ಶಿಕಾರಿಪುರ :ಪಟ್ಟಣದ ದೊಡ್ಡಪೇಟೆ ಯಲ್ಲಿರುವ ವಿದ್ಯಾ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲಾಯಲ್ಲಿ ಶುಕ್ರವಾರ ದಿ. ಹೆಚ್ ಟಿ. ಬಳೆಗಾರ್ ರವರ ಜನ್ಮ ದಿನಾಚರಣೆಯನ್ನು ಹೆಚ್ ಟಿ. ಬಳೆಗಾರ್ ಫೌಂಡೇಶನ್ ವತಿಯಿಂದ ಆಚರಿಸಲಾಯಿತು.
ಈ ಸಂದರ್ಭ ಫೌಂಡೇಶನ್ ಅಧ್ಯಕ್ಷರಾದ ವೈಭವ ಬಸವರಾಜ್ ಮಾತನಾಡಿ. ಬಳೆಗಾರರವರು ಶೋಷಿತರ, ನೊಂದವರ, ಅಸಹಾಯಕರ ಪರವಾಗಿ ಇದ್ದಂತ ವ್ಯಕ್ತಿತ್ವದವರು ಆದ್ದರಿಂದ ಅವರ ಜನ್ಮದಿನ ಆಚರಣೆಯನ್ನು ಬಡ ಬುದ್ದಿ ಮಾಂದ್ಯ ಮಕ್ಕಳ ಶಾಲೆಯಲ್ಲಿ ಆಚರಿಸಿಲಾಗಿ ಈ ಶಾಲೆಗೆ ಫೌಂಡೇಶನ್ ವತಿಯಿಂದ ನಿತ್ಯಪಯೋಗಿ ಸಾಮಗ್ರಿಗಳನ್ನು ನೀಡುತ್ತಿದ್ದು ಮುಂದೆಯೂ ಬಳೆಗಾರ್ ಅವರ ಆಶಯಗಳಂತೆ ನೊಂದವರ, ದುರ್ಬಲರ ಪರವಾಗಿ ಇರುತ್ತೇವೆ ಎಂದರು.
ಗೌರವಧ್ಯಕ್ಷ ಬಿಎಸ್ಎನ್ಎಲ್ ಶಿವಣ್ಣ ಮಾತನಾಡಿ ಬಳೆಗಾರವರು ಕೇವಲ ರಾಜಕೀಯ ವ್ಯಕ್ತಿಯಾಗಿರದೇ ಜನನುರಾಗಿಯಾಗಿ, ಸ್ನೇಹ ಜೀವಿಯಾಗಿ ಎಲ್ಲರ ಜೊತೆ ಬೆರೆತು ಬಡವರ ಸಂಕಷ್ಟಗಳಿಗೆ ಕೈ ಜೋಡಿಸುತ್ತಿದ್ದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಬಸವಣ್ಣನವರ ಮತ್ತು ಅಂಬೇಡ್ಕರ್ ಆಚಾರ, ವಿಚಾರಗಳನ್ನು ಪಾಲಿಸುತ್ತಿದ್ದ ಅಪರೂಪದ ವ್ಯಕ್ತಿ ಎಂದರು.
ಮತ್ತೋರ್ವ ಗೌರವಾಧ್ಯಕ್ಷ ಕೆ.ಎಸ್ ಹುಚ್ಚುರಾಯಪ್ಪ ಮಾತನಾಡಿ ಅಸಹಾಯಕರ ಮತ್ತು ನೊಂದವರ ಪರವಾಗಿ ಫೌಂಡೇಶನ್ ಕೆಲಸ ಮಾಡಿದರೆ ಬಳೆಗಾರರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು. ಬುದ್ಧಿಮಾಂದ್ಯ ಮಕ್ಕಳ ಸಂಸ್ಥಾಪಕ ಈರಪ್ಪ ಮಾತನಾಡಿ ಯಾವುದೇ ಅನುದಾನವಿಲ್ಲದೆ ಕಳೆದ ಹತ್ತು ವರ್ಷಗಳಿಂದ ನಡೆಸುತ್ತಿರುವ ಈ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಫೌಂಡೇಶನ್ ನವರು ಕೈಲಾದ ಸಹಾಯ ಮಾಡಿರುವುದು ನಮಗೆ ಸಂತಸ ತಂದಿದ್ದು ಸರ್ಕಾರವು ಶಾಲೆಗೆ ಅನುದಾನ ನೀಡುವಂತೆ ಮನವಿ ಮಾಡಿದರು.
ಉಪಾಧ್ಯಕ್ಷ ರಸೂಲ್ ಸಾಬ್, ರೇವಣಪ್ಪ, ನಾಗಪ್ಪ ನಾಗೆಹಳ್ಳಿ, ನಾಗರಾಜ್ ಹಿರೇ ಜಂಬೂರು, ಟಿ ಓಂಕಾರಪ್ಪ, ಐಶ್ವರ್ಯ, ಭೂಮಿಕಾ ಸೇರಿದಂತೆ ಫೌಂಡೇಶನ್ ನ ಪದಾಧಿಕಾರಿಗಳು ಹಾಗೂ ಸಲಹಾ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.