಜುಲೈ 2 ಎರಡರಿಂದ ನಾಯಿಗಳ ಸಂತಾನ ಹರಣ ಚಿಕಿತ್ಸೆ ಮಾಡಲು ಪ್ರಾರಂಭ ಮಾಡಲಾಗುಗುದು ಎಂದು ಆರೋಗ್ಯ ನೀರಿಕ್ಷಕ ರಾಜಕುಮಾರ ತಿಳಿಸಿದರು.

ಪುರಸಭಾ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಅಡ್ಡ ರಸ್ತೆಗಳಲ್ಲಿ ಸಂಪರ್ಕಿಸುವ ಭಾಗದಲ್ಲಿ ಗುಂಡಿಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು ಇಳಿಜಾರು ಅಥವಾ ದುರಸ್ತಿ ಕಾರ್ಯ ನಡೆಸುವ ಕುರಿತು ಚರ್ಚೆಯನ್ನು ನಡೆಸಲಾಯಿತು.
ಮಳೆಯಿಂದ ಆಗುತ್ತಿರುವ ತೊಂದರೆಗಳು ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ ಕ್ರಮವಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಯಿತು ಪುರಸಭೆಯ ಆಸ್ತಿಗಳನ್ನು ಗುರುತಿಸಿ ಅತಿಕ್ರಮಣ ಮಾಡದಂತೆ ಅಗತ್ಯ ಕ್ರಮ ವಹಿಸುವಂತೆ ಸದಸ್ಯೆ ರೂಪಕಲಾ ಅವರು ಮನವಿ ಮೇರೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಪಟ್ಟಣ ವ್ಯಾಪ್ತಿಯಲ್ಲಿ ಶನಿವಾರ ನಡೆಯುವ ಕುರಿ ಕೋಳಿ ಸಂತೆಯನ್ನು ಬೇರೆ ಸ್ಥಳಾಂತರಿಸಲು ಈ ಬಗ್ಗೆ ಚರ್ಚೆಯನ್ನು ನಡೆಸಿ ತೀರ್ಮಾನ ಕೈಗೊಳ್ಳದಾಗಿ ತಿಳಿಸಿದರು .
ಹಂದಿಗಳು ಬಿಡಾದಿ ದನಗಳನ್ನು ನಿಯಂತ್ರಣ ಮಾಡುವ ಕುರಿತು ಮಾಲೀಕರುಗಳಿಗೆ ಸೂಚನೆ ನೀಡಲಾಗಿದೆ.
ಚಿಕ್ಕನ್ ಮಟ್ಟನ್ ಸ್ಟಾಲ್ ಗಳನ್ನು ಒಂದು ಕಡೆ ಮಾಡಲು ಯೋಜನೆ ರೂಪಿಸಲು 40 ಅಂಗಡಿಗಳಿದ್ದು ಎಲ್ಲಾರಿಗೂ ಅನುಕೂಲ ಆಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವ ಚೆರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಸುನಾಂದ ಮಂಜುನಾಥ, ಉಪಾಧ್ಯಕ್ಷರಾದ ರೂಪ ಮಂಜುನಾಥ, ಸದಸ್ಯರಾದ ಸುರೇಶ್, ಸಾದೀಕ್, ರೂಪಕಲಾ, ಉಮಾವತಿ, ಕಮಲಮ್ಮ, ಶಂಕುತಲಮ್ಮ, ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.
News by: Raghu Shikari-7411515737