ಶಿಕಾರಿಪುರ ಪುರಸಭೆಗೆ ಯಾರಾಗಲಿದ್ದಾರೆ ಅಧ್ಯಕ್ಷರು- ಉಪಾಧ್ಯಕ್ಷರು..?
ಶಿಕಾರಿಪುರ ಪಟ್ಟಣದ ಪುರಸಭೆ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಒಂದುವರೆ ವರ್ಷಗಳ ನಂತರ ಸರ್ಕಾರ ಮೀಸಲಾತಿ ಘೋಷಣೆ ಮಾಡಿದ್ದು ಆ.21 ರಂದು ಚುನಾವಣೆ ನಡೆಯಲಿದೆ.
2019ರಲ್ಲಿ ಪುರಸಭೆ 23 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿತ್ತು ಕಾಂಗ್ರೆಸ್ 12 ಸ್ಥಾನ, ಬಿಜೆಪಿ -8 ಸ್ಥಾನ, ಪಕ್ಷೇತರರು 3 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದರು.
ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುತ್ತದೆ ಎನ್ನುವಷ್ಟರಲ್ಲಿ ರಾಜ್ಯಮಟ್ಟದಲ್ಲಿ ರಾಜಕೀಯ ಬದಲಾವಣೆ ಪರಿಣಾಮ ಶಿಕಾರಿಪುರ ಪುರಸಭೆ ಮೇಲೆ ಬಿರಿತ್ತು.
ಕಾಂಗ್ರೆಸ್ ಮೂರು ಜನ ಸದಸ್ಯರು ರಾಜನಾಮೆ ನೀಡಿದ ಪರಿಣಾಮ ಬಿಜೆಪಿ ಪಕ್ಷದ 8- ಸದಸ್ಯರು ಮತ್ತು ಮೂರು ಜನ ಪಕ್ಷೇತರರು ಸಂಸದ ಬಿವೈ ರಾಘವೇಂದ್ರ ಒಂದು ಮತಗಳೊಂದಿಗೆ ಬಹಮತ ಪಡೆದು ಬಿಜೆಪಿ ಅಧಿಕಾರಕ್ಕೆ ತರಲಾಯಿತು.
ಉಪ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಲ:
ಕಾಂಗ್ರೆಸ್ ಗೆ ರಾಜಿನಾಮೆ ನೀಡಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ ರಮೇಶ್ ಗುಂಡ, ಉಮಾವತಿ ಅವರು ಗೆಲುವುದು ಸಾಧಿಸಿದರು. ಬಿಜೆಪಿಯ ಜ್ಯೋತಿ ಸಿದ್ಧಲಿಂಗೇಶ್ ವಿರುದ್ಧ ಶೈಲಾ ಯೋಗೇಶ್ ಪಕ್ಷೇತರರಾಗಿ ಗೆಲುವು ಸಾಧಿಸಿದ್ದರು. ನಂತರ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
ಮೊದಲ ಅವಧಿಯಲ್ಲಿ ಲಕ್ಷ್ಮಿ ಮಹಾಲಿಂಗಪ್ಪ ಅಧ್ಯಕ್ಷರಾಗಿದ್ದು ಉಪಾಧ್ಯಕ್ಷರಾಗಿ ಮೊಹಮ್ಮದ್ ಸಾಧಿಕ್ ಅವರು ಅಧಿಕಾರ ನಡೆದಿದರು. ನಂತರ ಉಳಿದ ಅವಧಿಗೆ ಸ್ವತಂತ್ರ ಅಭ್ಯರ್ಥಿಯಾಗಿದ ರೇಖಾಬಾಯಿ ಮಂಜುಸಿಂಗ್ ಅವರು ಅಧ್ಯಕ್ಷರಾಗಿ ಶೈಲಾ ಯೋಗೇಶ್ ಉಪಾಧ್ಯಕ್ಷರಾಗಿದ್ದರು.
ಯಾರಾಗಲಿದ್ದಾರೆ ನೂತನ ಅಧ್ಯಕ್ಷ/ಉಪಾಧ್ಯಕ್ಷರು..?
ಶಿಕಾರಿಪುರ ಪುರಸಭೆ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ಘೋಷಣೆಯಾಗಿದ್ದರು ಸುನಂದಾ ಮಂಜುನಾಥ ಬಾಳೆಕಾಯಿ ಅವರು ಪ್ರಭಲ ಆಕಾಂಕ್ಷಿಯಾಗಿದ್ದಾರೆ. ಇನ್ನೂ ಶೈಲಾ ಯೋಗೇಶ್ ಅವರು ಕೂಡ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನೀಡುತ್ತಿದ್ದು ಇಬ್ಬರಲ್ಲಿ ಯಾರಾಗಲಿದ್ದಾರೆ ಎಂದು ಕುತೂಹಲ ಮೂಡಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ ಎ ಮಹಿಳೆ ಮೀಸಲಾಗಿದ್ದು ರೂಪ ಮಂಜುನಾಥ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಂಸದ ಬಿ ವೈ ರಾಘವೇಂದ್ರ ನೇತೃತ್ವದಲ್ಲಿ ನಾಳೆ ಬಿಜೆಪಿ ಪಕ್ಷದ ಕಛೇರಿಯಲ್ಲಿ ಸಭೆ ನಡೆಸಿ ಅಧ್ಯಕ್ಷ ಉಪಾಧ್ಯಕ್ಷರನ್ನು ಅಂತಿಮ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.