ಶಿಕಾರಿಪುರ ಪುರಸಭೆಯಲ್ಲಿ ಭೂ ಪರಿವರ್ತನೆ ಬ್ರಹ್ಮಾಂಡ ಭ್ರಷ್ಟಾಚಾರ:ಗೋಣಿ ಪ್ರಕಾಶ್ ಆರೋಪ

ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಗೇಟ್ ಪಾಸ್ : ರಮೇಶ್ ಗುಂಡ ಆರೋಪ..!
Facebook
Twitter
LinkedIn
WhatsApp

ಶಿಕಾರಿಪುರ : ಪಟ್ಟಣದ ಪುರಸಭಾ ವ್ಯಾಪ್ತಿಯ ಜಮೀನು ಭೂ ಪರಿವರ್ತನೆ ಎನ್ ಓ ಸಿ ನೀಡಲು ಪುರಸಭಾ ಮುಖ್ಯಾಧಿಕಾರಿಗಳ ಹಾಗೂ ನಿಕಟಪೂರ್ವ ಅಧ್ಯಕ್ಷರ ಅವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಪುರಸಭಾ ಸದಸ್ಯ ಗೋಣಿ ಪ್ರಕಾಶ್ ಗಂಭೀರವಾಗಿ ಆರೋಪಿಸಿದ್ದಾರೆ.

ಪುರಸಭಾ ಸಭಾಂಗಣದಲ್ಲಿ ಗುರುವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಪಟ್ಟಣದ ಪುರಸಭೆಗೆ ಒಳಪಡುವ ರೈತರು ನಿವೇಶನೆ ಭೂ ಪರಿವರ್ತನೆ ಏನ್ ಓ ಸಿ‌ ನೀಡಲು ತಮ್ಮ ಜಮೀನುಗಳ ದಾಖಲೆ ಸಹಿತ ಪುರಸಭೆಗೆ ಅರ್ಜಿ ಸಲ್ಲಿಸಿದರೆ ಅಂತಹ ರೈತರಿಂದ ಒಂದು ಎಕರೆಗೆ ಕನಿಷ್ಠ 4 ಲಕ್ಷದಂತೆ 19 ಎಕರೆಗೆ 70 ರಿಂದ 80 ಲಕ್ಷದವರೆಗೆ ಹಣ ಪಡೆದು ನಿಕಟ ಪೂರ್ವ ಅಧ್ಯಕ್ಷರನ್ನು ಒಳಗೊಂಡಂತೆ ಮುಖ್ಯಾಧಿಕಾರಿಗಳು ಸೇರಿ ಸಭೆಗೆ ಹಾಗೂ ಸದಸ್ಯರಿಗೆ ಯಾವುದೇ ರೀತಿಯ ಮಾಹಿತಿ ನೀಡದೆ ಈ ಅವ್ಯವಹಾರ ನಡೆಸಿದ್ದಾರೆ.

ರೈತರಿಗೆ ಉಚಿತವಾಗಿ ಭೂ ಪರಿವರ್ತನೆ ಮಾಡಿಕೊಡಬೇಕಾಗಿದ್ದ ಮುಖ್ಯ ಅಧಿಕಾರಿಗಳೇ ಇಂತಹ ಭ್ರಷ್ಟಾಚಾರವನ್ನು ನಡೆಸಿದ್ದು ಪುರಸಭಾ ಸದಸ್ಯರಾಗಿರುವ ನಮಗೆ ಕಳೆದ ಐದಾರು ವರ್ಷಗಳಿಂದ ವರ್ಷಗಳಿಂದ ಇಲ್ಲಿಯವರೆಗೂ ಯಾವ ಯಾವ ರೈತರಿಂದ ಭೂ ಪರಿವರ್ತನೆಗೆ ಎಷ್ಟೆಷ್ಟು ಹಣ ಪಡೆದಿದ್ದೀರಿ ಎಂದು ಸಭೆಗೆ ತಿಳಿಸಬೇಕು ಎಂದು ಪ್ರಶ್ನಿಸಿದರು.

ಪ್ರತಿಕ್ರಿಸಿದ ಮುಖ್ಯಾಧಿಕಾರಿ ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಹಾರಿಕೆ ಉತ್ತರ ನೀಡಿದಾಗ ಇದಕ್ಕೆ ಪ್ರತಿಕ್ರಿಯಿಸಿದ ರೋಷನ್ ಹಾಗೂ ನಾಮಿನಿ ಸದಸ್ಯ ಸುರೇಶ್ ಧಾರವಾಡ ಯಾವುದೇ ವಿಚಾರವೂ ಮುಖ್ಯಾಧಿಕಾರಿಗಳಿಗೆ ತಿಳಿಯದಂತೆ ಭೂ ಪರಿವರ್ತನೆ ಆಗುತ್ತಿದೆ ಎಂದು ಮರು ಪ್ರಶ್ನಿಸಿದಾಗ ಮುಖ್ಯ ಅಧಿಕಾರಿಗಳು ಭೂ ಪರಿವರ್ತನೆಯ ನಿಯಮಾನುಸಾರವಾಗಿಯೇ ನಡೆದಿದೆ ಎಂದು ಉತ್ತರಿಸಿದರು.

ಇದಕ್ಕೆ ಸದಸ್ಯ ಪ್ರಕಾಶ್ ಪ್ರತಿಕ್ರಿಯೆ ನೀಡಿ ನಿಮ್ಮ ನಿಯಮಾನಸಾರ ಏನೇ ಇದ್ದರೂ ಅಧ್ಯಕ್ಷರಾದಿಯಾಗಿ ಆಡಳಿತ ರೂಡ ಪಕ್ಷದ ಕೇವಲ ಐದಾರು ಸದಸ್ಯರ ಪರವಾಗಿ ನಡೆದಿದೆ ವಿರೋಧ ಪಕ್ಷದವರಿಗೆ ಯಾವುದೇ ರೀತಿ ಮಾಹಿತಿ ನೀಡದೆ ಎಲ್ಲಾ ರೀತಿಯ ಕೆಲಸಗಳನ್ನು ನಡೆಸುತ್ತಿದ್ದೀರಿ ಎಂದು ಆಕ್ರೋಶ ಭರಿತರಾಗಿ ಸಭೆಯಲ್ಲಿ ಆರೋಪಿಸಿದಾಗ ಮುಖ್ಯ ಅಧಿಕಾರಿಗಳು ಈ ಬಗ್ಗೆ ಕುಲಂಕುಶವಾಗಿ ಮಾಹಿತಿ ಪಡೆದು ಮುಂದಿನ ಸಭೆಯಲ್ಲಿ ತಿಳಿಸುವುದಾಗಿ ಹೇಳಿದರು.

News By:Raghu Shikari-7411515737