ಶಿಕಾರಿಪುರ ಪಟ್ಟಣದ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗುಂಡಾರವರು ಮಾತನಾಡಿ ಪಟ್ಟಣದ ಹಾಗೂ ತಾಲೂಕಿನ ಅನೇಕ ಖಾಸಗಿ ವಿದ್ಯಾ ಸಂಸ್ಥೆಗಳು ಎಲ್ ಕೆ ಜಿ ಯಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿ ನಂತರಅಂಕಗಳು ಕಡಿಮೆ ಬಂದಿದೆ ಎಂದು 9ನೇ ತರಗತಿಯ ನಂತರ ಎಸ್ ಎಸ್ ಎಲ್ ಸಿ ಗೆ ಹೋಗಬೇಕಿದ್ದ ಅನೇಕ ವಿದ್ಯಾರ್ಥಿಗಳಿಗೆ ಬೇರೆ ಖಾಸಗಿ ಶಾಲೆಗೆ ಅಥವಾ ಸರ್ಕಾರಿ ಶಾಲೆಗೆ ಹೋಗುವಂತೆ ಶಾಲೆಯಿಂದ ವರ್ಗಾವಣೆ ಪತ್ರ ನೀಡಿ ಕಳಿಸಿದ್ದಾರೆ ಎಂದು ಆರೋಪಿಸಿದರು.

ಇದರಿಂದಾಗಿ ಪೋಷಕರು ಹಾಗೂ ವಿದ್ಯಾರ್ಥಿಗಳು ಆತಂಕಕ್ಕೆ ಒಳಪಟ್ಟಿದ್ದಾರೆ ಈ ಬಗ್ಗೆ ಸಭೆಯಲ್ಲಿ ಸದಸ್ಯರು ಏನಾದರೂ ಒಂದು ನಿರ್ಣಯ ಕೈಗೊಳ್ಳಬೇಕು ಎಂದು ಸಭೆಗೆ ಮಂಡಿಸಿದರು.
ಅನೇಕ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳಲ್ಲೂ ಸೀಟು ಸಿಗದೇ ವಿಧ್ಯಾಭ್ಯಾಸದಿಂದ ವಂಚಿತರಾಗುವಂತಾಗಿದೆ. ಇನ್ನೂ ಕೆಲ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಾಗಿದ್ದಾರೆ.

ಖಾಸಗಿ ಶಾಲೆಗಳು 100% ಫಲಿತಾಂಶ ಬರಬೇಕು ತಮ್ಮ ಶಾಲೆಯ ಗೌರವ ಉಳಿಸಿಕೊಂಡು ಹೆಸರು ಮತ್ತು ಹಣ ಮಾಡುವ ಉದ್ದೇಶದಿಂದ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಏಕ ಏಕಿ ಶಾಲೆಗಳಿಂದ ಟಿಸಿ ನೀಡಿ ಹೊರ ಹಾಕುತ್ತಿದ್ದಾರೆ.
ಸಣ್ಣ ವಯಸ್ಸಿನ ವಿದ್ಯಾರ್ಥಿಗಳು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿಗೆ ಒಳಗಾಗಿ ತಂದೆತಾಯಿಗೂ ಕೂಡ ಮಾನಸಿಕವಾಗಿ ನೊಂದಿದ್ದಾರೆ.
ಸರ್ವ ಸದಸ್ಯರು ಅಂತಹ ಅಂತಹ ಶಾಲೆಗಳ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಮತ್ತು ಸಚಿವರಿಗೆ ಪತ್ರ ಬರೆಯುವುದರ ಮೂಲಕ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲು ಸೂಚಿಸಿದ್ದಾರೆ.
News By: Raghu Shikari-7411515737