ಶಿಕಾರಿಪುರ: ಶಿಕಾರಿಪುರದ ಕಪ್ಪನಹಳ್ಳಿ ಮತ್ತು ಹೊಸೂರು ಮಹಾಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ಬಿವೈ ರಾಘವೇಂದ್ರ ಉದ್ಘಾಟಿಸಿ ಮಾತಮಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಆಡಳಿತದ ಚುಕ್ಕಾಣಿ ಹಿಡಿದು 11ನೇ ವಸಂತಕ್ಕೆ ದಾಪುಗಾಲು ಇಟ್ಟಿರುವ ಈ ಐತಿಹಾಸಿಕ ಕ್ಷಣವನ್ನು ಮತದಾರರ ನಡುವೆ ಇನ್ನಷ್ಟು ಸಾಕ್ಷಿಕರಿಸಲು ಭಾರತೀಯ ಜನತಾ ಪಕ್ಷ ದೇಶದಾದ್ಯಂತ ಹಮ್ಮಿಕೊಂಡಿರುವ ಅನೇಕ ಅಭಿಯಾನಗಳಲ್ಲಿ ಒಂದಾಗಿರುವ “ವಿಕಸಿತ ಭಾರತ” ಅಭಿಯಾನದ ಭಾಗವಾಗಿ ಇಂದು ತಾಲ್ಲೂಕು ಬಿಜೆಪಿ ಘಟಕ ವಿವಿಧ ಕಾರ್ಯಕ್ರಮವನ್ನು ರೂಪಿಸಿದೆ ಎಂದರು.

ಕಳೆದ 11 ವರ್ಷಗಳಲ್ಲಿ ಮೋದಿ ಸರ್ಕಾರ ಎಲ್ಲಾ ವರ್ಗದ ಜನ ಸಾಮಾನ್ಯರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಹಾಗೂ ಸ್ವಾವಲಂಬಿ ಜೀವನ ನಡೆಸಲು ರೂಪಿಸಿ ಜಾರಿಗೆ ತಂದು ಅರ್ಹ ಫಲಾನುಭವಿಗಳಿಗೆ ತಲುಪಿಸಿರುವ ನೂರಾರು ಐತಿಹಾಸಿಕ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿದೆ.

11 ವರ್ಷಗಳಲ್ಲಿ ಮೂಲಸೌಕರ್ಯ, ರಾಷ್ಟ್ರೀಯ ಹೆದ್ದಾರಿ, ಕೃಷಿ ಕ್ಷೇತ್ರ, ಕೈಗಾರಿಕಾ ವಲಯ, ರಾಜತಾಂತ್ರಿಕ ವ್ಯವಸ್ಥೆ, ರಕ್ಷಣಾ ವಿಭಾಗ, ದೇಶದ ಆರ್ಥಿಕ ಉನ್ನತಿಕರಣ ಸೇರಿದಂತೆ ಇನ್ನೂ ಅನೇಕ ವಿಭಾಗಗಳಲ್ಲಿ ಕಂಡಿರುವ ಐತಿಹಾಸಿಕ ಬದಲಾವಣೆಗಳನ್ನು ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷರು ಸೇರಿದಂತೆ ಅನೇಕ ಹಿರಿಯ ಮುಖಂಡರು, ಗಣ್ಯರು ಹಾಗೂ ಕಾರ್ಯಕರ್ತರು ಇದ್ದರು.
News by: Raghu Shikari-7411515737