ಶಿಕಾರಿಪುರ: ಹವಾಮಾನಾಧರಿತ ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

ಶಿವಮೊಗ್ಗ : ಶಿಕಾರಿಪುರ ತೋಟಗಾರಿಕೆ ಇಲಾಖೆಯು 2025-26ನೇ ಸಾಲಿಗೆ ಮರುವಿನ್ಯಾಸಗೊಳಿಸಿದ ಹವಾಮಾನಾಧರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ, ಕಾಳುಮೆಣಸು, ಮಾವು ಮತ್ತು ಶುಂಠಿ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಿದೆ. ವಿಮಾ ಕಂತಿನ ವಿವರ: ಅಡಿಕೆ ಒಂದು ಎಕರೆಗೆ -ರೂ. 2560/-, ಮಾವು – ಒಂದು ಎಕರೆಗೆ -ರೂ. 3200/-, ಕಾಳುಮೆಣಸು- ಒಂದು ಎಕರೆಗೆ -ರೂ. 1692/- ಮತ್ತು ಶುಂಠಿ ಒಂದು ಎಕರೆಗೆ -ರೂ. 2600/-.ರೈತರು ಪ್ರಸಕ್ತ ಸಾಲಿನ ಪಹಣಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಆಧಾರ್ […]

ರಾಜ್ಯದ ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ ಪರಿಹಾರ ಘೋಷಣೆ..!

ಬೆಂಗಳೂರು: ರಾಜ್ಯದ ಮಾವು ಬೆಳೆಗಾರರ ಹಿತ ಕಾಪಾಡುವಂತೆ ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮನವಿಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸ್ಪಂದಿಸಿದ್ದಾರೆ. ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿಯಲ್ಲಿ 2025-26ನೇ ಸಾಲಿನಲ್ಲಿ ಕರ್ನಾಟಕದ ಮಾವು ಸಂಗ್ರಹಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಕ್ವಿಂಟಾಲ್‌ಗೆ 1 ಸಾವಿರದ 616 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ 2 ಲಕ್ಷದ 50 ಸಾವಿರ ಮೆಟ್ರಿಕ್ ಟನ್ ಮಾವು ಖರೀದಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. News by: Raghu […]

ರಾಷ್ಟ್ರೀಯ ಸಮಗ್ರತೆಗೆ ಹೋರಾಡಿದ ಮಹಾನ್ ಚೇತನಗಳನ್ನು ನಾವು ಸ್ಮರಿಸಬೇಕು: ಬಿವೈ ವಿಜಯೇಂದ್ರ

ಶಿಕಾರಿಪುರ: ಪಟ್ಟಣದ ತಾಲೂಕು ಬಿಜೆಪಿ ಕಛೇರಿಯಲ್ಲಿ ನಡೆದ ಡಾ.ಶ್ಯಾಮ ಪ್ರಶಾದ್ ಮುಖರ್ಜಿಯವರ ಸ್ಮ್ರತಿ ದಿನ ಹಾಗೂ ಜಗನ್ನಾಥ ಜೋಷಿ ಯವರ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯ ಬಿಜೆಪಿಯ ಅಧ್ಯಕ್ಷರು ಶಾಸಕರಾದ ಬಿ.ವೈ ವಿಜಯೇಂದ್ರ ಉದ್ಘಾಟಿಸಿ ಮಾತನಾಡಿದರು‌. 1951 ರಲ್ಲಿ ಜನ ಸಂಘದ ಸ್ಥಾಪನೆಯಲ್ಲಿ ಇವರು ಸಹ ಪ್ರಮುಖರು ದೇಶಕ್ಕಾಗಿ ಹೋರಾಡಿದ ನಾಯಕರು ಕರ್ನಾಟಕ ಕೇಸರಿ ಎಂದೆ ಪ್ರಸಿದ್ಧಿಯಾದ ಜೋಷಿಯವರು ಸಹ ದೇಶಕ್ಕಾಗಿ ಪ್ರಾಣವನ್ನೆ ತ್ಯಾಗ ಮಾಡಿದವರು ಈ ಇಬ್ಬರ ಮಹಾನ್ ಚೇತನಗಳಿಗೆ ಈ ದಿನ ಗೌರವ ಸಲ್ಲಿಸುವ ವಿಶೇಷ […]

ಬಡವರಿಗೆ ಮನೆ ವಿತರಣೆಯಲ್ಲೂ ಭ್ರಷ್ಟಾಚಾರ: ಬಿ.ಆರ್ ಪಾಟೀಲ್ ಸತ್ಯವನ್ನೇ ಹೇಳಿದ್ದಾರೆ:ಬಿವೈ ವಿಜಯೇಂದ್ರ

ಬೆಂಗಳೂರು:ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಬಿ.ಆರ್.ಪಾಟೀಲ್ ಗಂಭೀರವಾದ ರಾಜ್ಯದ ಪರಿಸ್ಥಿತಿ ಬಗ್ಗೆ ಬೆಳಕು ಚಲ್ಲಿದ್ದಾರೆ.ಬಡವರಿಗೆ ಮನೆಗಳನ್ನು ಕೊಡಬೇಕಿತ್ತು ಅಲ್ಲಿಯೂ ಸಹ ಭ್ರಷ್ಟಾಚಾರ ರಾಜ್ಯದ ಜನತೆ ಮುಂದೆ ಬಿಚ್ಚಿಟ್ಟಿದ್ದಾರೆ . ಹಿರಿಯ ನಾಯಕರಾದ ಬಿ.ಆರ್ ಪಾಟೀಲ್ ರವರನ್ನ ಆಡಳಿತ ಪಕ್ಷದ ನಾಯಕರು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಈ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಡವರಿಗೆ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ಸರ್ಕಾರದಿಂದ ಬಡವರಿಗೆ ಯಾವುದೇ ಅನುಕೂಲ ಇಲ್ಲ.ಹಿಂದೆ ಯಡಿಯೂರಪ್ಪನವರ ಸರ್ಕಾರ ಇದ್ದಾಗ ಅನೇಕ ಬಡವರಪರ […]

ಶಿವಮೊಗ್ಗದಲ್ಲಿ ವ್ಯಕ್ತಿಯ ಕೊಲೆ ಬೊಮ್ಮನಕಟ್ಟೆ ಕೆರೆ ಬಳಿ ಶವ ಪತ್ತೆ..!

ಶಿವಮೊಗ್ಗ: ನಗರದ ಹಳೆ ಬೊಮ್ಮನಕಟ್ಟೆಯ ಕೆಂಚಮ್ಮ ದೇವಸ್ಥಾನದ ಹಿಂಬದಿಯ ಕೆರೆ ಏರಿಯ ಬಳಿ ಕೊಲೆಯಾದ ಪುರುಷನ ಶವವೊಂದು ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ. ಕೊಲೆಯಾದ ವ್ಯಕ್ತಿ ಅವಿನಾಶ್ (35) ಎಂದು ಗುರುತಿಸಲಾಗಿದೆ.ಕೊಲೆ ನಡೆದ ಜಾಗ ರಕ್ತಸಿಕ್ತವಾಗಿದ್ದು,ಮದ್ಯದ ಬಾಟಲಿ, ಖಾರಾ ಮಿಕ್ಸ್ಚರ್ ಎಲ್ಲಾ ಬಿದ್ದಿದೆ. ವಿನೋಬನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬಹುಷ: ತಡರಾತ್ರಿಯ ವರೆಗೂ ಸ್ನೇಹಿತರ ಜೊತೆ ಡ್ರಿಂಕ್ಸ್ ಪಾರ್ಟಿ ಮಾಡಿ ನಂತರ ಜಗಳವಾಗಿ ಅದು ಕೊಲೆಯಲ್ಲಿ ಅವಸಾನ ಆಗಿದೆ ಎಂದು ಪೋಲಿಸರು ಅಂದಾಜಿಸಿದ್ದಾರೆ. ತುಂಗಾನಗರ […]

ದೇಶದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ 1 ಲಕ್ಷದ 18 ಸಾವಿರಕ್ಕೆ ಹೆಚ್ಚಳ – ಕೇಂದ್ರ ಗೃಹ ಸಚಿವ ಅಮಿತ್ ಶಾ

ಬೆಂಗಳೂರು: ಬಡತನದೊಂದಿಗೆ ಆರೋಗ್ಯದ ವೆಚ್ಚವೂ ದೇಶದ ಜನರನ್ನು ಕಾಡುತ್ತಿದ್ದು ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಅಯುಷ್ಮಾನ್ ಭಾರತ್ ಜನೌಷಧಿ ಕೇಂದ್ರಗಳ ಮೂಲಕ ಜನರ ಕಷ್ಟ ಪರಿಹಾರಕ್ಕೆ ಸ್ಪಂದಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜು ಹಾಗೂ ಅಸ್ಪತ್ರೆ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ದೇಶದಲ್ಲಿ 387ರಷ್ಟಿದ್ದ ವೈದ್ಯಕೀಯ ಕಾಲೇಜುಗಳ ಸಂಖ್ಯೆ 780ಕ್ಕೆ ಏರಿದ್ದು, 51ಸಾವಿರ ಇದ್ದ ವೈದ್ಯಕೀಯ ಸೀಟುಗಳು 1 ಲಕ್ಷ 18 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು […]

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪರಿಸರ,‌ಹವಾಮಾನ ಕ್ಲಬ್ ಸ್ಥಾಪನೆಗೆ ಆದೇಶ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ರಾಜ್ಯದ ಪ್ರತಿಯೊಂದು ಶಾಲೆಗಳಲ್ಲಿ ಪರಿಸರ, ಹವಾಮಾನ ವೈಪರಿತ್ಯ ಜಾಗತಿಕ ಕ್ಲಬ್‌ಗಳನ್ನು ಕಡ್ಡಾಯವಾಗಿ ರಚನೆ ಮಾಡಬೇಕು ಎಂಬ ಆದೇಶ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಶ್ವ ಪರಿಸರ ದಿನ ೨೦೨೫ರ ಅಂಗವಾಗಿ ಆಯೋಜಿಸಿದ್ದ ಪರಿಸರ ನಡಿಗೆ ಕಾರ್ಯಕ್ರಮಕ್ಕೆ, ವಿಧಾನ ಸೌಧದ ಮುಂಭಾಗದಲ್ಲಿ ಚಾಲನೆ ನೀಡಿದ ಅವರು, ಕನಿಷ್ಠ 25 ವಿದ್ಯಾರ್ಥಿಗಳನ್ನು ಒಳಗೊಂಡಂತೆ ಜಾಗೃತಿ ಕ್ಲಬ್‌ಗಳನ್ನು ರಚನೆ ಮಾಡಬೇಕೆಂದು ಹೇಳಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿ ಸಸಿಯನ್ನು ದತ್ತು ಪಡೆಯಬೇಕೆಂದು ಸಲಹೆ […]

ರಾಜ್ಯದಲ್ಲಿಯೇ ಮಾದರಿ ಅಂಗನವಾಡಿ ಕೇಂದ್ರಗಳನ್ನಾಗಿಸಲು ಶಕ್ತಿ ಮೀರಿ ಶ್ರಮಿಸಿ: ಬಿವೈ ವಿಜಯೇಂದ್ರ

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶಿಕಾರಿಪುರ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಎಲ್.ಇ.ಡಿ ಟಿವಿ ವಿತರಣೆ ಅಂಗನವಾಡಿ ಕೇಂದ್ರಗಳಿಗೆ ಎಲ್.ಇ.ಡಿ ಟಿವಿ ಕೇಂದ್ರ ಪುರಸ್ಕೃತ ಸಕ್ಷಮ ಅಂಗನವಾಡಿ ಯೋಜನೆ ಅಡಿಯಲ್ಲಿ ಎಲ್.ಇ.ಡಿ ಟಿವಿ, ವಿತರಿಸಿ ಬಿಜೆಪಿ ರಾಜ್ಯಾಧ್ಯಕ್ಷರು ಶಾಸಕರಾದ ಬಿ.ವೈ ವಿಜಯೇಂದ್ರ ಮಾತನಾಡಿದರು. ಶಿಕಾರಿಪುರ ಎಲ್ಲಾ ಅಂಗನವಾಡಿ ಕೇಂದ್ರಗಳು ರಾಜ್ಯದಲ್ಲಿಯೇ ಮಾದರಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಎಲ್ಲರೂ ಶಕ್ತಿ ಮೀರಿ ಶ್ರಮಿಸಬೇಕು ‘ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆ’ಯ 4564 ಫಲಾನುಭವಿಗಳಿಗೆ ಮಂಜೂರಾತಿ ನೀಡಿದ್ದು ಇದರಲ್ಲಿ 3987 ಫಲಾನುಭವಿಗಳಿಗೆ ಪಾಸ್ ಪುಸ್ತಕ ವಿತರಿಸಲಾಗಿದ್ದು […]

ಕೋಮು ಸಂಘರ್ಷ ತಡೆಗೆ ವಿಶೇಷ ಕಾರ್ಯಪಡೆ ರಚನೆ:ಗೃಹ ಸಚಿವ ಚಾಲನೆ

ಮಂಗಳೂರು: ಕೋಮು ಸಂಘರ್ಷವನ್ನು ತಡೆಗಟ್ಟುವ ಸಲುವಾಗಿ ಮಂಗಳೂರಿನಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿದ್ದು ಮಂಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕೋಮು ಸಂಘರ್ಷ ನಿಗ್ರಹಕ್ಕೆ ಮಾಡಿರುವ ಸ್ಪೆಷಲ್ ಆಕ್ಷನ್ ಫೋರ್ಸ್ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡಲಿದೆ. ಡಿಐಜಿ ದರ್ಜೆ ಅಧಿಕಾರಿ ನೇತೃತ್ವದಲ್ಲಿ ಈ ತಂಡ ಕಾರ್ಯ ನಿರ್ವಹಿಸಲಿದ್ದು,284 ಸಿಬ್ಬಂದಿ ಒಳಗೊಂಡ ಮೂರು ಕಂಪನಿ ಕಾರ್ಯಾಚರಣೆಗೆ ಸಿದ್ಧವಾಗಿದೆ. ದಕ್ಷಿಣ ಕನ್ನಡ, […]

ಶಿಕಾರಿಪುರ ಮಹಿಳೆಯ ಕೊಲೆ..!

ಶಿಕಾ‌ರಿಪುರ ಪಟ್ಟಣದ ಸೋಸೈಟಿ ಕೇರಿಯಲ್ಲಿ ಇಂದು ಮುಂಜಾನೆ ಮಹಿಳೆಯೊಬ್ಬರ ಕೊಲೆಯಾಗಿದೆ. ಪಟ್ಟಣದ ಸೋಸೈಟಿ ಕೇರಿ ವಾಸಿ ಮಂಜುಳ( 33) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದ್ದು ಆಕೆಯ ಪತಿಯೆ ಕೊಲೆ ಮಾಡಿರಿವುದಾಗಿ ಅನುಮಾನ ವ್ಯಕ್ಯವಾಗಿದೆ.ಮೃತ ಮಹಿಳೆಗೆ ಮೂರು ಜನ ಮಕ್ಕಳು ಇದ್ದರು ಎನ್ನಲಾಗಿದ್ದು ಶಾಹಿ ಗಾರ್ಮೇಂಟ್ಸ್ ಉದ್ಯೋಗಿಯಾಗಿದ್ದರ ಎಂದು ತಿಳಿದುಬಂದಿದೆ. ಈ‌ ಕುರಿತು ಪಟ್ಟಣದ ಪೋಲಿಸ್ ಠಾಣೆ ಪೋಲಿಸರು ತನಿಖೆ ನಡೆಸುತ್ತಿದ್ದು ನಿಖರ ಮಾಹಿತಿ ದೊರೆಯಬೇಕಾಗಿದೆ.