ಆಹಾರದಲ್ಲಿನ ಶಿಸ್ತು – ಭಾಗ 4 Fermented ಆಹಾರದ ಬಗ್ಗೆ ಓದುಗರ ಪ್ರಶ್ನೆಗಳಿಗೆ ಉತ್ತರಗಳು…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:

ಆಹಾರದಲ್ಲಿನ ಶಿಸ್ತು – ಭಾಗ 4
Fermented ಆಹಾರದ ಬಗ್ಗೆ ಓದುಗರ ಪ್ರಶ್ನೆಗಳಿಗೆ ಉತ್ತರಗಳು.

ಬಹಳಷ್ಟು ಸಹೃದಯ ಓದುಗರು ಇಡ್ಲಿ-ದೋಸೆಗಳ ಬಗೆಗಿನ ಮಾಹಿತಿಗಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು.

ಹಾಗೆಯೇ, ತಮ್ಮ ಪ್ರಶ್ನೆಗಳ ಮೂಲಕ ಇಂದಿನ ಈ ಸಂಚಿಕೆಗೆ ವಿಷಯವನ್ನು ಕೊಟ್ಟಂತಹ ಓದುಗರಿಗೂ ಧನ್ಯವಾದಗಳು.

ಈ ಪ್ರತಿಕ್ರಿಯೆಗಳನ್ನು ನೋಡಿದರೆ ನಾವು ಇಡ್ಲಿ-ದೋಸೆಗಳನ್ನು ಅದೆಷ್ಟು ನಿರಂತರವಾಗಿ ಸೇವಿಸುತ್ತಿದ್ದೇವೆ ಎಂದು ತಿಳಿದುಬರುತ್ತದೆ!!
ಆದರೆ, ಈ ಕಾರಣದಿಂದಲೇ ಅದೆಷ್ಟೋ ಕಾಯಿಲೆಗಳನ್ನು ತಂದುಕೊಂಡಿದ್ದೇವೆಂದು ಅನೇಕರಿಗೆ ತಿಳಿದೇಯಿಲ್ಲ!!!

▪️ಪ್ರಶ್ನೆ 1:ಇಡ್ಲಿ-ದೋಸೆಗಳನ್ನು ಸೇವಿಸಿ ನಮ್ಮ ಹಿರಿಯರು 90-100 ವರ್ಷ ಆರೋಗ್ಯದಿಂದ ಜೀವಿಸಿದ್ದರಲ್ಲವೇ?

▫️ಉತ್ತರ: ಹೌದು. ಅದಕ್ಕೆ ಎರಡು ಕಾರಣಗಳಿವೆ, ಅವರು ಉದ್ದಿನಬೇಳೆ ಬಳಸುತ್ತಿರಲಿಲ್ಲ ಮತ್ತು ನಮ್ಮಷ್ಟು ನಿರಂತರವಾಗಿ ಸೇವಿಸುತ್ತಿರಲಿಲ್ಲ.
ಬ್ರಿಟೀಷರ ಆಗಮನದ ನಂತರ ಭಾರತದಲ್ಲಿ ಈ ಪದ್ಧತಿ ಜಾರಿಗೆ ಬಂದಿದೆ. ಹೆಚ್ಚು ಕಡಿಮೆ ಅವರ ಎಲ್ಲಾ ಜೀವನ ಶೈಲಿಯನ್ನು ನಾವು ಅನುಕರಿಸಿರುವ ಕಾರಣ ಹುಳಿಬರಿಸುವ ವಿಧಾನದಿಂದ ತಯಾರಾದ ಇಡ್ಲಿ-ದೋಸೆಗಳು, ಮತ್ತು ಬೇಕರಿಗಳು ಚಾಲ್ತಿಗೆ ಬಂದವು. ಅವರ ದೇಶದಲ್ಲಿ ಮಾನವ ಜೀವಿಸಲು ಆಲ್ಕೋಹಾಲ್ ಸೇವನೆ, ಬ್ರೆಡ್-ಬಿಸ್ಕೆಟ್ ಸೇವನೆ, ಮನೆಯೊಳಗೆ ಅಗ್ಗಿಷ್ಟಿಕೆಯಿಂದ ಅಥವಾ ಹೀಟರ್ ಗಳಿಂದ ಮನೆಯ ಆಂತರಿಕವನ್ನು ವಾತಾವರಣವನ್ನು ಬೆಚ್ಚಗಿಟ್ಟುಕೊಳ್ಳುವುದು, ನೆಕ್ ಟೈ, ಕೋಟು, ಸಾಕ್ಸ್ , ಶೂ ಧರಿಸುವುದು ಮುಂತಾದವುಗಳು ಅತ್ಯಂತ ಅನಿವಾರ್ಯ. ದುರದೃಷ್ಟವಶಾತ್ ಟೈ-ಕೋಟು-ಬೂಟುಗಳನ್ನು ಸುಡುವ ಬಿಸಿಲಿನಲ್ಲೂ ಧರಿಸುವ ನಾವು ಬ್ರೆಡ್-ಬಿಸ್ಕೆಟ್-ದೋಸೆಗಳನ್ನೂ ಅನುಕರಣೆ ಮಾಡುತ್ತಿದ್ದೇವೆ.

▪️ಪ್ರಶ್ನೆ 2: ಉದ್ದಿನಬೇಳೆ ಇಷ್ಟೊಂದು ಹಾನಿಕರವೇ?
▫️ಉತ್ತರ: ಸ್ವಭಾವತಃ ಉದ್ದಿನಬೆಳೆಯು ಪುರೀಷವನ್ನು (ಮಲ) ಹೆಚ್ಚಿಸುತ್ತದೆ. ಅತಿಸಾರವಾಗಿ ಮಲಕ್ಷಯವಾದಾಗ, ಜೀರ್ಣಶಕ್ತಿಗೆ ಬಲ ಕುಂದಿರುವಾಗ ಔಷಧಿ ರೂಪದಲ್ಲಿ “ಮಾಷವನ್ನು (ಉದ್ದಿನಬೆಳೆ)” ಕೊಟ್ಟು ಮಲವನ್ನು ವೃದ್ಧಿಸಿ ಅಗ್ನಿ/ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತೇವೆ.

ನೇರ “ಮಾಷ”ವನ್ನು ಸೇವಿಸದೇ “ಮಹಾಮಾಷ ತೈಲ, ಮಾಷಬಲಾದಿ ಚೂರ್ಣ…..” ಮುಂತಾದ ಔಷಧಿಗಳ ರೂಪದಲ್ಲಿ ತಯಾರಿಸಿ ಮಾಂಸಖಂಡಗಳನ್ನು, ಮೇದಸ್ಸನ್ನು(ಕೊಬ್ಬು) ಹೆಚ್ಚಿಸಲು ಬಳಸುತ್ತೇವೆ.
ಆದರೆ, ಉದ್ದಿನಬೇಳೆಯನ್ನು (fermentation) ಕಿಣ್ವೀಕರಣಗೊಳಿಸಿ ಬಳಸಿದರೆ ಅದು ಮಾಂಸಮೇದಸ್ಸುಗಳನ್ನು ವೃದ್ಧಿಸುವ ಬದಲು ಶೀಘ್ರದಲ್ಲೇ ಶಕ್ತಿಯ ರೂಪದಲ್ಲಿ ಪರಿವರ್ತನೆಯಾಗುತ್ತದೆ. ಅದನ್ನೇ, ಸಾಮಾನ್ಯ ಜನರು heat ಎಂದು ಕರೆಯುತ್ತಾರೆ. ಹಾಗಾಗಿ, ಈ ರೂಪದಲ್ಲಿ ಬಳಸಲು ಉದ್ದಿನಬೇಳೆ ನಿಷಿದ್ಧವಾಗಿದೆ.

▪️ಪ್ರಶ್ನೆ 3: ಧ್ರುವ ಪ್ರದೇಶಗಳಲ್ಲಿ ಕಿಣ್ವೀಕರಣಗೊಂಡ ಆಹಾರ ಏಕೆ ಸೂಕ್ತ?
▫️ಉತ್ತರ : ಕಿಣ್ವೀಕರಣದ ಪ್ರಕ್ರಿಯೆಯಲ್ಲಿ ಆಲ್ಕೋಹಾಲ್ ಉತ್ಪತ್ತಿಯಾಗುವುದರಿಂದ ಮತ್ತು ಈ ರೀತಿಯ ಆಹಾರಗಳಿಂದ ಉಷ್ಣತೆಯು ಬಿಡುಗಡೆಯಾಗುವುದರಿಂದ ಅಲ್ಲಿನ ತಂಪು ಹವಾಮಾನಕ್ಕೆ ಇದು ಅನಿವಾರ್ಯವಾಗಿ ಬೇಕಾಗುತ್ತದೆ.

▪️ಪ್ರಶ್ನೆ 4: ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ದೋಸೆಗಳನ್ನು ಬಳಸುತ್ತಿದ್ದರಲ್ಲವೇ?
▫️ಉತ್ತರ: ಹೌದು ಬಳಸುತ್ತಿದ್ದರು. ಅದು, ಮಲೆನಾಡು ಭಾಗದಲ್ಲಿ ನೀರ್ ದೋಸೆಯಾಗಿಯೂ , ಉತ್ತರಕರ್ನಾಟಕದಲ್ಲಿ ಜೋಳದ ದೋಸೆಯಾಗಿಯೂ, ಮೈಸೂರು ಪ್ರಾಂತ್ಯದಲ್ಲಿ ರಾಗಿದೋಸೆಯಾಗಿಯೂ, ವಾಯುವ್ಯ ಭಾರತದ ಭಾಗದಲ್ಲಿ ಗೋಧಿ ದೋಸೆಯಾಗಿಯೂ ಬಳಕೆಯಾಗುತ್ತಿತ್ತೇ ವಿನಃ ಈಗಿನ ಉದ್ದು ಹಾಕಿದ ಮಸಾಲೆದೋಸೆ ಆಗಿರಲಿಲ್ಲ.

▪️ಪ್ರಶ್ನೆ 5: ನಿಮ್ಮ ಹಿಂದಿನ ಸಂದೇಶಗಳನ್ನು ಓದಿ ಉದ್ದಿನ ಬಳಕೆಯನ್ನು ಬಿಟ್ಟನಂತರ ಹೊಟ್ಟೆಯುಬ್ಬರ ಕಡಿಮೆಯಾಗಿದೆ ಮತ್ತು ಶರೀರ ಹಗುರವಾಗಿದೆ. ಇದಕ್ಕೆ ಸಂಬಂಧವಿದೆಯೇ?
▫️ಉತ್ತರ: ಖಂಡಿತ ಇದೆ. ಅಗ್ನಿಯಿಂದ ಜೀರ್ಣಕ್ಕೆ ಕಷ್ಟವಾಗುವ ಉದ್ದು , ತಾನು ಸ್ವತಃ ವಿಭಜನೆಗೊಂಡು ಗ್ಯಾಸ್ ಅನ್ನು ಬಿಡುಗಡೆಗೊಳಿಸುತ್ತದೆ (ಮೊಳಕೆಕಾಳುಗಳಂತೆ) ಹಾಗಾಗಿ , ಹೊಟ್ಟೆಯುಬ್ಬರ ಉಂಟಾಗುವುದು ಸಹಜ.
ಉದರದಲ್ಲಿ ವಾತ ಸಂಚಯವಾದಾಗ ಶರೀರದ ಸಂಧುಗಳು, ಮಾಂಸಖಂಡಗಳು ಜಡತ್ವ ಅನಿವಾರ್ಯವಾಗುತ್ತದೆ. ಹಾಗಾಗಿ, ಇಡ್ಲಿ-ದೋಸೆಗಳನ್ನು ಬಿಟ್ಟ ನಂತರ ಹೊಟ್ಟೆಯುಬ್ಬರ,ಜಡತ್ವ ಕಡಿಮೆಯಾಗುತ್ತದೆ.


ಓದುಗರಲ್ಲಿ ಇನ್ನೇನಾದರೂ ಪ್ರಶ್ನೆಗಳಿದ್ದಲ್ಲಿ ಕೇವಲ ಇಪ್ಪತ್ತೊಂದು ದಿನಗಳ ಕಾಲ ಇಡ್ಲಿ-ದೋಸೆಗಳನ್ನು ನಿಲ್ಲಿಸಿದರೆ ಅವರ ಶರೀರದಲ್ಲಾಗುವ ಆರೋಗ್ಯಕರ ಬದಲಾವಣೆಗಳೇ ಅವರಿಗೆ ಉತ್ತರಗಳನ್ನು ಹೇಳುತ್ತವೆ.

ಅತ್ಮೀಯರೇ,
ಕೆಲಕಾಲ ಉದ್ದು ರಹಿತ ಇಡ್ಲಿ-ದೋಸೆಗಳನ್ನು ಸೇವಿಸೋಣ
⬇️
ಇತರರಿಗೂ ಈ ಹಾದಿಯನ್ನು ಪ್ರೋತ್ಸಾಹಿಸೋಣ
⬇️
🤝
ಸ್ವಸ್ಥ ಸಮಾಜವನ್ನು ಕಟ್ಟೋಣ.
🇮🇳

  ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
                 ಹಾಗೆಯೇ 
     ಸ್ವಾಸ್ಥ್ಯ ಸರ್ವರದ್ದೂ ಆಗಲಿ

ನಿಮ್ಮ ಸಂಪರ್ಕಕ್ಕೆ
📞 9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda

Admin

Leave a Reply

Your email address will not be published. Required fields are marked *

error: Content is protected !!