ಶಿಕಾರಿಪುರ: ಪತ್ರಕರ್ತರು ಸಂವಿಧಾನಕ್ಕೆ ಪೂರಕವಾಗಿ ನಡೆದುಕೊಳ್ಳಬೇಕಾಗಿದೆ ಯಾವುದೇ ಧರ್ಮಕ್ಕೆ ,ಜಾತಿಗೆ ಸೀಮಿತವಾಗಿರದೇ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕಾಗಿದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಎನ್ ರವಿಕುಮಾರ್ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜಕ್ಕೆ ಪೂರಕವಾದ ಸುದ್ದಿಗಳು ಇಂದು ನಮ್ಮ ದೃಶ್ಯಮಾಧ್ಯಮಗಳಲ್ಲಿ ಕಳೆದುಹೊಗಿದೆ ಸಮಾಜಕ್ಕೆ ನಾವು ಪಶ್ನಾತೀತರಲ್ಲ ಸಮಾಜಿಕ ನ್ಯಾಯದ ಪರವಾಗಿ ಇರುವ ಪತ್ರಕರ್ತ ಮಾತ್ರ ನಿಜವಾದ ಪತ್ರಕರ್ತ ವಾಟ್ಸಪ್ ಯುನಿವರ್ಸಿಟಿ ಯನ್ನು ನಂಬಿ ಅದನ್ನ ನಿಜ ಎನ್ನುವ ದೊಡ್ಡ ಪ್ರಮೋದಗಳನ್ನು ಕಾಣಬಹುದಾಗಿದೆ. ಅದರಿಂದ ಹೊರಗೆ ಬರಬೇಕು ಸತ್ಯವನ್ನು ತಿಳಿಯಲು ನಾವು ಪತ್ರಿಕೆಗಳನ್ನು ಓದಬೇಕು ಓದುಗರು ವಿಶ್ವಾಸ ಅರ್ಹ ಪತ್ರಿಕೆಗಳನ್ನು ನಂಬಬೇಕಾಗಿದೆ ಎಂದರು.

ಮಾಧ್ಯಮಗಳ ಜವಾಬ್ದಾರಿಯನ್ನು ಮೀರಿದೆ ಸಾರ್ವಜನಿಕರ ಸಹಕಾರ ಜಾಹೀರಾತು ಜೀವಾಳವಾಗಿದೆ. ಗೂಗಲ್ ನಲ್ಲಿ ಸಿಗುವುದು ಮಾಹಿತಿ ಮಾತ್ರ ಜ್ಞಾನ ಸಿಗುವುದು ಪತ್ರಿಕೆ ಓದುವುದು ಬರಹಗಳನ್ನು ಓದುವುದರಿಂದ ಕಲಿಯಬಹುದು.
ನಿಜವಾದ ಮಾಧ್ಯಮಗಳ ಹುಡುಕಾಟ ಜನರು ವಿಚಲಿತರಾಗಿದ್ದಾರೆ ಯಾವುದು ನಿಜವಾದ ಮಾಧ್ಯಮ ಎಂಬುದು ಗುರುತಿಸುವುದು ದೊಡ್ಡ ಪ್ರಶ್ನೆಯಾಗಿದೆ.ಟಿವಿಯಲ್ಲಿ ಕೆಲಸ ಮಾಡಿದರೆ ಮಾತ್ರ ಪತ್ರಕರ್ತ ಎನ್ನುವ ಮನೋಭಾವ ಎಲ್ಲಾರಲ್ಲೂ ಮೂಡಿದೆ ಅದರೆ ಮುದ್ರಣ ಮಾಧ್ಯಮ ಅತ್ಯಂತ ಶಕ್ತಿಶಾಲಿ ಮಾಧ್ಯಮ ಆಗಿದೆ.

ಮಾಧ್ಯಮಗಳು ಉದ್ಯಮ ಮತ್ತು ಧರ್ಮದಗಳಲ್ಲಿ ಸಿಲುಕಿಕೊಂಡಿದೆ ಧರ್ಮ ಮತ್ತು ಉದ್ಯಮಗಳ ಮಾಧ್ಯಮವನ್ನು ಆಳುತ್ತಿದೆ ಈ ಕಾರಣಕ್ಕಾಗಿ ಸ್ವತಂತ್ರ ಮಾಧ್ಯಮಗಳನ್ನು ಸೃಷ್ಟಿಸಿದ್ದಾರೆ ಸತ್ಯದ ಹಾದಿಯಲ್ಲಿ ಯೂಟ್ಯೂಬ್,ವೆಬ್ಸೈಟ್ ಗಳ ಮೂಲಕ ಸ್ವತಂತ್ರ ಪತ್ರಿಕೆ ಆರಂಭ ಆಗಿದೆ.ಅಧುನಿಕ ಸುದ್ದಿ ಮಾಧ್ಯಮಗಳನ್ನು ಬಿಟ್ಟು ವೈಚಾರಿಕ ಸುದ್ದಿ ಮಾಧ್ಯಮಗಳನ್ನು ಅಳವಡಿಸಿಕೊಳ್ಳಿ ಉತ್ತಮ ಸಮಾಜ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸಂಘಧ ಉಪಾಧ್ಯಕ್ಷರಾದ ಕೆ.ಎಸ್ ಹುಚ್ಚರಾಯಪ್ಪ ಅವರ ಮಾತನಾಡಿ ಇಂದಿನ ವಿದ್ಯಾರ್ಥಿಗಳಲ್ಲಿ ಪತ್ರಿಕೆ ಓದುವ ಅಭ್ಯಾಸ ಕಡಿಮೆ ಆಗಿದೆ ಮೊಬೈಲ್ ಗೀಳಿನಲ್ಲಿ ಯುವಕರು ತಮ್ಮ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ.ವಿದ್ಯಾರ್ಥಿಗಳು ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಮೂಲಕ ತಮ್ಮ ಜೀವನಲ್ಲಿ ಯಶಸ್ಸುಗಳಿಸಹುದು ಕೆ.ಎ.ಎಸ್ ಐಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪತ್ರಿಕೆಗಳು ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಿಕಾ ದಿನಾಚರಣೆ ಪ್ರಯುಕ್ತ ವಿವಿಧ ಶಾಲಾ ಕಾಲೇಜು ಹಾಸ್ಟೆಲ್ ಗಳಲ್ಲಿ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ತಾಲೂಕ್ ಪತ್ರಕರ್ತ ಸಂಘದ ಅಧ್ಯಕ್ಷರಾದ ಬಿ.ಲ್ ರಾಜು ಅವರು ವಹಿಸಿದರು ಈ ವೇಳೆ ಜಿಲ್ಲಾ ಸಂಘದ ಕಾರ್ಯದರ್ಶಿ ವಿಟಿ ಅರುಣ್,ರೋಹಿತ್, ರಂಜಿತ್, ಪ್ರೇಸ್ ಟ್ರಸ್ಟ್ ಅಧ್ಯಕ್ಷರಾದ ವೈಭವ್ ಬಸವರಾಜ್, ಮಾಜಿ ಅಧ್ಯಕ್ಷರಾದ ವೇಣುಗೋಪಲ್, ಹಿರಿಯ ಪತ್ರಕರ್ತರಾದ ಎಸ್ ಬಿ ಮಠದ್, ಹಾಗೂ ಪತ್ರಕರ್ತರು ವಿದ್ಯಾರ್ಥಿಗಳು ಸಾರ್ವಜನಿಕರು ಇದ್ದರು.
News By: Raghu Shikari-7411515737