ಶಿಕಾರಿಪುರ ಪುರಸಭೆಯ ವತಿಯಿಂದ ಶ್ರೀ ಹುಚ್ಚರಾಯಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಿರುವ ಸರ್ವ ಭಕ್ತಾದಿಗಳಿಗೆ ತರಳಬಾಳು ಸಮುದಾಯ ಭವನದಲ್ಲಿ ದಿನಾಂಕ 11.04.2025 ರ ಶುಕ್ರವಾರ ರಾತ್ರಿ ಅನ್ನ ಸಂತರ್ಪಣೆ ವಿತರಣೆ ನಡೆಸಲಾಗುವುದು.

ದಿನಾಂಕ 12.04.2025 ರ ಶನಿವಾರ ಬೆಳಗ್ಗೆ 6: 30ರಿಂದ 11:30ವರೆಗೆ ಉಪಹಾರ ವ್ಯವಸ್ಥೆ ಮತ್ತು ಸಂಜೆ 5:00 ವರೆಗೆ ಪಾನಕ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸರ್ವ ಭಕ್ತಾದಿಗಳು ಆಗಮಿಸಿ ಶ್ರೀ ಹುಚ್ಚರಾಯಸ್ವಾಮಿ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.
ಪಟ್ಟಣದ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ಪಾನಕ,ಮಜ್ಜಗೆ ತಂಪುಪಾನಿಯ ಕುಡಿಯುವ ನೀರು ಇತರೆ ವ್ಯವಸ್ಥೆಯನ್ನು ಕಲ್ಪಿಸಲು ಸಿದ್ದತೆ ನಡೆಸಲಾಗಿದೆ.
News By: Raghu Shikari -7411515737