ಶಿವಮೊಗ್ಗದಲ್ಲಿ ವ್ಯಕ್ತಿಯ ಕೊಲೆ ಬೊಮ್ಮನಕಟ್ಟೆ ಕೆರೆ ಬಳಿ ಶವ ಪತ್ತೆ..!

ಶಿವಮೊಗ್ಗದಲ್ಲಿ ವ್ಯಕ್ತಿಯ ಕೊಲೆ ಬೊಮ್ಮನಕಟ್ಟೆ ಕೆರೆ ಬಳಿ ಶವ ಪತ್ತೆ..!
Facebook
Twitter
LinkedIn
WhatsApp

ಶಿವಮೊಗ್ಗ: ನಗರದ ಹಳೆ ಬೊಮ್ಮನಕಟ್ಟೆಯ ಕೆಂಚಮ್ಮ ದೇವಸ್ಥಾನದ ಹಿಂಬದಿಯ ಕೆರೆ ಏರಿಯ ಬಳಿ ಕೊಲೆಯಾದ ಪುರುಷನ ಶವವೊಂದು ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.

ಕೊಲೆಯಾದ ವ್ಯಕ್ತಿ ಅವಿನಾಶ್ (35) ಎಂದು ಗುರುತಿಸಲಾಗಿದೆ.
ಕೊಲೆ ನಡೆದ ಜಾಗ ರಕ್ತಸಿಕ್ತವಾಗಿದ್ದು,ಮದ್ಯದ ಬಾಟಲಿ, ಖಾರಾ ಮಿಕ್ಸ್ಚರ್ ಎಲ್ಲಾ ಬಿದ್ದಿದೆ.

ವಿನೋಬನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಬಹುಷ: ತಡರಾತ್ರಿಯ ವರೆಗೂ ಸ್ನೇಹಿತರ ಜೊತೆ ಡ್ರಿಂಕ್ಸ್ ಪಾರ್ಟಿ ಮಾಡಿ ನಂತರ ಜಗಳವಾಗಿ ಅದು ಕೊಲೆಯಲ್ಲಿ ಅವಸಾನ ಆಗಿದೆ ಎಂದು ಪೋಲಿಸರು ಅಂದಾಜಿಸಿದ್ದಾರೆ.

ತುಂಗಾನಗರ ಠಾಣೆಯಿಂದ ಫೊರೆನ್ಸಿಕ್ ತಜ್ಞರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆರೋಪಿತರ ಪತ್ತೆಗೆ ಶ್ವಾನದಳವನ್ನು ಕರೆತರಲಾಗಿದೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.