ಶಿರಾಳಕೊಪ್ಪ ಪುರಸಭೆ ಬಿಜೆಪಿಯಿಂದ ಕಾಂಗ್ರೆಸ್ ತೆಕ್ಕೆಗೆ ಬಿಜೆಪಿ ಸುದೀರ್ಘ ಆಡಳಿತಕ್ಕೆ ಬ್ರೇಕ್..!
ಶಿರಾಳಕೊಪ್ಪ: ಪಟ್ಟಣ ಪಂಚಾಯಿತಿ ಪುರಸಭೆ ಆಗಿ ಮೇಲ್ದರ್ಜೆಗೇರಿದ ನಂತರ ಮೊದಲ ಬಾರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬುಧವಾರ ನಡೆದಿದ್ದು 25 ವರ್ಷದ ರಾಜಕೀಯ ಇತಿಹಾಸ ಬ್ರೇಕ್ ಕಾಂಗ್ರೆಸ್ ಬ್ರೇಕ್ ಹಾಕಿದೆ.
ಬಿಜೆಪಿ ಸುದೀರ್ಘ ಆಡಳಿತಕ್ಕೆ ಬ್ರೇಕ್:
ಕಳೆದ 25 ವರ್ಷಗಳಿಂದ ಶಿರಾಳಕೊಪ್ಪ ಪಟ್ಟಣದ ಪಂಚಾಯತಿ ಬಿಜೆಪಿ ಪಕ್ಷ ಆಡಳಿತ ನಡೆಸಿಕೊಂಡು ಬಂದಿತ್ತು. ಕಾಂಗ್ರೆಸ್ ಮುಖಂಡ ಎಸ್ ಪಿ ನಾಗರಾಜ್ ಗೌಡ ಅವರು ಬಿಜೆಪಿ ಹಿಡಿತದಲ್ಲಿದ ಶಿರಾಳಕೊಪ್ಪ ಪುರಸಭೆಯನ್ನು ಕಾಂಗ್ರೆಸ್ ತೆಕ್ಕೆಗೆ ತಂದಿದ್ದಾರೆ.
17 ಸದಸ್ಯ ಬಲ ಹೊಂದಿರುವ ಪುರಸಭೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು 10 ಸ್ಥಾನಗಳನ್ನು ಗೆದ್ದಿದ್ದವು. 5 ಜನ ಪಕ್ಷೇತರರು ಗೆಲವು ಸಾಧಿಸಿದ್ದರು. ಬಿಜೆಪಿ 2 ಸ್ಥಾನಗಳಲ್ಲಿ ಮಾತ್ರ ಗೆದಿತ್ತು.
2 ಸ್ಥಾನ ಗೆದಿದ್ದ ಬಿಜೆಪಿ ಅಧಿಕಾರ:
ಕೆವಲ ಎರಡು ಸ್ಥಾನ ಗೆದಿದ್ದ ಬಿಜೆಪಿ
ಸಂಸದ ಬಿ.ವೈ.ರಾಘವೇಂದ್ರ ಅವರು ಛಲಬಿಡದೆ ಪಕ್ಷೇತರರನ್ನು ಒಳಗೊಂಡು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದರು.
ಈ ಬಾರಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಎ’ಗೆ ಮೀಸಲಾಗಿದೆ. ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಮತಾ ನಿಂಗಪ್ಪ ಹಾಗೂ ಉಪಾಧ್ಯಕ್ಷರಾಗಿ ಮುದಾಸಿರ್ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
ಸುದೀರ್ಘ ಬಿಜೆಪಿ ತೆಕ್ಕೆಯಲಿದ ಶಿರಾಳಕೊಪ್ಪ ಪುರಸಭೆ ಈಗ ಕಾಂಗ್ರೆಸ್ ಪಾಲಗಿದ್ದು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.