ಮೂಳೆ ಸವೆತ ಹೇಗೆ ಏಕೆ ಪರಿಹಾರ..!

ಮೂಳೆ ಸವೆತ ಹೇಗೆ ಏಕೆ ಪರಿಹಾರ..!

ತತ್ರ ಅಸ್ಥಿ……..ಆಶ್ರಯಿಣಾಂ ಅಥಃ ||
-ವಾಗ್ಭಟ ಸೂತ್ರ ಸ್ಥಾನ

ಯತ್ ದ್ರವ್ಯಂ ಸ್ನಿಗ್ಧಂ ಖರತ್ವ ಶೋಷಣತ್ವಂ ತದ್ ಅಸ್ಥಿನಾಂ ವರ್ಧಯಂತಿ||
_

🔍 ಮೂಳೆಗಳ ಉತ್ಪತ್ತಿ ತಿಳಿಯುವ ಮಹತ್ವವೇನು?
ಉತ್ಪತ್ತಿ ಬಗ್ಗೆ ತಿಳಿಯುವುದರ ಮಹತ್ವ ಏನೆಂದರೆ ಒಂದು ದ್ರವ್ಯದ, ಜೀವಿಯ, ಉತ್ಪತ್ತಿ, ಬೆಳವಣಿಗೆಯ ವಿಧಾನ ಗೊತ್ತಾಗದೇ, ಯಾವುದೇ ಸಮಸ್ಯೆ ಅರ್ಥವಾಗುವುದಿಲ್ಲ.

ಆಹಾರದಲ್ಲಿನ ಕೊಬ್ಬಿನಅಂಶ ಉದರದಲ್ಲಿ (ಪಾಚಕಾಗ್ನಿ ಭೂತಾಗ್ನಿಗಳಿಂದ) ಸರಿಯಾಗಿ ವಿಭಜನೆಗೊಂಡು, ರಕ್ತವನ್ನು ಸೇರಿ ಎಲ್ಲಾ ಅವಯವಗಳನ್ನು ತಲುಪುತ್ತಿರುವಾಗ, ಅದು ಅಸ್ಥಿ-ಮಜ್ಜಾ ಧಾತ್ವಾಗ್ನಿಯ(The enzymes which helps in production of bone and bonemarrow) ಸಂಪರ್ಕಕ್ಕೆ ಬಂದಾಗ ನಡೆಯುವ ವಿಶೇಷ ಕ್ರಿಯೆಯಿಂದ ಮೂಳೆ ಉತ್ಪತ್ತಿಯಾಗುತ್ತದೆ.
★ ಉದಾ: ಮಣ್ಣು+ನೀರನ್ನು ಕಲಸಿ, ಒಂದು ಆಕಾರ ಕೊಟ್ಟು ಗಾಳಿಯಿಂದ ಒಣಗಲು ಬಿಟ್ಟಾಗ ಅದು ಗಟ್ಟಿಯಾಗಿ ಕಠಿಣತ್ವ ಪಡೆಯುವಂತೆ, ಶುದ್ಧ ಕೊಬ್ಬಿನಅಂಶವನ್ನು ವಾತವು ಹೀರಿಕೊಂಡು ಒಣಗಿಸಲು ಆರಂಭಿಸುತ್ತದೆ, ಮತ್ತು ಹೀರಿಕೊಂಡ ಸ್ನೇಹಾಂಶವನ್ನು ಮೂಳೆಯ ಮಧ್ಯದಲ್ಲಿರಿಸುತ್ತದೆ.


ಇದಕ್ಕೆ ಸಾರ ಅಥವಾ ಸರಕ್ತ ಮೇದ ಎಂಬ ಹೆಸರು, ಈ ಅಂಶಕ್ಕೆ ವಿಶೇಷ ಜೀವಾಂಶ ಸೇರಿದೊಡನೆ ಇದನ್ನೇ ಮಜ್ಜಾ ಎಂದು ಕರೆಯುತ್ತೇವೆ. ಇದು ಪರಿಪಕ್ವವಾಗಿ (ಜಲಾಂಶವನ್ನು ಕಳೆದುಕೊಂಡು ಬೆಣ್ಣೆ ತುಪ್ಪವಾದಂತೆ) ಅತ್ಯಂತ ಸಾರಭೂತ ಸ್ನೇಹವಾಗಿ ಸಶಕ್ತವಾಗುತ್ತದೆ. ಆಗ ಸದೃಢ ಮೂಳೆ ಉತ್ಪತ್ತಿಯಾಗುತ್ತದೆ. ಒಳಗೆ ಸ್ನೇಹಾಂಶ ಸರಿಯಾಗಿ ತುಂಬದ ಮೂಳೆಯನ್ನು “ಆಷ್ಟಿಯೋ ಪೊರೋಸಿಸ್” ಎನ್ನಬಹುದು.
ಇರಲಿ ಮೂಳೆಯ ಹೊರಭಾಗ ಒಣಗಿದ ಗಡುಸಾದ ಸ್ನೇಹದಿಂದಲೂ, ಒಳಭಾಗ ಸಶಕ್ತ ಸಾರಭೂತ ಸ್ನೇಹದಿಂದಲೂ ನಿರಂತರ ಜೊತೆಯಾಗಿರುತ್ತವೆ.

ಮೂಳೆ ಕೆವಲ ಗಟ್ಟಿ ವಸ್ತುವಲ್ಲ, ಹೊರಗೆ ಕಠಿಣ ಒಳಗೆ ಅತ್ಯಂತ ಆರ್ದ್ರ ಸಂಯೋಗ ಉಳ್ಳ ಮತ್ತು ದೇಹದ ಯಾವುದೇ ಭಾಗವನ್ನು ಪರ್ಯಾಯವಾಗಿ ಉತ್ಪತ್ತಿ ಮಾಡಬಲ್ಲ ಮೂಲವಸ್ತು ಅಥವಾ stem cell ಎಂದು ಕರೆಸಿಕೊಳ್ಳುತ್ತದೆ..

ಇನ್ನೂ ವಿಶೇಷ ಎಂದರೆ ತನ್ನಂತಹುದೇ ಇನ್ನೊಂದು ಜೀವಿಯನ್ನುಂಟುಮಾಡುವುದೂ ಸಹ ಮಜ್ಜಾಧಾತುವೇ!! ಹೌದು ಸತ್ಯ ಏನೆಂದರೆ ನಮ್ಮ ವೀರ್ಯಾಣು, ಅಂಡಾಣುಗಳು ಉತ್ಪತ್ತಿಯಾಗುವ ಮೂಲಸ್ಥಾನ ಅಸ್ಥಿಯಿಂದ ರಕ್ಷಿಸಲ್ಪಟ್ಟ ಮಜ್ಜಾಧಾತುವೇ ಆಗಿದೆ!! (ಇದನ್ನು ಮುಂದೆ ನೋಡೋಣ…..)

ಅಂದರೆ ಮೂಳೆ ಸವೆತವನ್ನು ಹಗುರವಾಗಿ ಪರಿಗಣಿಸುವಂತಹುದಲ್ಲ. ಚಿಕ್ಕವಯಸ್ಸಿನಲ್ಲೇ ಮೂಳೆಸವೆತವನ್ನು ನೋಡುತ್ತಿದ್ದೇವೆ, ಇನ್ನು ಅವರ ಮುಂದಿನ ಪೀಳಿಗೆ ಕಥೆ ಏನು?

🤔 ಸವೆಯಲು ಕಾರಣಗಳೇನು?
ಮೂಳೆ ಉತ್ಪತ್ತಿ ಶುದ್ಧ ಕೊಬ್ಬಿನಿಂದಲೇ ಆದರೂ ಕೇವಲ ಕೊಬ್ಬಿನ ಅಂಶ ಸೇವನೆ ಮಾಡುತ್ತಿದ್ದರೆ, ಅದನ್ನು ಒಣಗಿಸಿ ಗಟ್ಟಿಗೊಳಿಸುವವರು ಯಾರು? ಆದ್ದರಿಂದ ,
ಶುದ್ಧ ಕೊಬ್ಬಿನ ಅಂಶವಾದ ತುಪ್ಪದಿಂದ ಮಾತ್ರ ಸದೃಢ ಮೂಳೆಗೆ ಸಹಾಯಕ. ಇಷ್ಟನ್ನು ಮಾತ್ರ ಹೇಳಿದರೆ ಸಾಕಾಗದು. ಯಾವ ತುಪ್ಪವೂ ಚಟುವಟಿಕೆ ಮಾಡದ ಜೀವಿಯಲ್ಲಿ ಮೂಳೆಯಾಗಿ ಪರಿವರ್ತನೆಯಾಗುವುದಿಲ್ಲ, ಶಾರೀರಿಕ ವ್ಯಾಯಾಮದಿಂದ ಅದನ್ನು ಒಣಗಿಸಿದರೆ ಮಾತ್ರ ಅದು ಗಟ್ಟಿಯಾಗಿ ಮೂಳೆಯಾಗುವುದು.
👇
ಬಾಲ್ಯದಿಂದಲೂ ಹಾಲು, ಬೆಣ್ಣೆ, ತುಪ್ಪ ತಿನ್ನಿಸದಿರುವುದು ಮತ್ತು ಮಕ್ಕಳನ್ನು ಆಟವಾಡಲು ಬಿಡದಿರುವುದು ಅಥವಾ ಮಕ್ಕಳು ಕೇವಲ ವಿಡಿಯೋ, ಮೊಬೈಲ್, ಟಿ.ವಿ ಮುಂದೆ ಚಟುವಟಿಕೆ ಇಲ್ಲದೇ ಕುಳಿತುಕೊಳ್ಳುವುದು. ಸವೆತಕ್ಕೆ ಕಾರಣ.

ಇದರ ಹೊರತು ಜಾಹಿರಾತು ನೋಡಿ ಏನು ತಿನ್ನಿಸಿದರೂ ನಮ್ಮ ಮಕ್ಕಳ ಮೂಳೆ ಉದ್ದ, ಗಟ್ಟಿಯಾಗದು.

ಇಂದಿನ ಸಮಸ್ಯೆ ಏನೆಂದರೆ, ಏನನ್ನು ತಿಂದರೆ ಮೂಳೆಗೆ ಒಳ್ಳೆಯದು?! ಎಂದು ಕೇಳುವುದು, ಅದನ್ನು ತಿನ್ನುವುದು!!!
ನೆನಪಿಡಿ, ವ್ಯಾಯಾಮವಿಲ್ಲದೇ ಏನು ತಿಂದರೂ ಮೂಳೆ ಬೆಳೆಯದು, ಸವೆತ ನಿಲ್ಲದು.

ಇಂದಿನ ಸಮಸ್ಯೆ ಏನೆಂದರೆ, ಏನನ್ನು ತಿಂದರೆ ಮೂಳೆಗೆ ಒಳ್ಳೆಯದು?! ಎಂದು ಕೇಳುವುದು, ಅದನ್ನು ತಿನ್ನುವುದು!!!
ನೆನಪಿಡಿ, ವ್ಯಾಯಾಮವಿಲ್ಲದೇ ಏನು ತಿಂದರೂ ಮೂಳೆ ಬೆಳೆಯದು, ಸವೆತ ನಿಲ್ಲದು.

ಈ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಹೆಚ್ಚೋ ಅಷ್ಟು ಸದೃಢ, ಸಶಕ್ತ. ಮತ್ತು
ಮೂಳೆಯೇ ನಮ್ಮ ಮಕ್ಕಳ ಮುಂದಿನ ಪೀಳಿಗೆಯ, ಮುಂದಿನ ತಲೆಮಾರಿನ ಆರೋಗ್ಯದ ಬುನಾದಿಯಾಗಿದೆ.

ಇನ್ನೂ ಒಂದೆರೆಡು ಸಂಚಿಕೆಯಲ್ಲಿ, ಮೂಳೆ ವಿಷಯವನ್ನು ವಿಶದವಾಗಿ ಚರ್ಚಿಸೋಣ.

– ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!