ಶಿಕಾರಿಪುರ: ಆಕ್ರಮ ಗಾಂಜಾ ಮಾರಟ ಯತ್ನ ಆರೋಪಿಗಳ ಬಂಧನ..!

ಶಿಕಾರಿಪುರ: ಆಕ್ರಮ ಗಾಂಜಾ ಮಾರಟ ಯತ್ನ ಆರೋಪಿಗಳ ಬಂಧನ..!

ಶಿಕಾರಿಪುರ : ಆಕ್ರಮ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ 03 ಆರೋಪಿಗಳನ್ನು ಶಿಕಾರಿಪುರ ಪೋಲಿಸರು ಬಂಧಿಸಿದ್ದಾರೆ.

1 ಕೆ.ಜಿ 240 ಗ್ರಾಂ ತೂಕದ ಮಾದಕ ವಸ್ತು ಗಾಂಜಾ, ಅಂದಾಜು ಮೌಲ್ಯ ರೂ 27,000/- ಹಾಗೂ ದ್ವಿ ಚಕ್ರ ವಾಹನ ವಶ ಪಡಿಸಿಕೊಂಡು ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿದ್ದಾರೆ.

ಶಿಕಾರಿಪುರಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಆಶ್ರಯ ಬಡಾವಣೆಯ ಹತ್ತಿರ ಆರೋಪಿಗಳು ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ದ್ವಿ ಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರಗೆ ಗಾಂಜಾ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

ಶ್ರೀನಿವಾಸಲು, ಎ.ಎಸ್.ಪಿ ಮಾರ್ಗದರ್ಶನದಲ್ಲಿ
ಗುರುರಾಜ್‌ ಮೈಲಾರ್ ಸಿಪಿಐ, ನೇತೃತ್ವದಲ್ಲಿ ರಾಜುರೆಡ್ಡಿ ಬೆನ್ನೂರ್,ಪಿಎಸ್ಐ, ಟೌನ್ ಪೊಲೀಸ್ ಠಾಣೆ ಹಾಗೂ
ಸಿಬ್ಬಂದಿಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಆರೋಪಿತರಾದ ಅಜ್ಜಪ್ಪ 60 ವರ್ಷ ವಾಸ ಕೆಂಚಗೊಂಡನಕೊಪ್ಪ,
ಸಂಜಯ 20 ವರ್ಷ ಶಿಕಾರಿಪುರ,ಪವನ 22 ವರ್ಷ ಶಿಕಾರಿಪುರ ಬಂದಿಸಿದ್ದು ಕಾನೂನು ಸಂಘರ್ಷಕ್ಕೊಳಗಾದ ಒಬ್ಬ ಬಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿಗಳಿಂದ 1 ಕೆ.ಜಿ 240 ಗ್ರಾಂ ತೂಕದ ಮಾದಕ ವಸ್ತು ಗಾಂಜಾ ಅಂದಾಜು ಮೌಲ್ಯ ರೂ 27,000/- ಒಂದು ದ್ವಿ ಚಕ್ರ ವಾಹನ ಅಂದಾಜು ಮೌಲ್ಯ ರೂ 75,000/- ವಶ ಪಡಿಸಿಕೊಂಡು ಎನ್ ಡಿಪಿಎ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!